ಕನ್ನಡ ಚಿತ್ರರಂಗದ ಹೆಸರಾಂತ ನಟರ ಜೊತೆ ನಟಿಸುತ್ತಿದ್ದ ಈ ಮುದ್ದಾದ ಹುಡುಗ ಈಗ ಹೇಗಿದ್ದಾರೆ ಗೊತ್ತಾ. ಇಲ್ಲಿದೆ ಸಂಪೂರ್ಣ ಮಾಹಿತಿ.

0
918

ಜಾಕಿ, ವಂಶಿ, ಧೂಳ್ ಹೀಗೆ ದಿಗ್ಗಜರ ಮೂವಿಯಲ್ಲಿ ನಟನೆ ಮಾಡಿದ್ದ ಖ್ಯಾತನಟನ ಹೆಸರು ಅನಿರುಧ್ಧ ಶಾಸ್ತ್ರಿ. ನಾಲ್ಕು ವರ್ಷದ ಹುಡುಗನಿದ್ದಾಗಲೇ ತನ್ನ ಸಂಗೀತ ಪಯಣವನ್ನು ಶುರುಮಾಡಿದ ಅನಿರುಧ್ಧ ಸರಿಗಮಪದಂತಹ ರಿಯಾಲಿಟಿ ಕಾರ್ಯಕ್ರಮಗಳಲ್ಲೂ ಕಾಣಿಸಿಕೊಂಡಿದ್ದರು. ಸಾವಿರಕ್ಕೂ ಹೆಚ್ಚು ಕಾರ್ಯಕ್ರಮಗಳಲ್ಲಿ ತನ್ನ ಗಾಯನ ಪ್ರದರ್ಶನವನ್ನು ನೀಡಿರುವ ಅನಿರುಧ್ಧ ರವರು ಆಂಧ್ರಪ್ರದೇಶ ಸೇರಿದಂತೆ ದೇಶಾದ್ಯಂತ ಕಾರ್ಯಕ್ರಮಗಳನ್ನು ನೀಡಿದ್ದರು. ಅಲ್ಲದೇ ದುಬೈ ಕನ್ನಡ ಕೂಟ ಹಾಗೂ ಇಟಲಿಯ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಹಾಡಿದ್ದಾರೆ.

25ಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ಹಿನ್ನೆಲೆಗಾಯನ ಮಾಡಿರುವ ಅನಿರುಧ್ಧರವರಿಗೆ ಹೆಚ್ಚು ಪ್ರಖ್ಯಾತಿ ತಂದುಕೊಟ್ಟಿದ್ದು ಅಂಬಿ ನಿನಗೆ ವಯಸ್ಸಾಯ್ತೋ ಚಿತ್ರದ ಹೋ ಕ್ಷಣ ಹಾಡು. ಅಷ್ಟೇ ಅಲ್ಲ ಎಲ್ಲಿದ್ದೆ ಇಲ್ಲಿ ತನಕ, ಭೈರವ ಗೀತ, ಧೈರ್ಯಂ, ಪ್ರೀಮಿಯರ್ ಪದ್ಮಿನಿ ಹೀಗೆ ಹಲವು ಚಿತ್ರಗಳಲ್ಲಿ ಹಾಡಿರುವುದಲ್ಲದೆ ತೆಲುಗಿನ ದಂಡುಪಾಳ್ಯ 3 ಚಿತ್ರಕ್ಕೆ ಹಾಡಿದ್ದಾರೆ. ಖ್ಯಾತ ಗಾಯಕ ಡಾ. ಎಸ್.ಪಿ ಬಾಲಸುಬ್ರಮಣ್ಯಂ, ಏಸುದಾಸ್, ಶ್ರೀ ಹರಿಹರನ್, ಎಸ್ ಜಾನಕಿ, ಶ್ರೀ ವಿಜಯ ಪ್ರಕಾಶ್, ಶ್ರೀ ಕಾರ್ತಿಕ್, ಶ್ರೀ ಟಿಪ್ಪು ಹೀಗೆ ಹಲವಾರು ಗಣ್ಯಾತಿಗಣ್ಯರ ಕಾರ್ಯಕ್ರಮಗಳಲ್ಲಿ ಅನಿರುಧ್ಧ ಅವರು ಹಾಡಿದ್ದಾರೆ.

ಗ್ರಾಮಿ ಪ್ರಶಸ್ತಿ ಪುರಸ್ಕೃತ ರಿಕ್ಕಿ ಕೇಜ್ ಅವರಿಗೂ ಜಿಂಗಲ್’ಗಳನ್ನು ಹಾಡಿದ್ದಾರೆ. ಹಲವಾರು ಕನ್ನಡ ಧಾರಾವಾಹಿಗಳು ಹಾಗೂ ರಿಯಾಲಿಟಿ ಶೋಗಳ ಶೀರ್ಷಿಕೆ ಗೀತೆಗಳಿಗೆ ಧ್ವನಿಯಾಗಿರುವ ಅನಿರುದ್ಧ್ ಅವರಿಗೆ ಹೆಚ್ಚು ಪ್ರಖ್ಯಾತಿ ತಂದುಕೊಟ್ಟಿದ್ದು ಕಾಮಿಡಿ ಕಿಲಾಡಿಗಳು, ನಾಗಮಂಡಲ, ಮುದ್ದು ಲಕ್ಷ್ಮಿ ಧಾರಾವಾಹಿಯ ಶೀರ್ಷಿಕೆ ಗೀತೆಗಳು. ಹಲವಾರು ಕಾರ್ಯಕ್ರಮಗಳಿಗೆ ಮುಖ್ಯಅತಿಥಿ ಗಾಯಕರಾಗಿ ಕರೆಯಲ್ಪಟ್ಟಿರುವ ಅನಿರುಧ್ಧ ಅವರು ಮಜಾ ಟಾಕೀಸ್, ಕನ್ನಡ ಕೋಗಿಲೆ ಸೇರಿದಂತೆ ಹಲವಾರು ಕಾರ್ಯಕ್ರಮಗಳಲ್ಲೂ ಹಾಡಿದ್ದಾರೆ.

16ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟನೆ ಮಾಡಿರುವ ಇವರಿಗೆ ಕರ್ನಾಟಕ ಸರ್ಕಾರದಿಂದ ಬೆಸ್ಟ್ ಆಕ್ಟರ್ ಎಂಬ ಅವಾರ್ಡನ್ನು ಡಾಕ್ಟರ್ ಶಿವರಾಜ್ ಕುಮಾರ್ ಅಭಿನಯದ ರಾ’ಕ್ಷಸ ಚಿತ್ರಕ್ಕೆ ಕೊಡಲಾಗಿದೆ. ಹಲವಾರು ಧಾರಾವಾಹಿಗಳಲ್ಲಿ ಹಾಗು ಜಾಹಿರಾತುಗಳಲ್ಲಿ ಅಭಿನಯಿಸಿರುವ ಅನಿರುಧ್ಧ ಅವರ ಪ್ರತಿಭೆ ಅಪಾರ. ಖ್ಯಾತ ಗಾಯಕ ಡಾ. ಎಸ್.ಪಿ ಬಾಲಸುಬ್ರಮಣ್ಯಂ ಅವರನ್ನು ತನ್ನ ಮ್ಯೂಸಿಕ್ ಆಲ್ಬಂ ‘ಪ್ರಣವ’ದಲ್ಲಿ ಹಾಡಿಸಿದ ಹಿರಿಮೆ ಕೂಡ ಅನಿರುದ್ಧ ಅವರದ್ದು.

ಕರ್ನಾಟಕ ಪೋ’ಲಿಸ್ ಡಿಪಾರ್ಟ್ಮೆಂಟ್ ಜೊತೆಗೂ ಕೆಲಸ ಮಾಡಿರುವ ಅನಿರುದ್ಧ್ ಅವರು ಕಂಠದಾನ ಕಲಾವಿದರು ಕೂಡ. ಐವತ್ತಕ್ಕೂ ಹೆಚ್ಚು ಕನ್ನಡ ಚಲನಚಿತ್ರಗಳಿಗೆ ಡಬ್ಬಿಂಗ್ ಮಾಡಿರುವ ಅನಿರುದ್ಧ್ ಅವರು ಹಲವಾರು ಜಾಹಿರಾತುಗಳಿಗೆ ಹಾಗೂ ಅನಿಮೇಷನ್ ಚಿತ್ರಗಳಿಗೆ ಹಿನ್ನೆಲೆ ಕಂಠದಾನ ನೀಡಿದ್ದಾರೆ. ಆರಕ್ಕೂ ಹೆಚ್ಚು ಭಾಷೆಗಳಲ್ಲಿ ಗ್ರಾಮಿ ವಿನ್ನರ್ ರಿಕಿ ಕೆಜ್ ಅವರಿಗೆ ನೀಡಿರುವ ಹಿರಿಮೆ ಕೂಡ ಅನಿರುದ್ಧ್ ಅವರದ್ದು. ಜೀ ಕನ್ನಡದ ಕುಣಿಯೋಣು ಬಾರ ಹಾಗೂ ಚಿನ್ನರ ಕ್ಯಾಂಪ್ ಎಂಬ ರಿಯಾಲಿಟಿ ಶೋಗಳಿಗೆ ನಿರೂಪಣೆ ಮಾಡಿದ್ದಾರೆ.

ಈಟಿವಿಯ ಬಾಲಗಂಧರ್ವ ರಿಯಾಲಿಟಿ ಶೋಗೂ ಕೂಡ ನಿರೂಪಣೆ ಮಾಡಿದ್ದಾರೆ. ಸ್ಟಾರ್ ಸುವರ್ಣ ವಾಹಿನಿಯ ಲಿಟಲ್ ಸ್ಟಾರ್ ಸಿಂಗರ್ ಕಾರ್ಯಕ್ರಮಕ್ಕೆ ನಿರೂಪಣೆ ಮಾಡುತ್ತಾ ಹಲವಾರು ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡುತ್ತಿರುತ್ತಾರೆ. ಪ್ರಸ್ತುತ ಡಬ್ಬಿಂಗ್’ನಲ್ಲಿ ಬರುತ್ತಿರುವ ಧಾರಾವಾಹಿಗಳಿಗೆ ತನ್ನ ಸಂಪೂರ್ಣ ಸಂಗೀತದ ಜ್ಞಾನವನ್ನು ಬಳಸಿಕೊಂಡು ಹಾಡುಗಳನ್ನು ಧ್ವನಿಮುದ್ರಿಸುವ ಅನಿರುದ್ಧ್ ಅವರು ರಾಧಾಕೃಷ್ಣ ಧಾರಾವಾಹಿಯಲ್ಲಿ ಬರುವ ಹಾಡುಗಳನ್ನು ಹಾಡಿದ್ದಾರೆ.

ಯೇಸುದಾಸ್, ಚಿತ್ರಮ್ಮ ಹೀಗೆ ಹಲವಾರು ಗಣ್ಯ ವ್ಯಕ್ತಿಗಳ ಪ್ರಶಂಸೆಗೆ ಪಾತ್ರರಾಗಿರುವ ಅನಿರುಧ್ಧ ರವರಿಗೆ ಎಸ್ಪಿಬಿ ಅವರು ಬೆನ್ನು ತಟ್ಟಿ ಶ್ಲಾಘಿಸಿದ್ದು ಮರೆಯಲಾಗದ ಘಟನೆ ಎಂದು ಹೇಳುತ್ತಾರೆ. ಮಂಜುಳಾ ಗುರುರಾಜ್ ಅವರ ಸಾಧನ ಸಂಗೀತ ಶಾಲೆಯಲ್ಲಿ ಉತ್ತಮ ವಿದ್ಯಾರ್ಥಿ ಎಂದು ಚಿನ್ನದ ಪದಕವನ್ನು ಪಡೆದುಕೊಂಡಿರುವ ಅನಿರುದ್ಧ್ ಅವರಿಗೆ ಖ್ಯಾತ ನ್ಯಾಷನಲ್ ವಾಹಿನಿ, ಪೋಗೋ’ನಲ್ಲಿಯೂ ಅಮೇಜಿಂಗ್ ಕಿಡ್ಸ್ ಅವಾರ್ಡ್ಅನ್ನು 2006ರಲ್ಲಿ ನೀಡಲಾಗಿದೆ. ಕುಣಿಯೋಣು ಬಾರ ರಿಯಾಲಿಟಿ ಶೋ ನಿರೂಪಣೆಗೆ ಬೆಸ್ಟ್ ಆಂಕರ್ ಅವಾರ್ಡ್ಅನ್ನು ಕೂಡ ಜೀ ಕನ್ನಡ ವಾಹಿನಿಯಿಂದ ನೀಡಲಾಗಿದೆ.

ಕೌಟಿಲ್ಯ ಸ್ಟೇಟ್ ಎಕ್ಸಲೆನ್ಸ್ ಅವಾರ್ಡ್, ಸುವರ್ಣ ಕರ್ನಾಟಕ ಚೇತನ ಅವಾರ್ಡ್ ಹೀಗೆ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿರುವ ಅನಿರುಧ್ಧ ಅವರು ಮುಂಬರಲಿರುವ ದರ್ಶನ್ ಅವರ ರಾಬರ್ಟ್ ಚಿತ್ರಕ್ಕೂ ಅರ್ಜುನ್ ಜನ್ಯ ರವರೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅವರ ಎಲ್ಲ ಮುಂಬರುವ ಕಾರ್ಯಗಳಿಗೆ ಉತ್ತಮ ಯಶಸ್ಸು ಸಿಗಲಿ ಎಂದು ನಮ್ಮ ಹಾರೈಕೆ. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here