ನೀವು ಊಟ ಮಾಡಿದ ಬಳಿಕ ಈ ತಪ್ಪುಗಳನ್ನು ಮಾಡುತ್ತಿದ್ದರೆ ಕೂಡಲೇ ಅಂತ ತಪ್ಪುಗಳನ್ನು ನಿಲ್ಲಿಸಿ..!!

0
7961

ಉತ್ತಮ ಆರೋಗ್ಯಕ್ಕೆ ಒಳ್ಳೆಯ ಆಹಾರ ಹೇಗೆ ಅವಶ್ಯಕವೋ ಆ ಆಹಾರದ ನಂತರ ಅಥವಾ ಊಟ ಮಾಡಿದ ಬಳಿಕ ಅಥವ ಮೊದಲು ಏನು ಮಾಡಬೇಕು ಅಂದರೆ ಪಾಲಿಸಬೇಕಾದ ಅಭ್ಯಾಸಗಳನ್ನು ಮಾಡಿಕೊಳ್ಳುವುದು ಉತ್ತಮ ಏಕೆಂದರೆ ನಾವು ಈ ಪ್ರಪಂಚದಲ್ಲಿ ಏನೇ ಕಳೆದುಕೊಂಡರು ಪಡೆದು ಕೊಳ್ಳಬಹುದು ಆದರೆ ಉತ್ತಮ ಆರೋಗ್ಯವನ್ನು ಆ ದೇವರು ಕೂಡ ಕರುಣಿಸಲು ಸಾಧ್ಯವಿಲ್ಲ ಎಲ್ಲರೂ ಹುಟ್ಟಿದಾಗಿನಿಂದಲೂ ಆರೋಗ್ಯವಾಗಿ ಹುಟ್ಟುತ್ತಾರೆ ಯಾವ ತಂದೆ ತಾಯಿಯೂ ಸಹ ನನ್ನ ಮಕ್ಕಳಿಗೆ ಇಂಥ ಕಾಯಿಲೆ ಬರಲಿ ಅಂತ ಕಾಯಿಲೆ ಬರಲಿ ಎಂದು ಆಶಿಸುವ ದಿಲ್ಲ ಹಾಗಾಗಿ ನಾವು ಊಟ ಮಾಡುವ ರೀತಿ ನಮ್ಮ ಅಭ್ಯಾಸಗಳು ನಮ್ಮ ಊಟದ ಬಳಿಕ ನಾವು ಏನು ಮಾಡಬೇಕು ಊಟ ಮಾಡುವ ಮೊದಲು ಏನು ಮಾಡಬೇಕು ಎಂದು ತಿಳಿದು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡರೆ ಆರೋಗ್ಯ ನಮ್ಮದಾಗುತ್ತದೆ.

ಊಟದ ನಂತರ ಮಲಗುವುದು : ಅತಿ ಹೆಚ್ಚಿನ ಜನರು ಊಟವಾದ ಬಳಿಕ ಮಲಗಲು ಪ್ರಯತ್ನಿಸುತ್ತಾರೆ ಯಾಕೆಂದರೆ ನಮ್ಮ ಜೀವನ ಶೈಲಿ ಆ ರೀತಿ ಇದೆ ಏಕೆಂದರೆ ಬೆಳಿಗ್ಗೆಯಿಂದ ದುಡಿದು ದಣಿವಾಗಿ ಮನೆಯಲ್ಲಿ ಕೆಲಸ ಮುಗಿಸಿ ಊಟ ಮಾಡಿ ಮಲಗಿದರೆ ಸಾಕಪ್ಪ ಎಂದೇ ಅನಿಸುತ್ತದೆ ಆದರೆ ಮೆಡಿಕಲ್ ಪ್ರಕಾರ ನಾವು ಊಟ ಮಾಡಿದ ಮೂರು ಗಂಟೆಯ ಬಳಿಕ ಮಲಗಬೇಕು ಇಲ್ಲವಾದಲ್ಲಿ ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳು ಸರಿಯಾದ ರೀತಿಯಲ್ಲಿ ಕೆಲಸ ಮಾಡುವುದಿಲ್ಲ ಆದ್ದರಿಂದ ಜೀರ್ಣಕ್ರಿಯೆಯಲ್ಲಿ ತೊಂದರೆ ಉಂಟಾಗಿ ಅಸಿಡಿಟಿ ಉಂಟಾಗಬಹುದು ಹಾಗಾಗಿ ಬೇರೆ ಯಾವುದಾದರೂ ಕೆಲಸ ಕಾರ್ಯಗಳಲ್ಲಿ ತೊಡಗಿಕೊಳ್ಳುವುದು ಉತ್ತಮ ಹೇಗೆಂದರೆ ಟಿವಿ ನೋಡಬಹುದು ಮನೆಮಂದಿಯ ಜೊತೆ ಮಾತನಾಡಬಹುದು ಒಳ್ಳೆಯ ಪುಸ್ತಕಗಳನ್ನು ಓದಬಹುದು ನಿಮ್ಮ ಜೀವನದ ಬಗ್ಗೆ ಒಳ್ಳೆಯ ಯೋಜನೆಗಳನ್ನು ಮಾಡಬಹುದು ನಾನಾ ರೀತಿಯ ಅಭ್ಯಾಸಗಳನ್ನು ಮಾಡಿಕೊಳ್ಳಬಹುದು.

ಧೂಮಪಾನ ಮಾಡುವುದು : ಧೂಮಪಾನ ಮಾಡುವುದು ಕೆಟ್ಟ ವಿಚಾರವೇ ಸರಿ ಅಭ್ಯಾಸಗಳಲ್ಲೆ ಕೆಟ್ಟ ಅಭ್ಯಾಸ ಅಂದರೆ ಧೂಮಪಾನ, ಧೂಮಪಾನ ಮಾಡುವುದರಿಂದ ಗಂಟಲು ಕ್ಯಾನ್ಸರ್ ಶ್ವಾಸಕೋಶದ ಕ್ಯಾನ್ಸರ್ ಮತ್ತು ಹಲವು ಬಗೆಯ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಉಲ್ಬಣಗೊಳ್ಳುತ್ತದೆ ಈ ರೀತಿ ಇರುವಾಗ ಊಟ ಮಾಡಿದ ಬಳಿಕ ಧೂಮಪಾನ ಮಾಡುವುದರಿಂದ ಧೂಮಪಾನದಲ್ಲಿ ಬೆಂಕಿ ಸುಟ್ಟಾಗ ಉಂಟಾಗುವ 10000 ರಾಸಾಯನಿಕ ಅಂಶಗಳು ಉತ್ಪತ್ತಿಯಾಗಿ ಕಾರ್ಸಿನೋ ಜೇನ್ ಅಂದರೆ ಕ್ಯಾನ್ಸರ್ ಗೆ ಕಾರಣವಾಗುವ ರಾಸಾಯನಿಕಗಳು ಹೆಚ್ಚಾಗುತ್ತವೆ ಮತ್ತು ಊಟದ ಬಳಿಕ ಧೂಮಪಾನ ಮಾಡುವುದರಿಂದ ಸರಿಯಾಗಿ ನಿದ್ರೆ ಬರುವುದಿಲ್ಲ.

ಕಾಫಿ ಟೀ ಕುಡಿಯುವುದು : ನಮ್ಮಲ್ಲಿ ಹಲವಾರು ಜನಗಳಿಗೆ ಊಟವಾದ ಬಳಿಕ ಕಾಫಿ ಟೀ ಕುಡಿಯುವ ಅಭ್ಯಾಸವಿರುತ್ತದೆ ಈ ಕಾಫಿ ಟೀ ಕುಡಿಯುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುವ ಕಿಣ್ವಗಳು ಸರಿಯಾದ ರೀತಿ ಕೆಲಸ ಮಾಡುವುದಿಲ್ಲ ಮತ್ತು ಕಾಫಿಯಲ್ಲಿ ಕೆಫಿನ್ ಇರುವುದರಿಂದ ನರಗಳು ಕಿರಿದಾಗುತ್ತವೆ  ಇದರಿಂದ ಸರಿಯಾಗಿ ನಿದ್ದೆ ಬರದೆ ಮತ್ತು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡುತ್ತದೆ ಹಾಗಾಗಿ ಊಟವಾದ ಬಳಿಕ ಕಾಫಿಯನ್ನು ಮತ್ತು ಟಿ ಸೇವಿಸದೇ ಇರುವುದು ಉತ್ತಮ ಅಭ್ಯಾಸ.

ಊಟದ ನಂತರ ನಡೆದಾಡುವುದು : ಸಾಮಾನ್ಯವಾಗಿ ನಮ್ಮ ಜನಗಳಿಗೆ ಊಟವಾದ ಬಳಿಕ ಸ್ವಲ್ಪ ನಡೆದಾಡುವುದು ಅಭ್ಯಾಸವಿರುತ್ತದೆ ಏಕೆಂದರೆ ಗಾಳಿಯಲ್ಲಿ ನಡೆದರೆ ಆರೋಗ್ಯ ಪ್ರಫುಲ್ಲಗೊಳಿಸುತ್ತದೆ ದೇಹ ಸುಂದರವಾಗಿರುತ್ತದೆ ಮತ್ತು ಜೀರ್ಣಕ್ರಿಯೆಗೆ ಸಹಾಯವಾಗುತ್ತದೆ ಎನ್ನುವುದು ಸುಳ್ಳಿನ ಮಾತು ಏಕೆಂದರೆ ಊಟ ಮಾಡಿದ ಬಳಿಕ ದೇಹದ ಹೆಚ್ಚಿನ ರಕ್ತ ಹೊಟ್ಟೆಯ ಭಾಗಕ್ಕೆ ಬರುತ್ತದೆ ಇದರಿಂದ ಜೀರ್ಣಕ್ರಿಯೆಗೆ ಹೆಚ್ಚಿನ ರಕ್ತ ದೊರಕುವುದರಿಂದ ಜೀರ್ಣಕ್ರಿಯೆ ಚೆನ್ನಾಗಿ ಆಗುತ್ತದೆ ಮತ್ತು ಮಧ್ಯರಾತ್ರಿಯಲ್ಲಿ ಅಜೀರ್ಣದಿಂದ ಕೂತುಕೊಳ್ಳುವ ಸಮಸ್ಯೆ ಇರುವುದಿಲ್ಲ ಹಾಗಾಗಿ ಊಟವಾದ 30ರಿಂದ ಅರವತ್ತು ನಿಮಿಷದ ಬಳಿಕ ಓಡಾಡುವುದು ಒಳ್ಳೆಯ ಅಭ್ಯಾಸ.

ಊಟವಾದ ಬಳಿಕ ಸ್ನಾನ ಮಾಡುವುದು : ಕೆಲವಾರು ಮಂದಿ ತಮ್ಮ ಜೀವನದ ಶೈಲಿಯಿಂದ ಸಮಯ ಸಾಲದೆ ಊಟವಾದ ಬಳಿಕ ಸ್ನಾನ ಮಾಡಲು ಹೋಗುತ್ತಾರೆ ಊಟವಾದ ಬಳಿಕ ಸ್ನಾನ ಮಾಡುವುದರಿಂದ ಜೀರ್ಣಕ್ರಿಯೆಗೆ ಬೇಕಾದ ರಕ್ತ ಸರಿಯಾದ ಪ್ರಮಾಣದಲ್ಲಿ ದೊರಕದೆ ಅಜೀರ್ಣತೆ ಉಂಟಾಗುತ್ತದೆ ಹಾಗಾಗಿ ಊಟ ಮಾಡಿದ ಸರಿಸುಮಾರು ಒಂದು ಗಂಟೆಯ ನಂತರ ಸ್ನಾನ ಮಾಡುವುದು ಉತ್ತಮ ಅಭ್ಯಾಸ ಅಥವಾ ಊಟದ ಮುಂಚೆ ಸ್ನಾನ ಮಾಡುವುದು ಉತ್ತಮ ಅಭ್ಯಾಸ.

LEAVE A REPLY

Please enter your comment!
Please enter your name here