ತಂತ್ರಜ್ಞಾನ ಬೆಳೆದಿದೆ.ಈಗ ಏನಿದ್ದರೂ ಕೈ ಎದುರಿಗೇ ಎಲ್ಲಾ ವಿಷಯಗಳು ಸಿಗುತ್ತವೆ. ಮೊದಲೆಲ್ಲಾ ವಸ್ತುಗಳು ಬೇಕಿದ್ದರೆ ದೂರವಿರುವ ಪಟ್ಟಣದ ಅಂಗಡಿಗಳಿಗೆ ಹೋಗಬೇಕಿತ್ತು.ಆದರೆ ಆನ್ಲೈನ್ ಖರೀದಿ ತಾಣ ಬಂದ ಮೇಲೆ ಮೊಬೈಲ್ ನಲ್ಲೇ ಆರ್ಡರ್ ಮಾಡಬಹುದು.ಬ್ಯಾಂಕಿಂಗ್ ವ್ಯವಹಾರವನ್ನು ಈಗ ಮೊಬೈಲ್ ಮೂಲಕ ಮಾಡುವುದರಿಂದ ವಂಚಕರ ಹಾವಳಿಯೂ ಜಾಸ್ತಿಯಾಗುತ್ತಿದೆ.ಎಷ್ಟೇ ಜಾಗ್ರತೆ ವಹಿಸಿ ಎಂದರೂ, ಯಾರಿಗೂ ಓಟಿಪಿ ಯಾಗಲೀ ಅಥವಾ ಬ್ಯಾಂಕ್ ಡೀಟೆಲ್ಸ್ ಆಗಲೀ ಕೊಡಬೇಡಿ ಎಂದು ಬ್ಯಾಂಕ್’ನವರು ಎಷ್ಟೇ ಎಚ್ಚರಿಸಿದರೂ ಜನರು ಮೋಸ ಹೋಗುತ್ತಲೇ ಇರುತ್ತಾರೆ.ಅಂತಹ ಮೋಸದ ಜಾಲಕ್ಕೆ ಬೀಳುವವರು ಸಾಮಾನ್ಯ ಜನರು ಮಾತ್ರವೇ ಅಲ್ಲ ಉನ್ನತ ಹುದ್ದೆ ಹೊಂದಿರುವ ವಿದ್ಯಾವಂತರೂ ಇದ್ದಾರೆ.ಅಂತಹ ಘಟನೆ ಬೆಂಗಳೂರಿನಲ್ಲಿ ನಡೆದಿದೆ.ಕೇವಲ 800 ರೂಪಾಯಿ ಕುರ್ತಾ ಆರ್ಡರ್ ಮಾಡಲು ಹೋಗಿ 80 ಸಾವಿರ ಕಳೆದುಕೊಂಡ ಮಹಿಳೆಯ ಕತೆ ವ್ಯಥೆ ಇದು.ಬನ್ನಿ ಅದು ಹೇಗೆ ಆಯಿತು ಅಂತ ನೋಡೋಣ.
ಬೆಂಗಳೂರಿನ ಗೊಟ್ಟಿಗೆರೆಯ ನಿವಾಸಿ ಶ್ರಾವಣರವರು ಆನ್ಲೈನ್ ಶಾಪಿಂಗ್ ಆ್ಯಪನ್ನು ಮೊಬೈಲ್’ನಲ್ಲಿ ಇನ್ಸ್ಟಾಲ್ ಮಾಡಿಕೊಂಡಿದ್ದರು.ಹೀಗೆ ಅದರಲ್ಲಿ ಬರುವ ಬಗೆ ಬಗೆಯ ವಸ್ತುಗಳನ್ನು ನೋಡುತ್ತಿದ್ದರು. ಅವರಿಗೆ ಕುರ್ತಾ ತೆಗೆದುಕೊಳ್ಳುವ ಮನಸ್ಸಾಯಿತು.ಅದರಲ್ಲಿ ಕುರ್ತಾವನ್ನು ಹುಡುಕಾಡಿದಾಗ ಅದರ ಬೆಲೆ 800 ರೂಪಾಯಿ ಇರುವ ಕುರ್ತಾವನ್ನು ಆರ್ಡರ್ ಮಾಡಿದರು.ಆದರೆ ನಾಲ್ಕು ದಿನವಾದರೂ ಐಟಂ ಬರಲಿಲ್ಲ. ಇದರಿಂದ ಕಂಗಾಲದ ಆಕೆ ಗೂಗಲ್’ನಲ್ಲಿ ತಾಣದ ಕಸ್ಟಮರ್ ಕೇರ್ ಸರ್ಚ್ ಮಾಡಿದರು.ಆದರೆ ಅದೇ ಹೆಸರಂತೆ ಕಾಣುವ ನಕಲಿ ಕಾಲ್ ಸೆಂಟರ್ ನಂಬರ್’ಗೆ ಕಾಲ್ ಮಾಡಿದ್ದಾರೆ. ಕಾಲ್ ರಿಸಿವ್ ಮಾಡಿದ ಅವರು ಒಂದು ಲಿಂಕನ್ನು ಮೊಬೈಲ್ ಸೆಂಡ್ ಮಾಡಿ ಲಿಂಕ್ ಕ್ಲಿಕ್ ಮಾಡಿ ನಂತರ ಓಟಿಪಿ ಕೇಳಿದ್ದಾರೆ.ಅವರು ಹೇಳಿದಂತೆ ಮಾಡಿದ ಮಹಿಳೆ ಬ್ಯಾಂಕಿನ ಡೀಟೆಲ್ಸ್, ಮತ್ತು ಒಟಿಪಿ ಅವರಿಗೆ ಕೊಟ್ಟಿದ್ದಾರೆ.ತಕ್ಷಣವೇ ಅವರ ಅಕೌಂಟಿನಲ್ಲಿದ್ದ 79800 ರುಪಾಯಿ ಹಣ ಕಟ್ ಆಗಿದೆ.ಇದರಿಂದ ಗಾಭರಿಯಾದ ಮಹಿಳೆ ಪೋಲಿಸರಿಗೆ ದೂರು ನೀಡಿದ್ದಾರೆ.
ಪ್ರಿಯ ಸ್ನೇಹಿತರೇ.. ನೀವು ಯಾವುದೇ ಆನ್ಲೈನ್ ಶಾಪಿಂಗ್ ಮಾಡುವಾಗ ಬ್ಯಾಂಕಿಂಗ್ ಡೀಟೆಲ್ಸ್ ಆಗಲಿ ,ಓಟಿಪಿ ಆಗಲಿ ಯಾರಿಗೂ ಕೊಡಬೇಡಿ.ನಿಮ್ಮ ಇಮೇಲ್’ಗೆ ಬ್ಯಾಂಕ್ ಹೆಸರಲ್ಲಿ ಬರುವ ಲಿಂಕನ್ನು ಓಪನ್ ಮಾಡಬೇಡಿ. ಯಾವುದೇ ಬ್ಯಾಂಕ್ ಅಧಿಕಾರಿಗಳಾಗಲೀ ನಿಮ್ಮ ಬ್ಯಾಂಕ್ ನ ಎಟಿಎಂ ಕಾರ್ಡ್ ನಂಬರ್, ಒಟಿಪಿಯಾಗಲೀ ಕೇಳುವುದಿಲ್ಲ.ಬ್ಯಾಂಕ್ ಹೆಸರಲ್ಲಿ ಕಾಲ್ ಮಾಡುವ ಖದೀಮರು ನಿಮ್ಮ ಕಾರ್ಡ್ ಬ್ಲಾಕ್ ಆಗಿದೆ ಎಂದು ಹೇಳಿ ಡೀಟೆಲ್ಸ್ ಕೇಳುತ್ತಾರೆ. ಆಗ ನೀವು ಆ ಕಾಲ್ ಕಟ್ ಮಾಡಿ.ಏನೇ ಸಂದೇಹ ಇದ್ದರೂ ಹತ್ತಿರದ ಬ್ಯಾಂಕ್ ಕಚೇರಿಗೆ ಹೋಗಿ ಸಂದೇಹ ನಿವಾರಿಸಿಕೊಳ್ಳಿ.