ಈ ಬಾರಿ ಹುಚ್ಚ ವೆಂಕಟ್ ಅಭಿನಯದ ಅತ್ಯದ್ಭುತ ಚಿತ್ರವೊಂದು ಬಿಡುಗಡೆಗೆ ಸಿದ್ಧವಾಗಿದೆ! ಯಾವುದು ನೋಡಿ

0
2854

ಹುಚ್ಚ ವೆಂಕಟ್ ಅವರ ಸಿನಿಮಾ ಎಂದ ತಕ್ಷಣ ನಿಮ್ಮ ತಲೆಗೆ ಅವರ ಹಿಂದಿನ ಮೂರು ಚಿತ್ರಗಳು ಬರಬಹುದು, ಆದರೆ ಇಂದು ನಾವು ನಿಮಗೆ ತಿಳಿಸಲು ಹೊರಟಿರುವ ಸಿನಿಮಾ ಮೂರು ಚಿತ್ರಗಳಿಗೂ ಬಹಳ ವಿಭಿನ್ನ, ಕಾರಣ ಈ ಬಾರಿ ವೆಂಕಟ್ ಅವರು ಆಯ್ಕೆ ಮಾಡಿಕೊಂಡಿರುವ ಚಿತ್ರದ ಕಥಾಹಂದರ ಆ ರೀತಿ ಇದೆ, ಈ ಸಿನಿಮಾದ ಹೆಸರು “ಅಳಿಲುಗಳ ಅಳಲು” ಪುರವರ ನಂಜಪ್ಪ ಕ್ರಿಯೇಷನ್ಸ್ ಅಡಿಯಲ್ಲಿ ಈ ಚಿತ್ರ ತಯಾರಾಗಿದ್ದು ಸಂಪೂರ್ಣ ಮಕ್ಕಳ ವಿದ್ಯಾಭ್ಯಾಸದ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ತಿಳಿಸುವ ಕಥಾಹಂದರವನ್ನು ಹೊಂದಿದೆ.

ಅಳಿಲುಗಳ ಅಳಲು ಎಂಬ ಬಾಲಕಾರ್ಮಿಕರ ಹಾಗೂ ಶಿಕ್ಷಣ ವ್ಯವಸ್ಥೆಯ ಬಗ್ಗೆ ರಚನೆ ಆದಂತಹ ಚಿತ್ರಕಥೆಯನ್ನು ಹೊಂದಿದ್ದು, ಒಂದು ಕುಗ್ರಾಮದ ಜನರು ಹೇಗೆ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸ ಮಾಡಿಸಲು ಪ್ರತಿನಿತ್ಯ ಕಷ್ಟಪಡುತ್ತಿದ್ದಾರೆ ಎನ್ನುವ ಅಂಶವನ್ನು ಈ ಚಿತ್ರದಲ್ಲಿ ತೋರಿಸಲಾಗಿದೆ, ಈ ಚಿತ್ರಕ್ಕೆ ಕಥೆ ಚಿತ್ರಕಥೆ ಸಾಹಿತ್ಯ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಗೋವಿಂದರಾಜು ಜಿ ಮಧುಗಿರಿ ಅವರು ಇಡೀ ದೇಶದಲ್ಲಿರುವ ಮಕ್ಕಳ ಸಮಸ್ಯೆಯನ್ನು ಒಂದು ಹಳ್ಳಿಯಲ್ಲಿ ಈ ಚಿತ್ರದ ಮುಖಾಂತರ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ ಹಾಗೂ ಇದಕ್ಕೆ ವೆಂಕಟ್ ಅವರು ತಮ್ಮ ಸಂಪೂರ್ಣ ಸಹಮತ ನೀಡಿದ್ದಾರೆ.

ಈ ಚಿತ್ರದಲ್ಲಿ ವೆಂಕಟ್ ಅವರದು ರೈತನ ಪಾತ್ರ, ಹೌದು ಮೊಟ್ಟಮೊದಲ ಬಾರಿಗೆ ರೈತನ ಪಾತ್ರ ಮಾಡಿರುವ ವೆಂಕಟ್ ಅವರು ಆ ಹಳ್ಳಿಯ ಮಕ್ಕಳ ವಿದ್ಯಾಭ್ಯಾಸಕ್ಕೆ ಆಗುವ ತೊಂದರೆಗಳ ಬಗ್ಗೆ ಧ್ವನಿ ಎತ್ತಿ ನಿಲ್ಲುತ್ತಾರೆ, ಈಗಾಗಲೇ ವೆಂಕಟ್ ಅವರ ಧ್ವನಿಯಲ್ಲಿ ಚಿತ್ರದ ಒಂದು ಹಾಡು ಯೂಟ್ಯೂಬ್ ನಲ್ಲಿ ನೋಡಲು ಸಿಗುತ್ತದೆ ಅದರಲ್ಲಿ ಈ ಕೆಳಗೆ ನೀಡಿದ್ದು ನೀವು ಇನ್ನೂ ನೋಡಿಲ್ಲ ಅಂದರೆ ಖಂಡಿತ ಒಮ್ಮೆ ಅರ್ಥಪೂರ್ಣವಾದ ಹಾಡನ್ನು ಒಮ್ಮೆ ಕೇಳಿ.

ಈ ಚಿತ್ರಕ್ಕೆ ವೇಣುಗೋಪಾಲ್ ಪಿ ಎನ್ ಅವರು ಬಂಡವಾಳ ಹೂಡಿದರೆ ಸಂಗೀತ ಜವಾಬ್ದಾರಿಯನ್ನು ಗುರುಮೂರ್ತಿ ಹಾಗೂ ಡ್ಯಾನಿಯನ್ ವಹಿಸಿಕೊಂಡಿದ್ದಾರೆ, ನವೀನ್ ಸಜ್ಜು ಮತ್ತು ಅನುರಾಧ ಭಟ್ ಅವರು ಒಂದೊಂದು ಹಾಡಿಗೆ ಧ್ವನಿ ನೀಡಿದ್ದಾರೆ, ಭಾಸ್ಕರ ವಿ ರೆಡ್ಡಿ ಅವರ ಛಾಯಾಗ್ರಹಣ ಚಿತ್ರದಲ್ಲಿದ್ದು ಸಂಕಲನ ಸುರೇಶ್ ಆರುಮುಗಂ ಅವರದ್ದು, ಹಾಗೂ ನೃತ್ಯ ನಿರ್ದೇಶನ ತ್ರಿಭುವನ್ ಅವರದ್ದು.

ರಾಷ್ಟ್ರಪ್ರಶಸ್ತಿ ವಿಜೇತರಾದ ವೈಜನಾಥ್ ಬಿರಾದರ್ ಹಾಗೂ ಡಿಂಗ್ರಿ ನಾಗರಾಜ್, ಮಿಮಿಕ್ರಿ ಗೋಪಿ, ಪ್ರಶಾಂತ್ ಸಿದ್ದಿ, ಪವಿತ್ರ ಬೆಳ್ಳಿಯಪ್ಪ, ಶೃತಿ ದೇವ್ ಅವರು ಅಭಿನಯಿಸಿರುವ ಈ ಚಿತ್ರದಲ್ಲಿ ಬಾಲ ಕಲಾವಿದರಾಗಿ ರಾಜು, ಧನುಷ್, ಧೋನಿ ಎಂಬ ಹುಡುಗರು ಅಚ್ಚುಕಟ್ಟಾಗಿ ನಟಿಸಿದ್ದಾರೆ.

ಚಿತ್ರಕ್ಕೆ ಇದೀಗ ಚಿತ್ರವು ಸೆನ್ಸರ್ ಮಂಡಳಿಯು ಅನುಮತಿ ನೀಡಿದ್ದು, ಇಷ್ಟರಲ್ಲಿ ನಿಮ್ಮ ಮುಂದೆ ಕಾಣಸಿಗಲಿದೆ.

LEAVE A REPLY

Please enter your comment!
Please enter your name here