ವಾಟ್ಸಪ್ ಇಲ್ಲದ ಮೊಬೈಲ್ ಇಲ್ಲವೇನೋ !? ಎಲ್ಲರೂ ಈಗ ವಾಟ್ಸಪ್ ಯೂಸ್ ಮಾಡುತ್ತಾರೆ. ಯಾರ್ ಹತ್ರನಾದರೂ ನಾವು ಮಾತಾಡಬೇಕಾದರೆ ನಿಂದು ವಾಟ್ಸಪ್ ನಂಬರ್ ಯಾವುದು ಅಂತ ಕೇಳ್ತೀವಿ. ಅಂದರೆ ವಾಟ್ಸಪ್ ಗೋಸ್ಕರ ಸಪರೇಟ್ ಮೊಬೈಲ್ ನಂಬರ್ ಬಳಸುವವರೂ ಹೆಚ್ಚಿದ್ದಾರೆ. ಕೆಲವರಂತೂ ಒಂದು ಮೊಬೈಲ್’ನಲ್ಲಿ ಎರಡೆರಡು ವಾಟ್ಸಪ್ ಬಳಸುತ್ತಾರೆ.
ಈಗ ವಾಟ್ಸಪ್ ಕಂಪನಿಯಿಂದ ಒಂದು ನ್ಯೂಸ್ ಹೊರಬಿದ್ದಿದೆ. ಇನ್ನೂ ಮುಂದೆ ಅಂದ್ರೆ ಜನವರಿ ಒಂದರಿಂದ ವಿಂಡೋಸ್ ಫೋನ್’ಗಳಲ್ಲಿ ವಾಟ್ಸಪ್ ಸಪೋರ್ಟ್ ಮಾಡುವುದಿಲ್ಲ ಎಂದು ಅನೌನ್ಸ್ ಮಾಡಿದೆ. ವಿಂಡೋಸ್ 2,3,7,10 ಅದಕ್ಕಿಂತ ಹಳೆಯ ವರ್ಷನ್’ಗಳಲ್ಲಿ ವಾಟ್ಸಪ್ ಸಪೋರ್ಟ್ ಮಾಡುವುದಿಲ್ಲ.
ಫೆಬ್ರವರಿ ಒಂದರಿಂದ ಐಫೋನ್ 8 ಮತ್ತು ಅದಕ್ಕಿಂತ ಹಳೆಯ ಐಓಎಸ್ ಗಳಲ್ಲಿ ವಾಟ್ಸಪ್ ತನ್ನ ಕಾರ್ಯ ನಿರ್ವಹಿಸುವುದಿಲ್ಲ. ನೀವೇನಾದರೂ ಐಫೋನ್ ಹಳೆಯ ವರ್ಷನ್ ಮತ್ತು ವಿಂಡೋಸ್ ಫೋನ್ ಬಳಸುತ್ತಿದ್ದರೆ ಕೂಡಲೇ ಫೋನ್ ಬದಲಿಸುವುದು ಉತ್ತಮ. ಮೈಕ್ರೋಸಾಫ್ಟ್ ಕಂಪನಿ ಕೂಡ ಅಧಿಕೃತವಾಗಿ ಹೇಳಿದ್ದು ತಮ್ಮ ವಿಂಡೋಸ್ ಮೊಬೈಲ್ ಗಳು ವಾಟ್ಸಪ್ ನ್ನು ಬೆಂಬಲಿಸುವುದಿಲ್ಲ ಎಂದು ಹೇಳಿಕೆ ನೀಡಿದೆ.
ವಾಟ್ಸಪ್ ನ್ನು ಜನಪ್ರಿಯ ಸಾಮಾಜಿಕ ಜಾಲತಾಣ ಫೇಸ್ಬುಕ್ 2014 ರಲ್ಲಿ 19 ಬಿಲಿಯನ್ ಡಾಲರ್ ಹಣ ಕೊಟ್ಟು ಖರೀದಿಸಿತ್ತು. ವಾಟ್ಸಪ್ ನ್ನು ಜಗತ್ತಿನಾದ್ಯಂತ ಅತಿ ಹೆಚ್ಚು ಜನರು ಡೌನ್ಲೋಡ್ ಮಾಡಿಕೊಂಡಿದ್ದು ಅದು ಈಗ ಜನರ ಜೀವನದ ಅವಿಭಾಜ್ಯ ಅಂಗವೇ ಆಗಿ ಹೋಗಿದೆ.
ವಾಟ್ಸಪ್ ಕೇವಲ ಮೆಸೇಜ್ ಮಾಡುವುದಕ್ಕಷ್ಟೇ ಸೀಮಿತವಾಗಿಲ್ಲ. ವೀಡಿಯೋ ಕಳಿಸಬಹುದು , ಆಡಿಯೋ , ಝಿಫ್ ಫೈಲ್ ಕಳಿಸಬಹುದು. ಗ್ರೂಪ್ ಮಾಡಬಹುದು, ವೀಡಿಯೋ ಕಾಲಿಂಗ್ , ಆಡಿಯೋ ಕಾಲಿಂಗ್ , ಡಾರ್ಕ್ ಮೋಡ್ , ಮುಂತಾದ ಸೇವೆಗಳನ್ನು ಹೊಂದಿದೆ. ಅದೂ ಅಲ್ಲದೇ ಪೇಮೆಂಟ್ ಬ್ಯಾಂಕ್ ಸಿಸ್ಟಮ್ ಹೊಂದಲು ಇದು ಪ್ರಯೋಗ ಮಾಡುತ್ತಿದ್ದು ಸದ್ಯದಲ್ಲಿಯೇ ಅದರ ಮೂಲಕ ಹಣವನ್ನು ಕಳಿಸಬಹುದು, ರಿಸೀವ್ ಮಾಡಬಹುದು.
ಒಟ್ಟಿನಲ್ಲಿ ವಾಟ್ಸಪ್ ಎಲ್ಲಾ ಸೇವೆಗಳನ್ನು ಒಳಗೊಂಡ ಆಲ್ ಇನ್ ಒನ್ ಆಗಿದೆ. ಈಗಾಗಲೇ ವಾಟ್ಸಪ್ ಗೆ ಸೆಡ್ಡು ಹೊಡೆಯಲು ಟೆಲಿಗ್ರಾಂ ಆಪ್ ಬಂದಿದ್ದು ಅದು ವಾಟ್ಸಪ್ ಗಿಂತಲೂ ಅತಿ ಹೆಚ್ಚು ಆಫ್ಷನ್ ಹೊಂದಿದೆ.