3 ವರ್ಷದಲ್ಲಿ 13 ಸರಕಾರಿ ಕೆಲಸವನ್ನು ಪಡೆದ ಬೆಳಗಾವಿಯ 28 ವರ್ಷದ ರೇಣುಕಾ..!!

0
9119

ಸರ್ಕಾರಿ ಕೆಲಸ ಬಹಳಷ್ಟು ಜನರಿಗೆ ದೊಡ್ಡ ಕನಸು, ಒಂದು ಸರ್ಕಾರಿ ಕೆಲಸ ಪಡೆಯಲು ಸಾಕಷ್ಟು ಮಂದಿ ಪ್ರಯತ್ನ ಪಡುತ್ತಲೇ ಇರುತ್ತಾರೆ ಹಾಗೂ ಸರ್ಕಾರಿ ಕೆಲಸಕ್ಕಾಗಿ ಹಲವಾರು ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯುತ್ತಲೇ ಇರುತ್ತಾರೆ, ಸರ್ಕಾರಿ ಕೆಲಸ ಪಡೆಯಲೇಬೇಕು ಎಂದು ದೇವರಲ್ಲಿ ಹಲವಾರು ಹರಕೆಗಳನ್ನು ಹೊತ್ತು ಪೂಜೆಗಳನ್ನು ಮಾಡಿಸುತ್ತಾರೆ.

ಎಷ್ಟೇ ಪ್ರಯತ್ನಪಟ್ಟರೂ ಹಾಗೂ ಎಷ್ಟೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದಳು ಸರ್ಕಾರಿ ಕೆಲಸ ಸಿಗದೆ, ಎಷ್ಟೋ ಜನ ಸರ್ಕಾರಿ ಕೆಲಸದ ಸಹವಾಸವೇ ಬೇಡ, ಎಂದು ಸುಮ್ಮನಾಗಿ ಬಿಡುತ್ತಾರೆ ಆದರೆ ಇಂದು ನಾವು ನಿಮಗೆ ಪರಿಚಯ ಮಾಡಿಸುವ ಯುವತಿ ಕೇವಲ 3 ವರ್ಷದಲ್ಲಿ 13 ಸರ್ಕಾರಿ ಕೆಲಸಗಳಲ್ಲಿ ಆಯ್ಕೆಯಾಗಿದ್ದಾಳೆ.

13 ಸರ್ಕಾರಿ ಕೆಲಸಗಳನ್ನು ಪಡೆದಿದ್ದಾರೆ ಎಂದ ಕೂಡಲೇ ವಯಸ್ಸು ನಲವತ್ತಕ್ಕೂ ಹೆಚ್ಚಿರಬೇಕು ಎಂದು ನೀವು ಯೋಚಿಸಬಹುದು, ಆದರೆ ಇವರ ವಯಸ್ಸು 28 ಮಾತ್ರ, ರೇಣುಕಾ ಜೋಡಟ್ಟಿ ಎಂಬುವ ಈ ಸಾಧಕಿ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ನವಸುದ್ದಿ ಗ್ರಾಮದ ಬಡ ರೈತನ ಮಗಳು, ಈಕೆ ಓದಿದ್ದು ಸರ್ಕಾರಿ ಪ್ರಾರ್ಥಮಿಕ ಶಾಲೆಯಲ್ಲಿ ನಂತರ ಧಾರವಾಡ ದಿಂದ ದೂರಶಿಕ್ಷಣದಲ್ಲಿ BA ಮತ್ತು ಅರ್ಥಶಾಸ್ತ್ರದಲ್ಲಿ MA ಪದವಿ ಪಡೆದಿದ್ದಾರೆ.

ಪ್ರಸ್ತುತ ಬಾಗಲಕೋಟೆ ಜಿಲ್ಲೆಯ ತೇರದಾಳ ಅಲ್ಪಸಂಖ್ಯಾತ ಮೊರಾರ್ಜಿ ವಸತಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ, ಇವರಿಗೆ ಕೆಎಎಸ್ ಪರೀಕ್ಷೆ ಬರೆದು ದೊಡ್ಡ ಹುದ್ದೆ ಪಡೆಯುವ ಕನಸನ್ನು ಹೊಂದಿದ್ದಾರೆ, ಹತ್ತು ವರ್ಷಗಳ ಹಿಂದೆ ತಮ್ಮ ತಂದೆಯನ್ನು ಕಳೆದುಕೊಂಡ ರೇಣುಕಾ ಅವರಿಗೆ ಬೆನ್ನೆಲುಬಾಗಿ ನಿಂತದ್ದು ಅವರ ತಾಯಿ ಹಾಗೂ ಅಣ್ಣ.

ರೇಣುಕಾರ ಮೊತ್ತ ಮೊದಲ ಸರ್ಕಾರಿ ಕೆಲಸ ಅಬಕಾರಿ ಇಲಾಖೆಯಲ್ಲಿ ಗಾರ್ಡ್ ಆಗಿ, ನಂತರ ಪೊಲೀಸ್ ಕಾನ್‌ಸ್ಟೇಬಲ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಮೇಲ್ವಿಚಾರಕಿ, ಮೊರಾರ್ಜಿ ಶಾಲೆ ಪ್ರಥಮ ದರ್ಜೆ ಗಣಕಯಂತ್ರ ಸಹಾಯಕಿ, ಮೊರಾರ್ಜಿ ವಸತಿ ಮ್ಯಾಟ್ರಿಕ್ ಪೂರ್ವಪ್ರಥಮ ದರ್ಜೆ ಗಣಕಯಂತ್ರ ಸಹಾಯಕಿ, ಮೊರಾರ್ಜಿ ವಸತಿಶಾಲೆಯ ಪಿಯು ಕಾಲೇಜು ಪ್ರಥಮ ದರ್ಜೆ ಗಣಕಯಂತ್ರ ಸಹಾಯಕಿ, ಮಹಾನಗರ ಪಾಲಿಕೆಯ ಪ್ರಥಮ ದರ್ಜೆ ಕಂದಾಯ ನಿರೀಕ್ಷಕಿ, ಸಾಂಖಿಕ ಇಲಾಖೆಯ ನಿರೀಕ್ಷಕಿ, ಅಲ್ಪಸಂಖ್ಯಾತರ ಇಲಾಖೆ ಕಚೇರಿ ಮೇಲ್ವಿಚಾರಕಿ, ನವೋದಯ ಶಾಲೆಯಲ್ಲಿ ಪ್ರಥಮ ದರ್ಜೆ ಗಣಕಯಂತ್ರ ಸಹಾಯಕಿ, ಮಹಾನಗರ ಪಾಲಿಕೆಯ ಕರ ವಸೂಲಿಗಾರ್ತಿ, ನವೋದಯ ಶಾಲೆಯಲ್ಲಿ ಶಿಕ್ಷಕಿ ಸೇರಿ 13 ಹುದ್ದೆಗಳಿಗೆ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here