ಕಲಾಕೃತಿ ಎಂದರೆ ಹೇಗಿರಬೇಕು? ಅದಕ್ಕೆ ಕಲಾವಿದನ ಕೈ ಚಳಕ ಇರಬೇಕು, ವರ್ಷಗಳ ಕಾಲದಿಂದ ಆತ ತನ್ಮಯದಿಂದ ಚಿತ್ರವಯ ಬಿಡಿಸಿರುತ್ತಾನೆ. ಅದಕ್ಕೆ ಮ್ಯೂಸಿಯಂಗಳಲ್ಲಿ ಇಷ್ಟು ರೇಟು ಎಂದು ಹರಾಜಿಗಿಡಲಾಗುತ್ತೆ.
ಆದರೆ ಕೆಲವು ಕಲಾಕಾರರು ಇರ್ತಾರೆ. ಅವರು ಮಾಡಿದ್ದು ನೋಡಿದರೆ ನೀವೆ ನಕ್ಕು ಬಿಡ್ತೀರ! ಇಟಲಿಯಾ ಫೇಮಸ್ ಆರ್ಟಿಸ್ಟ್ ಮಾರಿಜಿಯೋ ಒಂದು ಬಾಳೆಹಣ್ಣನ್ನು ಗೋಡೆಗೆ ಪ್ಲಾಸ್ಟರ್ ಮೂಲಕ ಅಂಟಿಸಿ ಅದನ್ನು ಕಲಾಕೃತಿ ಎಂಬಂತೆ ಬಿಂಬಿಸಿದ್ದನು. ಇದನ್ನು ನೋಡಲು ಜನ ತಂಡೋಪತಂಡವಾಗಿ ಬಂದಿದ್ದರು. ವಿಚಿತ್ರ ಎಂದರೆ ಹರಾಜಿನಲ್ಲಿ ಈ ಬಾಳೆಹಣ್ಣಿ ಕಲಾಕೃತಿ 80 ಲಕ್ಷಕ್ಕೆ ಮಾರಾಟವಾಗಿತ್ತು. ಇದೇ ಮಾರಿಜಿಯೋ ಈ ಮೊದಲು ಕಂಚಿನ ಬಾಳೆಹಣ್ಣು ಗೋಟೆಗೆ ಅಂಟಿಸಿದ್ದನು. ಈಗ ನಿಜವಾದ ಬಾಳೆಹಣ್ಣು ಇಟ್ಟಿದ್ದಾನೆ.
ಈಗ ಇನ್ನೂ ವಿಶೇಷ ಏನೆಂದರೆ ಬಾಳೆಹಣ್ಣು ಕಲಾಕೃತಿ ಖರೀದಿಸಿದವನು ಸುಮ್ಮನೆ ಇದ್ದಾನ? ಇಲ್ಲ. ಅವನು ಅದನ್ನು ಒಂದು ಮ್ಯೂಸಿಯಂ ನಲ್ಲಿ ಪ್ರದರ್ಶನಕ್ಕೆ ಇಟ್ಟ. ಅದನ್ನು ನೋಡಲು ಜನರು ದುಡ್ಡು ಕೊಟ್ಟು ಬರಲು ಶುರು ಮಾಡಿದರು. 80 ಲಕ್ಷ ಬೆಲೆಬಾಳುವ ಬಾಳೆಹಣ್ಣು ಎಂದು ಕುತೂಹಲಗೊಂಡ ಜನರು ನೋಡಲು ಬಂದರು. ಈ ಸಮಯದಲ್ಲಿ ಒಬ್ಬ ಕಲಾವಿದ ಇದೇನೇದು ಹುಚ್ಚಾಟ ಎಂದು ಗೋಡೆಗೆ ಅಂಟಿಸಿದ್ದ ಬಾಳೆಹಣ್ಣನ್ನು ತಿಂದೇ ಬಿಟ್ಟ. ಇದರಿಂದ ಜನರು ಸ್ವಲ್ಪ ಗಾಭರಿಯಾದರು. ಆದರೆ ಆಯೋಜಕರು ಬೇರೇನೋ ಯೋಚಿಸದೇ ಅದರ ಬದಲಿಗೆ ಇನ್ನೊಂದು ಬಾಳೆಹಣ್ಣನ್ನು ತಂದು ಇಟ್ಟರು. ಅಲ್ಲಿ ಜನ ನೋಡುವುದು ಕಲಾಕೃತಿ ಮಾತ್ರ. ಬಾಳೆಹಣ್ಣು ಯಾವಯದಾದರೇನು ?
ಬಾಳೆಹಣ್ಣು ಗ್ಲೋಬಲ್ ಬ್ಯುಸಿನೆಸ್ ಹಾಗೂ ಹಾಸ್ಯದ ಪ್ರತೀಕವಾಗಿತ್ತು. ಇನ್ನು ಈ ಕಲಾಕೃತಿ ತಯಾರಿಸಿದ ಮ್ಯಾರಿಜಿಯೋ ಕ್ಯಾಟೆಲಿನ್, ಈ ಹಿಂದೆ 18 ಕ್ಯಾರೆಟ್ ಚಿನ್ನದ ಟಾಯ್ಲೆಟ್ ಸೀಟ್ ನಿರ್ಮಿಸುವ ಮೂಲಕ ಸದ್ದು ಮಾಡಿದ್ದರು, ಪ್ರಪಂಚದ ಅತ್ಯುತ್ತಮ ಚಿತ್ರಕಲೆಗಾರ ಇಟಲಿಯ ಲಿಯೊನಾರ್ಡೊ ಡಾವಿಂಚಿ ಮೊನಾಲಿಸಾ ಚಿತ್ರ ಬರೆಯಲು ಬಹಳಷ್ಟು ಸಮಯ ತೆಗೆದುಕೊಂಡಿದ್ದ. ಅದು ಇಂದಿಗೂ ವಿಶ್ವದ ಶ್ರೇಷ್ಠ ಕಲಾ ಕೃತಿಯಲ್ಲಿ ಒಂದು. ಈಗ ಈ ಬಾಳೆಹಣ್ಣನ್ನು ನೋಡಲು ಆತ ಬದುಕಿದಿದ್ದರೆ ಏನು ಮಾಡುತ್ತಿದ್ದ ನೀವೇ ಯೋಚಿಸಿ.