ಮಾನವ ವರ್ಗವನ್ನು ಅತ್ಯಂತವಾಗಿ ಕಾಡಿಸುವ ಮಲೇರಿಯಾ ರೋಗದ ಬಗ್ಗೆ ತಿಳಿಯಲೇಬೇಕಾದ ವಿಚಾರಗಳು..!!

0
2188

ಮಲೇರಿಯಾ ರೋಗವು ಮಾನವ ವರ್ಗವನ್ನು ಅತ್ಯಂತ ವಾಗಿ ಕಾಡಿಸುವ ಸಮಸ್ಯೆಯಾಗಿದೆ, ಇದು ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಬರುತ್ತದೆ, ಈ ಜಾತಿಯ ಹೆಣ್ಣು ಸೊಳ್ಳೆಯು ಮನುಷ್ಯನನ್ನು ಕಚ್ಚಿದಾಗ ಅವನ ಶರೀರದಿಂದ ಪರೋಪ ಜೀವಿಯನ್ನು ಒಳಗೊಂಡ ರಕ್ತವನ್ನು ಅಲ್ಪಪ್ರಮಾಣದಲ್ಲಿ ಹೀರಿಕೊಳ್ಳುತ್ತದೆ.

ಈ ಪರೋಪ ಜೀವಿಗಳು ಸೊಳ್ಳೆಯ ದೇಹದಲ್ಲಿ ಅನೇಕ ವ್ಯವಸ್ಥೆಗಳನ್ನು ಹೊಂದಿ ಕೊನೆಗೆ ಲಾಲಾ ಗ್ರಂಥಿಗಳಲ್ಲಿ ಹೋಗುತ್ತದೆ, ಅಲ್ಲಿ ಅವು ಮತ್ತೊಬ್ಬ ವ್ಯಕ್ತಿಯ ರಕ್ತ ಚಲನೆಯಲ್ಲಿ ಪ್ರವೇಶಿಸಲು ತಕ್ಕ ಅವಕಾಶವನ್ನು ಕಾಯುತ್ತಿರುತ್ತವೆ.

ಅನೇಕ ಪರೋಪ ಜೀವಿಗಳು ದೇಹದ ರಕ್ಷಣಾ ವ್ಯವಸ್ಥೆಯಿಂದ ನಾಶಗೊಳ್ಳುತ್ತವೆ, ವಿಶೇಷವಾಗಿ ಯಕೃತ್ತಿನಲ್ಲಿ ಮತ್ತು ಮೂಳೆಯ ಮಚ್ಚೆಯಲ್ಲಿರುವ ಬಿಳಿ ರಕ್ತ ಕೋಶಗಳಿಂದ ನಾಶವಾಗುತ್ತವೆ, ಆದರೆ ಎಲ್ಲವೂ ಸಾಯದೆ ಸಾಕಷ್ಟು ಕ್ರಿಮಿಗಳು ಉಳಿದು ಅವು ಬಹಳ ತೊಂದರೆಯನ್ನು ಉಂಟು ಮಾಡುತ್ತದೆ.

ಮಲೇರಿಯಾದ ಉಗ್ರದಾಳಿಗಳಲ್ಲಿ ಉತ್ತಮ ಆರೈಕೆಯು ಅಗತ್ಯ, ರೋಗಿಗೆ ಸಾಧ್ಯವಾದಷ್ಟು ಧಾರಾಳವಾಗಿ ದ್ರವ ಆಹಾರ, ತಾಜಾ ಹಣ್ಣುಗಳ ರಸ ಮತ್ತು ಸಮತೋಲನದ ಆಹಾರವನ್ನು ಕೊಡಬೇಕು.

ರೋಗಿಗಳಿಗೆ ಒಂದು ವಾರದವರೆಗೆ ವೈದ್ಯರ ಸಲಹೆಯಂತೆ ಮಾತ್ರೆಗಳನ್ನು ಕೊಡುತ್ತಿರಬೇಕು, ಆದಷ್ಟು ಕೊಳಚೆ ಪ್ರದೇಶಗಳಲ್ಲಿ ನೀರು ನಿಲ್ಲದಂತೆ ಮಾಡಬೇಕು, ವಯಕ್ತಿಕ ಮುನ್ನೆಚ್ಚರಿಕೆ ಪ್ರಕಾರ ಪ್ರತಿ ಯೊಬ್ಬರು ಸೊಳ್ಳೆಯ ಪರದೆಗಳನ್ನು ಉಪಯೋಗಿಸಬೇಕು, ಮಕ್ಕಳ ಹಾಸಿಗೆಗೆ ಸೊಳ್ಳೆಪರದೆ ಇಂದ ಪೂರ್ತಿಯಾಗಿ ಮುಚ್ಚಬೇಕು.

ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here