ಸಾಮಾನ್ಯವಾಗಿ ಮುಖದಲ್ಲಿ ಕಾಡುವ ಕಲೆಯ ಸಮಸ್ಯೆ ಎಂದರೆ ಕಣ್ಣಿನ ಕೆಳಗೆ ಕಪ್ಪಾಗುವುದು, ಈ ಸಮಸ್ಯೆ ಶೇಕಡ 50 ರಷ್ಟು ಜನಕ್ಕೆ ಕಾಡುತ್ತದೆ ಕಾರಣ ತಡರಾತ್ರಿಯಾದರೂ ನಿದ್ರೆ ಮಾಡದಿರುವುದು ಒಂದು ಮುಖ್ಯ ಕಾರಣ, ನೀವು ಎಷ್ಟೇ ಕಾಂತಿಯನ್ನು ನಿಮ್ಮ ಮುಖದ ಚರ್ಮದಲ್ಲಿ ಹೊಂದಿದ್ದರು ಡಾರ್ಕ್ ಸರ್ಕಲ್ ಅದನ್ನೆಲ್ಲ ಒಂದೇ ಕ್ಷಣದಲ್ಲಿ ಮಾಯ ಮಾಡಿಬಿಡುತ್ತದೆ.
ಹಾಗಾದರೆ ಡಾರ್ಕ್ ಸರ್ಕಲ್ ಸಮಸ್ಯೆಗೆ ಸರಿಯಾದ ಮನೆಮದ್ದು ಯಾವುದಾದರೂ ಇದೆಯೇ ಎನ್ನುವ ನಿಮ್ಮ ಪ್ರಶ್ನೆಗೆ ಹೌದು ಆಲೂಗಡ್ಡೆ ಯಲ್ಲಿದೆ ಕಣ್ಣಿನ ಕೆಳಗಿನ ಕಪ್ಪನ್ನು ನಿವಾರಿಸುವ ಅದ್ಭುತ ಶಕ್ತಿ, ಆಲೂಗಡ್ಡೆಯನ್ನು ಕಳಿಸಿ ನಾವು ಹೇಳಿದ ರೀತಿ ಒಂದು ವಾರ ಮಾಡಿದರೆ ಕಣ್ಣಿನ ಕೆಳಗೆ ಇರುವ ಡಾರ್ಕ್ ಸರ್ಕಲ್ ಮಾಯವಾಗುತ್ತದೆ.
ಮುಖದ ಚರ್ಮಕ್ಕೆ ಬೇಕಾಗಿರುವ ವಿಟಮಿನ್ ಸಿ, ವಿಟಮಿನ್ ಬಿ, ಕ್ಯಾಲ್ಸಿಯಂ, ಮ್ಯಾಂಗನೀಸ್, ಹಾಗೂ ರಂಜಕ ದಂತಹ ಅಂಶಗಳು ಆಲೂಗಡ್ಡೆಯಲ್ಲಿ ಹೇರಳವಾಗಿದೆ, ಇಷ್ಟೇ ಅಲ್ಲದೆ ಆಲೂಗಡ್ಡೆಯಲ್ಲಿ ಅಮೈನೋ ಆಮ್ಲಗಳು ಕೂಡ ಹೇರಳವಾಗಿವೆ, ಇದರಿಂದಲೇ ಡಾರ್ಕ್ ಸರ್ಕಲ್ ಸಮಸ್ಯೆ ನಿವಾರಣೆಗೆ ಆಲೂಗಡ್ಡೆ ಉತ್ತಮ ಪರಿಹಾರ.
ಆಲೂಗಡ್ಡೆ ಬಳಸುವ ರೀತಿ : ಆಲೂಗಡ್ಡೆಯನ್ನು ಮೊದಲು ಕತ್ತರಿಸಿಕೊಳ್ಳಿ ನಂತರ ಅದರ ತುಂಡುಗಳಿಂದ ಮುಖದ ಚರ್ಮದ ಮೇಲಿರುವ ತಲೆಯ ಮೇಲೆ ಮಸಾಜ್ ಮಾಡಿ, ಹದಿನೈದು ನಿಮಿಷದ ನಂತರ ಬೆಚ್ಚಗಿನ ನೀರಲ್ಲಿ ತೊಳೆಯಿರಿ.
ಎರಡನೇ ವಿಧಾನ ಆಲೂಗಡ್ಡೆಯ ಜ್ಯೂಸ್ ತಯಾರಿಸಿಕೊಳ್ಳಿ, ನಂತರ ಜ್ಯೂಸಿನ ಒಂದೆರಡು ಹರಿಗಳನ್ನು ಮುಖದ ಚರ್ಮದ ಗುಳ್ಳೆ ಅಥವಾ ಕಲೆಗಳ ಮೇಲೆ ಹಾಕಿ ಮೆಲ್ಲಗೆ ನಿಮ್ಮ ಕೈಬೆರಳುಗಳಲ್ಲಿ ಮಸಾಜ್ ಮಾಡಿ, ಸ್ವಲ್ಪ ಸಮಯ ಬಿಟ್ಟು ತಣ್ಣಗಿನ ನೀರಿನಲ್ಲಿ ತೊಳೆಯಿರಿ.
ಮೂರನೇ ವಿಧಾನ, ಆಲೂಗಡ್ಡೆಯಲ್ಲಿ ನ ರಸವನ್ನು ತೆಗೆದು ಒಂದು ಬಟ್ಟಲಲ್ಲಿ ತುಂಬಿ ಅದನ್ನು ಫ್ರಿಡ್ಜ್ ನಲ್ಲಿ ಇಟ್ಟು ಬಿಡಿ, 15ರಿಂದ 20 ನಿಮಿಷದ ಬಳಿಕ ತಣ್ಣಗಿನ ಆಲೂಗೆಡ್ಡೆ ರಸದಲ್ಲಿ ಸ್ವಚ್ಛವಾದ ಬಿಳಿಯ ಹತ್ತಿಯನ್ನು ಅದ್ದಿ ಅದನ್ನು ನಿಮ್ಮ ಕಣ್ಣಿನ ಮೇಲೆ ಇಟ್ಟುಕೊಳ್ಳಿ, ಈ ರೀತಿ 15 ನಿಮಿಷದವರೆಗೂ ಇರಬೇಕು ನಂತರ ತೊಳೆಯಿರಿ, ಈ ರೀತಿ ಒಂದು ವಾರ ಬಿಡದೆ ಮಾಡುವುದರಿಂದ ಕಣ್ಣಿನ ಕೆಳಗಿನ ಕಪ್ಪು ಹಾಗೂ ಮುಖದ ಮೇಲಿನ ಕಲೆ ಸಮಸ್ಯೆಯು ನಿವಾರಣೆಯಾಗುತ್ತದೆ.