ಬಿಳಿಗಿರಿ ರಂಗನಾಥಸ್ವಾಮಿಯನ್ನು ಅಲ್ಲಿನ ಕೆಲವು ಜನಾಂಗದವರು ಭಾವ ಎಂದು ಕರೆಯುವ ಪದ್ಧತಿ ಇದೆ ಯಾಕೆ ಗೊತ್ತಾ..?!

0
2442
Loading...
Loading...
Loading...

ಭಾರತ ದೇಶವು ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದೆ, ಭಾರತದಲ್ಲಿನ ದೇವಸ್ಥಾನ ಅತ್ಯಂತ ವಿಶೇಷ ನಿರ್ಮಾಣ ತಂತ್ರಜ್ಞಾನ ಹಾಗೂ ಧಾರ್ಮಿಕ ಕಾರಣಗಳನ್ನು ಹೊಂದಿದೆ, ಪ್ರತಿಯೊಂದು ದೇವಾಲಯವು ತನ್ನ ಇತಿಹಾಸವನ್ನು ಪುಟ್ಟ ಪುಟ್ಟ ವಾಗಿ ಕಣ್ಣಿಗೆ ಕಟ್ಟುವ ರೀತಿಯಲ್ಲಿ ತೆರೆದಿರುತ್ತವೆ ಅದರಂತೆ ಇಂದು ಶ್ರೀ ಬಿಳಿಗಿರಿರಂಗನಾಥಸ್ವಾಮಿಯ ಇತಿಹಾಸದ ಬಗ್ಗೆ ಹಾಗೂ ಸ್ಥಳ ಪುರಾಣದ ಬಗ್ಗೆ ತಿಳಿಸುತ್ತೇವೆ.

ಬಿಳಿಗಿರಿರಂಗನಬೆಟ್ಟವನ್ನು ಬಿಳಿಗಿರಿ ಬೆಟ್ಟ, ಬಿಳಿಕಲ್ಲು ಬೆಟ್ಟ, ಶ್ವೇತಾದ್ರಿ ಬೆಟ್ಟ ಎಂದೂ ಹಾಗೂ ಗಂಗರ ಕಾಲದಲ್ಲಿ ಗಜಾರಣ್ಯ ಎಂದೂ ಕರೆಯುತ್ತಿರುವುದಾಗಿ ತಿಳಿದುಬಂದಿರುತ್ತದೆ. ಈ ಬೆಟ್ಟವು ಸಮುದ್ರ ಮಟ್ಟದಿಂದ 5091 ಅಡಿ ಎತ್ತರವಿದ್ದು, ಪರ್ವತ ಶ್ರೇಣಗಳಿಂದ ಕೂಡಿರುತ್ತದೆ. ಶ್ರೀ ಬಿಳಿಗಿರಿರಂಗನಾಥಸ್ವಾಮಿ ವಿಗ್ರಹವು 5.5 ಅಡಿ ಎತ್ತರವಿದ್ದು, ರಂಗನಾಥಸ್ವಾಮಿ ನಿಂತಿರುವ ಮೂರ್ತಿಯಾಗಿರುತ್ತದೆ.

ಮಕ್ಕಳ ಭಾಗ್ಯ ಹಾಗೂ ಹಣಕಾಸಿನ ಸಮಸ್ಯೆಗೆ ತಪ್ಪದೇ ಈ ಪುಣ್ಯ ಕ್ಷೇತ್ರಕ್ಕೆ ಬೇಟಿ ನೀಡಿ..!!

ಇದನ್ನು ವಶಿಷ್ಠ ಮಹಾಮುನಿಗಳು ಸ್ಥಾಪಿಸಿರುವುದಾಗಿ ನಂತರ ವಿಷ್ಣುವರ್ಧನ ರಾಜನು ದೇವಾಲಯವನ್ನು ಜೀರ್ಣೋದ್ಧಾರ ಮಾಡಿರುವುದಾಗಿ ಪ್ರತೀತಿ ಇದೆ. ತ್ರೇತಾಯುಗದಲ್ಲಿ ಸೀತಾನ್ವೇಷಣಾ ಕಾಲದಲ್ಲಿ ಶ್ರೀರಾಮ-ಲಕ್ಷ್ಮಣರು ಇಲ್ಲಿಗೆ ಬಂದು ಶ್ವೇತಾದ್ರಿಯನ್ನು ಪೂಜಿಸಿದ್ದುದಾಗಿಯೂ ಶ್ವೇತಾಚಲ ಮಹಾತ್ಮೆಯ 3ನೇ ಅಧ್ಯಾಯದಲ್ಲಿ ವರ್ಣಿಸಲ್ಪಟ್ಟಿರುತ್ತದೆ. ಸ್ವಾಮಿಯ ಸನ್ನಿಧಿಯ ಬಲಭಾಗದಲ್ಲಿ ಅಲಮೇಲುರಂಗನಾಯಕಿ ಅಮ್ಮನವರ ದೇವಸ್ಥಾನದವಿದ್ದು, ಇದು ದ್ರಾವಿಡ ಶೈಲಿಯಲ್ಲಿರುತ್ತದೆ.

ಶ್ರೀ ಬಿಳಿಗಿರಿರಂಗನಾಥಸ್ವಾಮಿಗೆ ‘ಬಿಳಿಕಲ್ಲು ತಿರುವೆಂಕಟನಾಥ’ನೆಂದು ಮತ್ತೊಂದು ಹೆಸರಿದ್ದು, ಈ ಸ್ವಾಮಿಗೆ ಹದಿನಾರಿನ ಮುದ್ದುರಾಜನು 1667ರಲ್ಲಿ ಹಾಗೂ ದಿವಾನ್ ಪೂರ್ಣಯ್ಯರವರು ದೇವಾಲಯದ ಸೇವೆಗಾಗಿ ಎರಡು ಗ್ರಾಮಗಳನ್ನು ದತ್ತಿ ಬಿಟ್ಟಿರುವುದಾಗಿ ತಿಳಿದುಬಂದಿರುತ್ತದೆ.

ಸ್ಥಳೀಯ ಗ್ರಾಮೀಣ ಜನತೆಯ ಜಾನಪದ ಕಥೆಯ ಪ್ರಕಾರ ಶ್ರೀ ಬಿಳಿಗಿರಿರಂಗನಾಥಸ್ವಾಮಿಯು ಕಾಡಿನ ಸೋಲಿಗ ಜನಾಂಗದ ಕನ್ಯೆಯಾದ ‘ಕುಸುಮಬಾಲೆ’ಯನ್ನು ವರಿಸಿದ ಕಾರಣ ಇಲ್ಲಿನ ಸೋಲಿಗ ಜನಾಂಗದವರು ಈಗಲೂ ಸಹ ಶ್ರೀ ಸ್ವಾಮಿಯನ್ನು ‘ಬಾವ’ನೆಂದು ಕರೆಯುವ ಪದ್ಧತಿಯೂ ಇರುತ್ತದೆ.

Loading...

LEAVE A REPLY

Please enter your comment!
Please enter your name here