ರೈತರ ಹಲವು ವರ್ಷದ ಸಾಲವನ್ನು ಮನ್ನಾ ಮಾಡಿದ ಈರುಳ್ಳಿ.

0
3250

ಸಧ್ಯದ ಪರಿಸ್ಥಿತಿಯಲ್ಲಿ ದಿನಕ್ಕೆ ಒಮ್ಮೆಯಾದರೂ ಈರುಳ್ಳಿ ಬೆಲೆ ದರದ ಬಗ್ಗೆ ಮಾತನಾಡುತ್ತೇವೆ, ನ್ಯೂಸ್ ಚಾನೆಲ್ ನಲ್ಲಿ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಈರುಳ್ಳಿಯದೇ ಬಿಸಿಬಿಸಿ ಚರ್ಚೆ, ಈರುಳ್ಳಿ ಬೆಲೆ ಏರಿಕೆ ಸಮಸ್ಯೆಯನ್ನು ನಿವಾರಿಸಲು ಸರ್ಕಾರ ಹಲವು ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದರೂ ಫಲಕಾರಿಯಾಗಿಲ್ಲ, ಇದರಿಂದ ಸಾರ್ವಜನಿಕರು ಬಹಳಷ್ಟು ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ, ಆದರೆ ಇದೆಲ್ಲದರ ನಡುವೆ ಈರುಳ್ಳಿಯನ್ನು ಬೆಳೆದ ರೈತ ಮಂದಹಾಸವನ್ನು ಬೀರಿದ್ದಾನೆ, ಹೌದು ಹಲವು ವರ್ಷಗಳಿಂದ ಬೆಳೆ ಸಾಲ ಮಾಡಿ ನಷ್ಟವನ್ನು ಅನುಭವಿಸುತ್ತಿದ್ದ ರೈತರಿಗೆ ಇದೀಗ ಬಂಪರ್ ಲಾಟರಿ ಹೊಡೆದ ಹಾಗಾಗಿದೆ.

ಹಲವು ವರ್ಷಗಳ ನಂತರ ರೈತರು ಲಕ್ಷಗಟ್ಟಲೆ ಹಣವನ್ನು ಎಣಿಸುವಂತಾಗಿದೆ, ಕಳೆದ ತಿಂಗಳಷ್ಟೇ ಅತಿವೃಷ್ಟಿ ಪ್ರವಾಹದ ಪರಿಣಾಮದಿಂದ ರೈತ ನರಳಿ ಹೋಗಿದ್ದ ಅದರ ಜೊತೆಯಲ್ಲಿ ಈರುಳ್ಳಿಯ ಸಮಸ್ಯೆಯು ಸಾರ್ವಜನಿಕರಿಗೆ ಬಿಸಿ ಮುಟ್ಟಿಸಿತು, ಆದರೆ ರೈತರು ಮಾತ್ರ ಪ್ರತಿವರ್ಷ ಅವರು ಮಾಡುತ್ತಿದ್ದ ಹೂಡಿಕೆ ಎಷ್ಟು ಹಣ ಹಿಂತಿರುಗಿ ಬರುವುದು ಕಷ್ಟವಾಗುತ್ತಿತ್ತು ಆದರೆ ಇದೀಗ 5 ಲಕ್ಷ ರೂ ಆದಾಯ ಬಂದಿದೆ ಇದರಿಂದ ನಮ್ಮ ಬ್ಯಾಂಕಿನಲ್ಲಿ ಇದ್ದ ಸಾಲವನ್ನು ತೀರಿಸಿದ್ದೇವೆ ಎಂದು ರೈತರೊಬ್ಬರು ಖುಷಿ ವ್ಯಕ್ತಪಡಿಸಿದ್ದಾರೆ.

ಇನ್ನು ಕೆಲವರು ಪ್ರತಿವರ್ಷ ಈರುಳ್ಳಿ ಬೆಲೆ ಕುಸಿತದಿಂದ ಕಷ್ಟಪಡುತ್ತಿದ್ದ ರೈತನ ಬಗ್ಗೆ ಯಾರೂ ಮಾತನಾಡುತ್ತಿರಲಿಲ್ಲ, ಆದರೆ ಇದೀಗ ಅಪರೂಪಕ್ಕೆ ಈರುಳ್ಳಿ ಬೆಲೆ ಏರಿಕೆ ಆಗಿರುವುದರಿಂದ ಜನಸಾಮಾನ್ಯರುರಿಗೆ ಅಷ್ಟು ಕಷ್ಟವಾಗುತ್ತಿದೆ ಎನ್ನುವ ರೀತಿಯಲ್ಲಿ ಬಿಂಬಿಸಲಾಗುತ್ತಿದೆ, ತಿಂಗಳ ಸಂಬಳ ಪಡೆಯುವ ನೌಕರಿ ದಾರರು ಪ್ರತಿದಿನ ಈರುಳ್ಳಿಯನ್ನು ಪಡೆದು ಅಡುಗೆ ಮನೆಯಲ್ಲಿ ಅಡುಗೆ ಮಾಡಲು ಸಹ ಯೋಚನೆ ಮಾಡುತ್ತಿದ್ದಾರೆ, ಇತ್ತ ಈರುಳ್ಳಿ ವ್ಯಾಪಾರ ಮಾಡುವ ವ್ಯಾಪಾರಿಗಳು ಯಾವ ಸಮಯದಲ್ಲಿ ಈರುಳ್ಳಿ ಬೆಲೆ ಏರಿಕೆ ಆಗುತ್ತೋ ಮತ್ಯಾವ ಸಮಯದಲ್ಲಿ ಕಡಿಮೆಯಾಗುತ್ತದೆ ಎಂಬ ವಿಷಯ ಅರಿವಾಗದೇ ಗೊಂದಲದಲ್ಲಿದ್ದಾರೆ.

ಅದೇನೇ ಇರಲಿ ರೈತರ ಬೆಳೆ ಸಾಲಮನ್ನಾ ಮಾಡುವ ಸರ್ಕಾರ ಆಶ್ವಾಸನೆಗಳು ಹಾಗೆಯೇ ಇದೆ, ಆದರೂ ರೈತರು ತಮ್ಮ ಬೆಳೆ ಸಾಲ ಮನ್ನಾ ಮಾಡಿಕೊಂಡು ತಮ್ಮ ಮುಖದಲ್ಲಿ ನಗು ಮೂಡಿಸಿಕೊಂಡಿರುವುದು ನಿಜವಾಗಿಯೂ ಸಂತೋಷದ ವಿಚಾರವೇ, ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಮರೆಯದೆ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

LEAVE A REPLY

Please enter your comment!
Please enter your name here