ಯಾರಿಗೆ ಕಷ್ಟ ಇಲ್ಲ ? ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೂ ಕಷ್ಟ ತಪ್ಪಿದ್ದಲ್ಲ. ಮನುಷ್ಯ ಪ್ರತಿ ದಿನ ದುಡಿದರೂ ದುಡ್ಡು ಕೈಗೆ ಸರಿಯಾಗಿ ಉಳಿಯುವುದಿಲ್ಲ. ಮನೆಯಲ್ಲಿ ನೆಮ್ಮದಿ ಇರುವುದಿಲ್ಲ . ಮನೆಯಲ್ಲಿ ಜನರು ಮುಖ ಊದಿಸಿಕೊಂಡೇ ಇರುತ್ತಾರೆ. ಮಕ್ಕಳು ಹಠ ಮಾಡುತ್ತಾರೆ. ಹೇಳಿದ ಮಾತು ಕೇಳುವುದಿಲ್ಲ. ಯಾವುದಾದರೂ ವ್ಯವಹಾರಕ್ಕೆ ಕೈ ಹಾಕಿದರೆ ಸುಟ್ಟುಕೊಳ್ತೀವಿ. ಇದಕ್ಕೆ ಪರಿಹಾರವೇ ಇಲ್ಲವಾ ಎಂದು ಕೇಳಿದರೆ ಖಂಡಿತಾ ಇದೆ. ಅದಕ್ಕೆ ಒಂದು ಸಣ್ಣ ಕೆಲಸ ಮಾಡಿದರೆ ನಿಮ್ಮ ಕಷ್ಟಗಳೆಲ್ಲಾ ದೂರಾಗಿ ನೆಮ್ಮದಿ, ಅದೃಷ್ಟ ,ಧನಲಾಭ ನಿಮ್ಮದಾಗುತ್ತದೆ.
ಮನೆಯಲ್ಲಿ ಈ ರೀತಿ ಕಷ್ಟಗಳು ಬರುತ್ತಿದ್ದರೆ ಅದಕ್ಕೆ ಮನೆಯಲ್ಲಿ ನಕಾರಾತ್ಮಕ ಶಕ್ತಿಗಳೇ ಕಾರಣ ಎನ್ನುತ್ತದೆ ವಾಸ್ತು ಶಾಸ್ತ್ರ. ಆದರೆ ಒಂದು ಲೋಟ ನೀರು ನಿಮ್ಮ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸುತ್ತದೆ. ಅದು ಹೇಗೆ ?
ಗಾಜಿನ ಲೋಟದ ತುಂಬಾ ಶುಭ್ರವಾದ ನೀರನ್ನು ತೆಗೆದುಕೊಳ್ಳಿ. ಗಾಜು ಶುಭ್ರವಾಗಿ, ಕೈ ಬೆರಳಿನ ಗುರುತೂ ಕಾಣಬಾರದು. ಇದಕ್ಕೆ ನೀವು ಗ್ಲೌಸ್’ಗಳನ್ನು ಧರಿಸಬೇಕು. ಇದಕ್ಕೆ ಸಮುದ್ರದ ಉಪ್ಪನ್ನು ಬಳಸಿಕೊಳ್ಳಬೇಕು. ಪುಡಿ ಉಪ್ಪು ಅಲ್ಲ. ಗಾಜಿನ ಲೋಟದ ಒಂದರಷ್ಟು ಭಾಗ ಸಮುದ್ರದ ಉಪ್ಪನ್ನು ತುಂಬಿಬಿಡಿ. ಲೋಟದ ಅರ್ಧ ಭಾಗವನ್ನು ಬಿಳಿ ವಿನಿಗರ್’ನ್ನು ಹಾಕಿ ಅವರಡನ್ನು ಚೆನ್ನಾಗಿ ಕಲಸಬೇಕು.
ಇನ್ನೂ ಲೋಟವನ್ನು ಮನೆಯಲ್ಲಿ ಜಾಸ್ತಿ ನಕಾರಾತ್ಮಕ ಶಕ್ತಿ ಇರುವ ಜಾಗದಲ್ಲಿ ಯಾರಿಗೂ ಕಾಣದಂತೆ ಇಡಿ. ಟೇಬಲ್ ಕೆಳಗೆ ಹೀಗೆ ಯಾರಿಗೂ ಕಾಣದಂಗೆ ಹಗಲಿನಲ್ಲಿ ಇಡಿ. ಮುಂದಿನ 24 ಗಂಟೆಗಳ ಕಾಲ ಲೋಟವನ್ನು ಮುಟ್ಟಬೇಡಿ. ಮಕ್ಕಳು ಇದನ್ನು ಮುಟ್ಟದಂತೆ ಎಚ್ಚರ ವಹಿಸಿ.
24 ಗಂಟೆಗಳ ನಂತರ ಲೋಟವನ್ನು ನೋಡಿ. ಗಾಜಿನ ಲೋಟ, ನೀರು ಶುಭ್ರವಾಗಿದ್ದರೆ ಇದರ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಒಂದು ವೇಳೆ ಗಾಜಿನ ಲೋಟ ಹಸಿರು ಬಣ್ಣ ಅಥವಾ ನಸು ಬಣ್ಣಕ್ಕೆ ತಿರುಗಿದರೆ ಅಲ್ಲಿ ನಕಾರಾತ್ಮಕ ಶಕ್ತಿ ಇದೆ ಎಂದರ್ಥ. ಇದನ್ನು ಮನೆಯ ಇತರ ಭಾಗಗಳಲ್ಲಿ ಮಾಡಿ ಪರೀಕ್ಷಿಸಿ.
ಒಂದು ವೇಳೆ ಇದ್ದರೆ ನಕಾರಾತ್ಮಕ ಶಕ್ತಿ ಹೋಗಲಾಡಿಸಲು ವಾಸ್ತು ಶಾಸ್ತ್ರಜ್ಞರ ಸಲಹೆ ಪಡೆದುಕೊಳ್ಳಿ.ಇದರಿಂದ ಮನೆಯಲ್ಲಿ ಮತ್ತೆ ಧನಾತ್ಮಕ ಶಕ್ತಿ ತುಂಬುತ್ತದೆ. ಆರೋಗ್ಯ, ಐಶ್ವರ್ಯ ಮತ್ತೆ ಬರುತ್ತದೆ.