ಆಷಾಡ ಮಾಸದಲ್ಲಿ ನವ ದಂಪತಿಗಳು ಯಾಕೆ ಬೇರೆ ಇರ್ತಾರೆ ಗೊತ್ತೇ

0
7061

ನಮ್ಮ ಭಾರತ ದೇಶ ಹಲವು ಆಚಾರ ವಿಚಾರಗಳನ್ನು ಆಚರಿಸುವ ಶ್ರೇಷ್ಠ ದೇಶ. ನಾವು ಯಾವುದೇ ಸಂಪ್ರದಾಯ ಅಥವಾ ನಿಯಮಗಳನ್ನು ಆಚರಿಸಿದರೂ ಅದಕ್ಕೆ ಅದರದ್ದೇ ಆದ ವೈಜ್ಞಾನಿಕ ಕಾರಣಗಳಿರುತ್ತವೆ. ಆಗಿನ ಕಾಲದಲ್ಲಿ ಅಂದರೆ ವಿಜ್ಞಾನ ಇಷ್ಟು ಮುಂದುವರೆಯದ ಕಾಲದಲ್ಲಿ ನಮ್ಮ ಋಷಿ ಮುನಿಗಳು ವೈಜ್ಞಾನಿಕ ಪದ್ದತಿಯನ್ನು ಜಾರಿಗೆ ತಂದಿದ್ದರು.

ಆಷಾಡ ಮಾಸದಲ್ಲಿ ನವ ದಂಪತಿಗಳನ್ನು ನಮ್ಮ ದೇಶದಲ್ಲಿ ಸೇರಲು ಬಿಡುವುದಿಲ್ಲ . ಇದು ಮೂಢ ನಂಬಿಕೆ ಎಂದು ಜರಿಯುವವರೇ ಹೆಚ್ಚು ‌. ಆದರೆ ಇದರ ಹಿಂದೆ ವೈಜ್ಞಾನಿಕ ಸತ್ಯ ಇರುವುದು ಎಷ್ಟೋ ಜನರಿಗೆ ಗೊತ್ತೇ ಇಲ್ಲ. ಇನ್ನೂ ಕೆಲವರು ಇದನ್ನು ಕಟ್ಟು ನಿಟ್ಟಾಗಿ ಆಚರಿಸಿದರೂ ಅದರ ಮಹತ್ವ ಏನೆಂದು ಗೊತ್ತೇ ಇರುವುದಿಲ್ಲ. ಬನ್ನಿ ಅದಕ್ಕೆ ನಿಜವಾದ ಕಾರಣ ಏನೆಂದು ತಿಳಿಯೋಣ.

ವ್ಯವಸಾಯದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತೆ ಅಂತ. ಆಷಾಢ ಮಾಸ ಬರುವುದು ಮಳೆಗಾಲದ ಪ್ರಾರಂಭದಲ್ಲಿ. ಆ ಸಮಯದಲ್ಲಿ ಹೊಸದಾಗಿ ಮದುವೆಯಾದವರು ಒಂದು ಕಡೆ ಇದ್ದರೆ ಗಂಡನಾದವನು ವ್ಯವಸಾಯದ ಕಡೆ ಗಮನ ಹರಿಸುವುದಿಲ್ಲ. ಹೆಣ್ಣಿನ ವ್ಯಾಮೋಹಕ್ಕೆ ಒಳಗಾಗಿ ಆತ ತನ್ನ ಕರ್ತವ್ಯ ಮರೆಯಬಹುದು. ಇದರಿಂದ ಕೃಷಿಯಲ್ಲಿ ನಾಟಿ ಮಾಡಲು , ಬೇಸಾಯ ಮಾಡಲು ಆತ ನೆಗ್ಲೆಟ್ ಮಾಡಬಹುದು. ಆದ ಕಾರಣ ಗಂಡ ಹೆಂಡತಿಯನ್ನು ಬೇರೆ ಇರಲು ಹೇಳುತ್ತಾರೆ.

ಮಳೆಗಾಲದ ಸಮಯದಲ್ಲಿ ರೋಗಾಣುಗಳು ಹೆಚ್ಚು ಹರಡುತ್ತವೆ. ಮಳೆಗಾಲದಲ್ಲಿ ಆರೋಗ್ಯವಂತ ಮನುಷ್ಯ ಕೂಡ ಅನಾರೋಗ್ಯಕ್ಕೆ ತುತ್ತಾಗುತ್ತಾನೆ. ಅಂತಹದ್ದರಲ್ಲಿ ಹೆಣ್ಣು ಗರ್ಭ ಧರಿಸಿದರೆ ಒಳಗಿನ ಮಗುವಿನ ಬೆಳವಣಿಗೆಗೆ ತೊಂದರೆ ಆಗುತ್ತದೆ. ಆದ ಕಾರಣ ಆಷಾಢ ಮಾಸದಲ್ಲಿ ಗಂಡ ಹೆಂಡತಿ ಬೇರೆ ಇರುತ್ತಾರೆ.

ಆಷಾಡ ಮಾಸದಲ್ಲಿ ಒಂದು ಗೂ ಡಿದರೆ ಒಂಬತ್ತು ತಿಂಗಳಲ್ಲಿ ಮಗು ಆಗುತ್ತದೆ.ಅಂದರೆ ಬೇಸಿಗೆ ಸಮಯದಲ್ಲಿ ಮಗು ಜನಿಸುತ್ತದೆ. ಬೇಸಿಗೆಯಲ್ಲಿ ಮಗು ಉಷ್ಣತೆಯನ್ನು ತಡೆದುಕೊಳ್ಳಲಾರದೆಂದು ಮುನ್ನೆಚ್ಚರಿಕೆಯಿಂದ ಆಷಾಡ ಮಾಸದಲ್ಲಿ ದೂರ ಇರುತ್ತಾರೆ.

ಹಾಗೇ ನೋಡಿದರೆ ನವ ದಂಪತಿಗಳ ನಡುವೆ ಸ್ವಲ್ಪ ಅಂತರ ಇದ್ದರೆ ಒಳ್ಳೆಯದು . ಹೆಚ್ಚು ಅಂಟಿಕೊಂಡಿದ್ದರೆ ಸ್ವಲ್ಪ ಸಮಯದ ನಂತರ ಅವರಿಬ್ಬರ ನಡುವೆ ತಿರಸ್ಕಾರ ಏರ್ಪಡಬಹುದು. ಪ್ರೀತಿಯ ಮಧ್ಯ ಸ್ವಲ್ಪ ಅಂತರ ಇದ್ದರೆ ಅದು ಗಾಢವಾಗಿ ಪ್ರೀತಿ ಆಗುತ್ತದೆ. ಆದ ಕಾರಣ ಆಷಾಡ ಮಾಸದಲ್ಲಿ ಗಂಡ ಹೆಂಡತಿ ದೂರ ಇರುತ್ತಾರೆ. ನೋಡಿದಿರಲ್ಲಾ ಇಷ್ಟೆಲ್ಲಾ ಕಾರಣಗಳಿಗಾಗಿ ಈ ಸಂಪ್ರದಾಯ ಜಾರಿಯಲ್ಲಿದೆ.ನಿಮ್ಮ ಅಭಿಪ್ರಾಯ ಕಾಮೆಂಟ್ ಮಾಡಿ.

LEAVE A REPLY

Please enter your comment!
Please enter your name here