ನನ್ನ ಬಳಿ ಯಾರೂ ಸೆಲ್ಫಿ ತೆಗೆದುಕೊಳ್ಳುತ್ತಿಲ್ಲ ಎಂದು ಅತ್ತ ಹುಚ್ಚ ವೆಂಕಟ್

0
2818

ನಾನು ಬದಲಾಗಿದ್ದೇನೆ ಎಂದು ವೆಂಕಟ್ ಅಲ್ಲಲ್ಲ ಅವರೇ ಈಗಲೂ ಹೇಳಿಕೊಳ್ಳುವಂತೆ ಹುಚ್ಚ ವೆಂಕಟ್ ಒತ್ತಿ ಒತ್ತಿ ಹೇಳುತ್ತಿದ್ದಾರೆ. ಅದಕ್ಕಾಗಿ ಸುದ್ದಿಗೋಷ್ಟಿ ಕರೆದಿದ್ದ ಹುಚ್ ವೆಂಕಟ್ ನನಗೆ ಅರಿವಾಗಿದೆ. ಇದ್ದ ಷ್ಟು ದಿನ ನಾನು ಚೆನ್ನಾಗಿರಬೇಕು. ಇಷ್ಟು ದಿನ ಅಪ್ಪನ ದುಡ್ಡು ಹಾಳು ಮಾಡಿದೆ. ಈಗ ಅಪ್ಪನೂ ದುಡ್ಡು ಕೊಡುತ್ತಿಲ್ಲ ಎಂದು ಅವಲತ್ತುಕೊಂಡಿದ್ದಾರೆ.

ಅರ್ಧಕ್ಕೆ ನಿಲ್ಲಿಸಿದ್ದ ಸಿನಿಮಾಗಳನ್ನು ಪೂರ್ತಿಗೊಳಿಸಬೇಕಿದೆ. ಅದೂ ಅಲ್ಲದೇ ನನಗೆ ಖರ್ಚಿಗೆ ಹಣ ಇಲ್ಲ. ಇಷ್ಟು ದಿನ ಎಲ್ಲಿ ಹೋದರೂ ಗಲಾಟೆಯಿಂದ ಸುದ್ದಿಯಾಗುತ್ತಿದ್ದೆ. ಜನರು ನನ್ನ ಹತ್ತಿರ ಬರಲೂ ಹಿಂದೇಟು ಹಾಕುತ್ತಿದ್ದಾರೆ. ಮೊದಲೆಲ್ಲಾ ನಾನು ಹೋದ ಕಡೆ ಎಲ್ಲ ಅಭಿಮಾನಿಗಳು ನನ್ನ ಮುತ್ತುವರೆದು ಸೆಲ್ಫಿಗೆ ಹಾತೊರೆಯುತ್ತಿದ್ದರು. ಆದರೆ ಈಗ ನಾನು ಎಲ್ಲಿ ಹೊಡೆಯುತ್ತೇನೋ ಎಂದು ಭಯ ಬೀಳುತ್ತಾರೆ. ದಯವಿಟ್ಟು ನಾನು ಯಾರಿಗೂ ಹೊಡೆಯುವುದಿಲ್ಲ. ನನ್ನ ಹತ್ತಿರ ಸೆಲ್ಫಿ ತೆಗೆದುಕೊಳ್ಳಲು ಬನ್ನಿ ಎಂದು ಸುದ್ದಿಗೋಷ್ಠಿಯಲ್ಲಿ ಕಣ್ಣೀರಾದರು.

ನನಗೆ ಈಗ ಹಣದ ಅವಶ್ಯಕತೆ ಇದೆ. ದಯವಿಟ್ಟು ನನಗೆ ಸಿನಿಮಾದಲ್ಲಿ ಚಾನ್ಸ್ ಕೊಡಿ. ಗಾಯಕನಾಗಿ , ನಟ, ಸಣ್ಣ ಪಾತ್ರ, ಯಾವುದೇ ಆದರೂ ನಾನು ಮಾಡುತ್ತೇನೆ.ನನ್ನ ಕೆಲಸ ಏನಿದೆಯೋ ಅದನ್ನು ಅಚ್ಚುಕಟ್ಟಾಗಿ ಮಾಡುತ್ತೇನೆ. ಚಿತ್ರೀಕರಣದ ಸಮಯದಲ್ಲಿ ಗಲಾಟೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಅಭಿಮಾನಿಗಳೇ ನನ್ನ ಪಾಲಿನ ದೇವರು. ಅವರು ನನ್ನಿಂದ ದೂರಾದರೆ ನನಗೆ ಸಹಿಸಿಕೊಳ್ಳುವುದಕ್ಕಾಗಲ್ಲ ಎಂದು ಕೈ ಮುಗಿದರು.

ಹುಚ್ಚ ವೆಂಕಟ್ ಈಗ್ಹೆ ಒಂದೆರಡು ವರ್ಷಗಳ ಹಿಂದೆ ಸಡನ್ನಾಗಿ ಎದ್ದು ಸುದ್ದಿಯಾದ ಒಂದು ಅಚ್ಚರಿ.ಈ ಮನುಷ್ಯನಿಗೆ ಟಾಲೆಂಟ್ ಇದ್ದರೂ ಮಾಧ್ಯಮಗಳ ಅತಿರೇಕದಿಂದ ದಾರಿ ತಪ್ಪಿರಬಹುದು. ನನ್ ಮಗಂದ್ ಎಂಬುದನ್ನು ಕೂಗಾಡುವುದನ್ನು ಅತಿರೇಕಗೊಳಿಸಿದಾಗ ಆತ ಅದನ್ನು ಕಂಟಿನ್ಯೂ ಮಾಡುತ್ತಾನೆ. ಆಗಲೇ ಅವನನ್ನು ತಿರಸ್ಕರಿಸಿದ್ದರೆ ಅವನು ಹುಚ್ಚನ ಸ್ಥಿತಿಗೆ ತಲುಪುತ್ತಿರಲಿಲ್ಲ. ಬಿಗ್ಬಾಸ್ ಮನೆಯೊಳಗೆ ಹೋದಾಗ ಅವನ ಒಳ ಮನಸ್ಸು ಎಲ್ಲರಿಗೂ ಅರ್ಥವಾಗಿತ್ತು. ಅವನಲ್ಲೂ ಒಳ್ಳೆಯತನವಿದೆ.ಚುರುಕುತನ, ಪ್ರತಿಭೆ ಇದೆ.ಆದರೆ ಅದನ್ನು ಆತ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ ಅಷ್ಟೇ. ಇನ್ಮೆಲಾದರೂ ಅವನಿಗೆ ಒಳ್ಳೆಯದಾಗಲಿ.

LEAVE A REPLY

Please enter your comment!
Please enter your name here