video : 6 ವರುಷದ ಫೋರ 3000ಕ್ಕೂ ಅಧಿಕ ಪುಶ್ ಅಪ್ಸ್ ಮಾಡಿ ಐಶಾರಾಮಿ ಅಪಾರ್ಟ್ಮೆಂಟ್ ಗೆದ್ದಿದ್ದಾನೆ..!!

0
5636

ಸಾಧನೆಗೆ ವಯಸ್ಸಿಲ್ಲ ಎಂಬ ಮಾತನ್ನು ಸಾಮಾನ್ಯವಾಗಿ ಎಲ್ಲರೂ ಕೇಳಿರುತ್ತೇವೆ, ಆದರೆ ಅದಕ್ಕೆ ತಕ್ಕಂತಹ ಉದಾಹರಣೆಯನ್ನು ಇಂದು ನಾವು ನಿಮಗೆ ನೀಡಲು ಬಯಸುತ್ತೇವೆ, ರಷ್ಯಾದಲ್ಲಿ ಆರು ವರ್ಷದ ಬಾಲಕನೊಬ್ಬ ಒಮ್ಮೆಲೆ ಬರೋಬ್ಬರಿ ಮೂರು ಸಾವಿರ ಪುಶ್ ಅಪ್ಸ್ ಮಾಡುವ ಮೂಲಕ ಐಷಾರಾಮಿ ಅಪಾರ್ಟ್ಮೆಂಟ್ ಒಂದನ್ನು ಬಹುಮಾನವಾಗಿ ಪಡೆದಿದ್ದಾನೆ.

ಆರು ವರ್ಷದ ಬಾಲಕ 3000ಕ್ಕೂ ಅಧಿಕ ಪುಶ್ ಅಪ್ಸ್ ಮಾಡುವುದು ಎಂದರೆ ಸಾಮಾನ್ಯದ ವಿಚಾರ ಅಲ್ಲವೇ ಅಲ್ಲ, ಹಲವರು ಇದನ್ನು ನಂಬುವುದು ಇಲ್ಲ ಆದರೆ ಇದು ಸತ್ಯ ಘಟನೆ, ರಷ್ಯಾದಲ್ಲಿ ವಾಸವಾಗಿರುವ ಇಬ್ರಾಹಿಂ ಲ್ಯೋನೋವ್ ಎಂಬುವ ಯುವಕ ಬಿಡುವಿಲ್ಲದೆ 3270 ಪುಶ್ ಅಪ್ಸ್ ಮಾಡಿದ್ದಾನೆ ಹಾಗೂ ಅಪಾರ್ಟ್ಮೆಂಟ್ ಬಹುಮಾನವಾಗಿ ಪಡೆದಿದ್ದಾನೆ.

ತನ್ನ ತಂದೆಯಿಂದ ಹಲವು ಆರ್ಥಿಕ ಸಮಸ್ಯೆಗಳನ್ನು ತೀರಿಸುವ ಸಲುವಾಗಿ ಪುಷ್ ಆಪ್ಸ್ ಸ್ಪರ್ಧೆಗೆ ಸೇರಿ ವಿಜೇತ ನಾಗಿದ್ದಾನೆ, ತಂದೆ ಹಾಗೂ ಮಗ ಎಂಬರು ಕ್ರೀಡಾ ಆಸಕ್ತಿಯನ್ನು ಹೊಂದಿದ್ದರು ಹಾಗೂ ಇದಕ್ಕಾಗಿಯೇ ಬಹಳಷ್ಟು ಶ್ರಮವನ್ನು ಪಟ್ಟಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿದೆ, ಬಾಲಕನಿಗೆ ಇರುವ ಫಿಟ್ನೆಸ್ ನೋಡಿ ಆಶ್ಚರ್ಯಗೊಂಡ ಸ್ಥಳೀಯ ಕ್ರೀಡಾ ಸಂಸ್ಥೆಯೊಂದು ಈತನಿಗೆ ದೊಡ್ಡ ಐಷಾರಾಮಿ ಅಪಾರ್ಟ್ಮೆಂಟ್ ಉಡುಗೊರೆಯಾಗಿ ನೀಡಿ ಪ್ರೋತ್ಸಾಹ ನೀಡಿದೆ.

ಅಷ್ಟೇ ಅಲ್ಲದೆ ಈ ಬಾಲಕ ರಷ್ಯಾ ಬುಕ್ ಆಫ್ ರೆಕಾರ್ಡ್ ನಲ್ಲಿ ಹೆಸರು ಬರೆದು ದಾಖಲೆ ಮಾಡಿದ್ದಾರೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.

LEAVE A REPLY

Please enter your comment!
Please enter your name here