ಈ 6 ಕಾಯಿಲೆಗಳಿಗೆ ತುಳಸಿ ಮನೆ ಮದ್ದು..!! ತಪ್ಪದೆ ಓದಿ.

0
727
Loading...
Loading...
Loading...

ತುಳಸಿಗೆ ನಮ್ಮ ಧರ್ಮದಲ್ಲಿ ಹಾಗು ನಮ್ಮಯ ಮನಸ್ಸಿನಲ್ಲಿ ಬಹಳಷ್ಟು ಪೂಜ್ಯ ಭಾವ, ತುಳಸಿ ಗಿಡ ಇಲ್ಲದ ಮನೆಯೇ ಇಲ್ಲ ಎಂದರೆ ತಪ್ಪಾಗಲಾರದು, ಮನೆಯ ಮುಂದೆ ಬೆಳೆಯುವ ಅಥವಾ ಬೆಳಸುವ ತುಳಸಿಯನ್ನು ಪ್ರತಿ ದಿನ ಸಂಜೆ ಮನೆಯ ಸುಮಂಗಲಿಯರು ಪೂಜಿವ ಆಚರೆ ಉಂಟು, ಇದರಿಂದ ಮನೆಯ ಆರ್ಥಿಕ ಸ್ಥಿತಿ ಗಟ್ಟಿಯಾಗಿರುತ್ತದೆ, ಅಲ್ಲದೆ ಮನೆಯೊಳಗೇ ಯಾವುದೇ ದುಷ್ಟ ಶಕ್ತಿಗಳ ಪ್ರವೇಶವಾದರೆ ಈ ಗಿಡ ಒಣಗುವ ಮುಕಾಂತರ ಸಂದೇಶವನ್ನು ನೀಡಲಾಗುತ್ತದೆ ಎಂಬುವುದು ಧಾರ್ಮಿಕರ ನಂಬಿಕೆ.

ಇನ್ನು ವೈಜ್ಞಾನಿಕವಾಗಿ ಹೇಳುವದಾದರೆ ತುಳಸಿಯಿಂದ ಮಾನವನ ದೇಹಕ್ಕೆ ಹಲವು ಉಪಯೊಗಳು, ಸಂಶೋಧನೆಗಳ ಮುಕಾಂತರ ಕಂಡುಕೊಂಡ ಹಾಗು ಆಯುರ್ವೇಧದಲ್ಲಿ ತಿಳಿಸಿರುವ ತುಳಸಿಯ ಹಲವು ಅರೋಗ್ಯ ಲಾಭಗಳನ್ನು ತಿಳಿಸುತ್ತೇವೆ ಮುಂದೆ ಓದಿ.

ಮುಖದ ಮೇಲೆ ಮೊಡವೆಗಳಿದ್ದರೆ ತುಳಸಿ ಎಲೆಗಳನ್ನು ಅರೆದು ಹಚ್ಚಿದರೆ ಮೊಡವೆಗಳು ಕಡಿಮೆಯಾಗುತ್ತದೆ.

ಪ್ರತಿದಿನ ತುಳಸಿ ಎಲೆಗಳನ್ನು 5-10 ಬೆಳ್ಳಿಗೆ ಖಾಲಿಹೊಟ್ಟೆಯಲ್ಲಿ ಅಗಿದು ತಿನ್ನುವುದರಿಂದ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ.

ವಾಂತಿ ನಿವಾರಣೆಗೆ ಒಂದು ಚಮಚ ತುಳಸಿ ರಸ, ಎರಡು ಏಲಕ್ಕಿ ಪುಡಿ ನೀರಿನಲ್ಲಿ ಬೆರಸಿ ಕುಡಿದರೆ ವಾಂತಿ ನಿಲ್ಲುವುದು.

ಬಾಯಿಯ ಹುಣ್ಣು ಮತ್ತು ಬಾಯಿಯ ದುರ್ವಾಸನೆ ನಿವಾರಣೆಗೆ 10-15 ತುಳಸಿ ಎಲೆಗಳನ್ನು ಅಗಿದು ನಾಲಗೆಯಿಂದ ಚೆನ್ನಾಗಿ ಬಾಯಾಡಿಸಿ ನೀರಿನಿಂದ ಮುಕ್ಕಳಿಸುತ್ತಿರಬೇಕು, ಹುಣ್ಣು ಕ್ರಮೇಣ ಕಡಿಮೆಯಾಗಿ ಬಾಯಿ ಶುದ್ದಿಯಾಗುವುದು.

ಒಂದು ಚಮಚ ತುಳಸಿ ರಸಕ್ಕೆ ,1/4 – 1/2 ಶುಂಠಿ ರಸ ಸ್ವಲ್ಪ ಜೇನುತುಪ್ಪ ಬೆರಸಿ ಚಿಕ್ಕ ಮಕ್ಕಳಿಗೆ ಕುಡಿಸಿದರೆ ಹೊಟ್ಟೆನೋವಿನ ತೊಂದರೆ ನಿವಾರಣೆಯಾಗುತ್ತದೆ.

2 ಚಮಚ ತುಳಸಿ ಎಲೆಯ ರಸವನ್ನು ಜೇನುತುಪ್ಪದೊಂದಿಗೆ ದಿನಕ್ಕೆ 3 ಬಾರಿ ಸೇವಿಸಿದರೆ ಕೆಮ್ಮು ನೆಗಡಿ ಕಡಿಮೆಯಾಗುತ್ತದೆ.

ತುಳಸಿ ಎಲೆಯ ರಸವನ್ನು ಹಾಲು ಸಕ್ಕರೆಯೊಂದಿಗೆ ಬೆರಸಿ ಕುಡಿದರೆ ಉರಿಮೂತ್ರದ ತೊಂದರೆ ನಿವಾರಣೆಯಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

Loading...

LEAVE A REPLY

Please enter your comment!
Please enter your name here