ನಮ್ಮ ಪೂರ್ವಜರ ಜೀವನ ಶೈಲಿಯನ್ನು ನಾವು ನೋಡುವುದಾದರೆ, ಅವರು ಮನೆಯ ಹಿತ್ತಲಲ್ಲಿ ಬೆಳೆಯುವ ನೈಸರ್ಕಿಕ ಗಿಡ-ಬಳ್ಳಿಗಳ ಸಹಾಯದಿಂದ ಹಲವಾರು ರೋಗಗಳನ್ನು ಗುಣಪಡಿಸಿಕೊಳ್ಳುತ್ತಿದ್ದರು. ಇಂದಿನ ಪೀಳಿಗೆಯ ಜನರು ಮಾರುಕಟ್ಟೆಗಳಲ್ಲಿ ಸಿಗುವ ರಾ’ಸಾಯನಿಕ ವಸ್ತುಗಳ ಮೊರೆ ಹೋಗುವುದು ಹೆಚ್ಚು. ನೈಸರ್ಗಿಕವಾಗಿ ನಮ್ಮ ತ್ವಚೆಯನ್ನು ಕಾಪಾಡುವುದು ಹೇಗೆ ಎಂಬ ಪ್ರಶ್ನೆ ನಮ್ಮೆಲ್ಲರನ್ನೂ ಕಾ’ಡುತ್ತದೆ.
ಮೊಡವೆಗಳು ಮತ್ತು ಮುಖದಲ್ಲಿನ ಕ’ಲೆಗಳು ನಿವಾರಣೆಯಾಗಲು ಇಲ್ಲಿದೆ ಸರಳ ಉಪಾಯಗಳು. ಪ್ರತಿ ನಾಲ್ಕು ಗಂಟೆಗೊಮ್ಮೆ ಸೌತೆಕಾಯಿ ರ’ಸವನ್ನು ಹಚ್ಚುತ್ತಿದ್ದರೆ ಮೊಡವೆಗಳು ಮಾಯವಾಗುತ್ತವೆ. ಮುಖದಲ್ಲಿನ ಕಲೆಗಳು ಕೂಡ ನಿವಾರಣೆಯಾಗುತ್ತದೆ. ಸೌತೆಕಾಯಿ ರ’ಸ ಹಚ್ಚಿಕೊಂಡ ನಂತರ ಮುಖ ತೊಳೆಯಲು ಸೋಪನ್ನು ಬಳಸಬೇಡಿ. ಮುಖದ ಕಲೆಗಳಿಂದ ಬಳಲುತ್ತಿರುವವರು ಹೀಗೆ ಮಾಡಿ. ಜೇನುತುಪ್ಪವನ್ನು ಸ್ವಲ್ಪ ಬೆಚ್ಚಗೆ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಿಟ್ಟು ಬೆಚ್ಚಗಿನ ನೀರಿನಲ್ಲಿ ಮುಖ ತೊಳೆಯಿರಿ. ಕಪ್ಪು ಕಲೆಗಳು ಮಾಯವಾಗುತ್ತದೆ.
ಕಪ್ಪುಚುಕ್ಕೆ ನಿವಾರಣೆ : ಮುಖದಲ್ಲಿ ಹೊಸದಾಗಿ ಕಾಣಿಸಿಕೊಂಡ ಕಪ್ಪುಚುಕ್ಕಿ ಮತ್ತು ಕಲೆಗಳ ನಿವಾರಣೆಗೆ ಹೀಗೆ ಮಾಡಬೇಕು. ಮುಖದಲ್ಲಿ ಹೊಸದಾಗಿ ಎದ್ದ ಕಪ್ಪುಚುಕ್ಕೆಗಳು ಮತ್ತು ಕಲೆಗಳಿಗೆ ಬೀಟ್ರೂಟ್ ಎಲೆಯ ರ’ಸ ಮತ್ತು ಜೇನುತುಪ್ಪವನ್ನು ಸೇರಿಸಿ ಚೆನ್ನಾಗಿ ಕಲಸಿಕೊಳ್ಳಿ. ಇದನ್ನು ರಾತ್ರಿ ಮಲಗುವಾಗ ಮುಖಕ್ಕೆ ಹಚ್ಚಿಕೊಳ್ಳಬೇಕು. ನಂತರ ಬೆಳಗ್ಗೆ ತೊಳೆದುಕೊಳ್ಳಬೇಕು. ಇದರಿಂದ ಕಲೆಯು ಮಾಯವಾಗುತ್ತದೆ.
ಪ್ರತಿದಿನವೂ ಬೆಳಿಗ್ಗೆ ಹಾಗು ರಾತ್ರಿ, ಹಾಲಿನ ಕೆನೆಯ ಜೊತೆ ನಿಂಬೆರ’ಸ ಸೇರಿಸಿ ಮುಖಕ್ಕೆ ಹಚ್ಚಿಕೊಳ್ಳಬೇಕು. ಈ ಚಿಕಿತ್ಸೆಯಿಂದ ಮುಖದ ಕಲೆಗಳು ನಿವಾರಣೆಯಾಗಿ ಮುಖವು ಕಾಂತಿಯುಕ್ತವಾಗುತ್ತದೆ. ಬೀಟ್ರೂಟ್ ಎಲೆಯ ರಸ ಮತ್ತು ಜೇನು ತುಪ್ಪ ಕಲಿಸಿ ರಾತ್ರಿ ಮಲಗುವಾಗ ಬೆಳಿಗ್ಗೆ ನೀರಿನಲ್ಲಿ ತೊಳೆಯಿರಿ. ಸ್ವಲ್ಪ ಸಮಯದ ತನಕ ಪ್ರತಿದಿನ ಹೀಗೆ ಮಾಡುತ್ತಾ ಬಂದರೆ ಕಲೆಗಳು ಮಾಯವಾಗುತ್ತದೆ.
ಕಾಂತಿ ಹೆಚ್ಚಿಸಲು : ಮುಖದ ಕಾಂತಿಯನ್ನು ಹೆಚ್ಚಿಸಲು ಇಲ್ಲಿವೆ ಹಲವಾರು ನೈಸರ್ಗಿಕ ಉಪಾಯಗಳು. ಮುಖದ ಕಾಂತಿಗೆ ಸೌತೆಕಾಯಿಯ ಹೋಳನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಸ್ವಲ್ಪ ಬೋ’ರಿಕ್ ಪೌಡರ್ ಸೇರಿಸಿ ಅದನ್ನು ಮುಖಕ್ಕೆ ಸಿಂಪಡಿಸಿ ತೊಳೆಯಬೇಕು. ಟೊಮೇಟೊ ಹಣ್ಣಿನ ರಸವನ್ನು ಲೇಪಿಸಿದರೆ ಕಾಂತಿ ಬರುತ್ತದೆ. ಹೊಂಗೆ ಬೀಜವನ್ನು ಹಾಲಿನಲ್ಲಿ ತೇಯ್ದು, ಮುಖಕ್ಕೆ ನಿತ್ಯ ರಾತ್ರಿ ಹಚ್ಚಿ ಬೆಳಗ್ಗೆ ತೊಳೆಯಬೇಕು.
ಮಚ್ಛೆಗಳ ನಿವಾರಣೆ : ಅಮೃತ ಬಳ್ಳಿಯ ಎಲೆ ಅಥವಾ ಕಾಯಿಯ ರಸವನ್ನು ನಿತ್ಯ ರಾತ್ರಿ ಮುಖಕ್ಕೆ ಲೇಪಿಸುವುದರಿಂದ ಮುಖದ ಕಾಂತಿ ಉಂಟಾಗಿ ಮುಖದ ಮೇಲಿನ ಮಚ್ಚೆಗಳು ನಿವಾರಣೆಯಾಗುತ್ತದೆ. ಸೌತೆಕಾಯಿ ರಸ ನಿಂಬೆ ರಸ ಸೇರಿಸಿ ರಾತ್ರಿ ಬೆಳಗ್ಗೆ ಮುಖಕ್ಕೆ ಲೇಪಿಸಬೇಕು. ಇದರಿಂದಲೂ ಸಹ ಮುಖದ ಕಾಂತಿ ಹೆಚ್ಚುತ್ತದೆ. ಟೊಮೇಟೊ ಹಣ್ಣಿನ ರಸವನ್ನು ಮುಖಕ್ಕೆ ಲೇಪಿಸುವುದರಿಂದ ಮುಖದ ಸೌಂದರ್ಯ ಹೆಚ್ಚುತ್ತದೆ. ಕಿತ್ತಳೆ ಹಣ್ಣಿನ ಸಿಪ್ಪೆಯನ್ನು ಮುಖಕ್ಕೆ ತಿಕ್ಕುವುದರಿಂದಲೂ ಮುಖವೂ ಕಾಂತಿಯುಕ್ತವಾಗುತ್ತದೆ ಈ ಕ್ರಮವನ್ನು ಅಗತ್ಯವಿರುವ ತನಕ ಮಾಡಿಕೊಳ್ಳಬಹುದು.
ಕಾಂತಿ ಹೆಚ್ಚಿಸಲು : ಸೌತೆಕಾಯಿಯ ಹೋಳುಗಳನ್ನು ನೀರಿನಲ್ಲಿ ಕುದಿಸಿ ಅದಕ್ಕೆ ಸ್ವಲ್ಪ ಬೋ’ರಿಕ್ ಪೌಡರ್ ಹಾಕಿ ಚೆನ್ನಾಗಿ ಕಲಿಸಿಕೊಳ್ಳಬೇಕು ನೀರಿನಿಂದ ಮುಖವನ್ನು ಮತ್ತೆ ಮತ್ತೆ ತೊಳೆಯುತ್ತಿದ್ದರೆ ಮುಖದ ಚರ್ಮದ ಕಾಂತಿ ಹೆಚ್ಚುತ್ತದೆ. ಬೇಸಿಗೆಕಾಲದ ಸಮಯದಲ್ಲಿ ಮುಖದ ಚರ್ಮ ಒಣಗುವುದು ಸುಲಭ ಆದ್ದರಿಂದ ಪ್ರತಿನಿತ್ಯ ರಾತ್ರಿ ಮಲಗುವಾಗ ಮುಖಕ್ಕೆ ಟೊಮೇಟೊ ಹಣ್ಣಿನ ರಸ ಅಥವಾ ಒಣದ್ರಾಕ್ಷಿಯನ್ನು ಹಾಲಿನಲ್ಲಿ ನುಣ್ಣಗೆ ಅರೆದು ಹಚ್ಚಿಕೊಳ್ಳಬೇಕು. ಅಗತ್ಯ ಕಂಡಷ್ಟು ದಿನ ಇದನ್ನು ಹಚ್ಚುತ್ತಾ ಬಂದರೆ ತ್ವಚೆ ಒಣಗುವುದಿಲ್ಲ.
ಪಪ್ಪಾಯ ಫೇಸ್ ಮಾಸ್ಕ : ಮುಖ ಆಕರ್ಷಕವಾಗಲು ವಾರಕ್ಕೆ ಎರೆಡು ಬಾರಿ ಪಪ್ಪಾಯ ಹಣ್ಣಿನ ಪ್ಯಾಕ್ ಹಚ್ಚಿಕೊಳ್ಳಿ. ಪಪ್ಪಾಯಿ ಹಣ್ಣನ್ನು ರುಬ್ಬಿಕೊಂಡು ಅದನ್ನು ಮುಖಕ್ಕೆ ಲೇಪಿಸಿಕೊಳ್ಳಿ. ಸ್ವಲ್ಪ ಹೊತ್ತು ಬಿಟ್ಟು ತೊಳೆಯಿರಿ. ದ್ರಾಕ್ಷಿಯ ಜ್ಯೂಸು ಮಾಡಿಕೊಂಡು ಕುಡಿದರೆ ತ್ವಚೆಗೆ ತುಂಬಾ ಒಳ್ಳೆಯದು. ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ. ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ. ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.