ಕೊರೊನ ವೈರಾಣುವಿನಿಂದ ಮಧ್ಯಮವರ್ಗ ಹಾಗೂ ಬಡವರ್ಗದ ಜನರು ತುತ್ತು ಅನ್ನಕ್ಕಾಗಿ ಪರಿತಪಿಸುವ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ಮಧ್ಯಪ್ರದೇಶದ ಇಂದೋರ್ ನಲ್ಲಿ ಪಾಲಿಕೆ ಅಧಿಕಾರಿಯೊಬ್ಬರು ಬೀದಿ ವ್ಯಾಪಾರಿಯೊಂದಿಗೆ ವರ್ತಿಸಿರುವ ರೀತಿಯನ್ನು ನೋಡಿ ಸಾಮಾಜಿಕ ಜಾಲತಾಣದಲ್ಲಿ ಅತ್ಯಂತ ವಿರೋಧ ವ್ಯಕ್ತವಾಗುತ್ತಿದೆ.
ನಡೆದಿದ್ದೇನು : ಬೀದಿಯಲ್ಲಿ ಮೊಟ್ಟೆ ವ್ಯಾಪಾರ ಮಾಡುವ 14 ವರ್ಷದ ಬಾಲಕ ತಳ್ಳುವ ಗಾಡಿಯಲ್ಲಿ ವ್ಯಾಪಾರಕ್ಕಾಗಿ ಮೊಟ್ಟೆಯನ್ನು ಇಟ್ಟುಕೊಂಡು ಸಾಗುತ್ತಿದ್ದ, ಅದೇ ಸಮಯದಲ್ಲಿ ಅಲ್ಲಿಗೆ ಬಂದ ಪಾಲಿಕೆ ಅಧಿಕಾರಿಯೊಬ್ಬರು ಮೊದಲು ಇಲ್ಲಿ ವ್ಯಾಪಾರ ಮಾಡಲು ಅನುಮತಿ ಇಲ್ಲ ನಿನ್ನ ಗಾಡಿಯನ್ನು ತೆಗೆ ಎಂದು ಹೇಳಿದ್ದಾರೆ ಹಾಗೂ ನಂತರ ನೂರು ರೂಪಾಯಿ ಲಂಚ ಕೇಳಿದ್ದಾರೆ ಕೊರೊನ ವೈರಸ್ ಸಂದರ್ಭದಿಂದ ವ್ಯಾಪಾರ ಕಡಿಮೆ ಇದ್ದ ಕಾರಣ ಆ ಬಾಲಕ ನೂರು ರೂಪಾಯಿ ಲಂಚ ಕೊಡಲು ಸಾಧ್ಯವಿಲ್ಲ ಎಂದು ಹೇಳಿದ್ದಾನೆ, ಇಷ್ಟಕ್ಕೆ ಕುಪಿತನಾದ ಪಾಲಿಕೆ ಅಧಿಕಾರಿ ಮೊಟ್ಟೆಯ ಗಾಡಿಗೆ ನೆಲಕ್ಕೆ ಬೀಳಿಸಿ ಆತ ತಂದಿದ್ದ ಅಷ್ಟು ಮೊಟ್ಟೆಯನ್ನು ನಾಶ ಮಾಡಿದ್ದಾನೆ.
ಬಡವರ ನೆರವಿಗೆ ನಿಲ್ಲ ಬೇಕಿರುವ ಅಧಿಕಾರಿಗಳು ಈ ರೀತಿ ಬಡವರನ್ನು ಶೋಷಣೆ ಮಾಡಿ ತಮ್ಮ ದರ್ಪವನ್ನು ಮೆರೆಸಿದರೆ ಹೇಗೆ ಎಂದು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋವನ್ನು ನೋಡಿದ ನೆಟ್ಟಿಗರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.