ಲಾಕ್ ಡೌನ್ ನಿಯಮ ಪಾಲಿಸಲು ಇಂದು ತಮ್ಮ ತಂದೆಯ ಅಂತ್ಯಕ್ರಿಯೆಗೆ ಹೋಗದ ಆದಿತ್ಯನಾಥ್!

0
5131

ಸರ್ಕಾರದ ನಿಯಮ ಎಂದರೆ ಅದು ಸಾರ್ವಜನಿಕರಿಗೆ ಮಾತ್ರವಲ್ಲ ಸರ್ಕಾರದ ಅಧಿಕಾರಿಗಳಿಗೂ ನಿಯಮ ಅನ್ವಯವಾಗುತ್ತದೆ, ಅದನ್ನು ಎಲ್ಲರೂ ಸಮವಾಗಿ ಪಾಲಿಸಲೇಬೇಕು ಎನ್ನುವ ಹಲವು ಮಾತುಗಳನ್ನು ರಾಜಕಾರಣಿಗಳ ಬಾಯಲ್ಲಿ ನೀವು ಕೇಳಿರುತ್ತೀರಿ ಹೊರತು ಮಾಡಿ ತೋರಿಸಿರುವುದನ್ನು ಕಂಡಿರುವುದಿಲ್ಲ, ಆದರೆ ಇಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಇಡೀ ದೇಶಕ್ಕೆ ಮಾದರಿಯಾಗಿದ್ದಾರೆ.

ಉತ್ತರಪ್ರದೇಶದ ಮುಖ್ಯಮಂತ್ರಿಗಳಾದ ಇವರು ಲಾಕ್ಡೌನ್ ಇದೆ ಎನ್ನುವ ಕಾರಣಕ್ಕಾಗಿ ಹಾಗೂ ಅದನ್ನು ಉಲ್ಲಂಘಿಸಿ ಕಾನೂನು ವಿರುದ್ಧವಾದ ನಿರ್ಧಾರವನ್ನು ತೆಗೆದುಕೊಳ್ಳಬಾರದು ಎಂದು ತಮ್ಮ ಸ್ವಂತ ತಂದೆಯ ಅಂತಿಮ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಹೋಗಲೇ ಇಲ್ಲ, ಇಂದು ಬೆಳಗ್ಗೆ 10:40 ರ ವೇಳೆಗೆ ಆದಿತ್ಯನಾಥ ಅವರ ತಂದೆ ಆನಂದ್ ಸಿಂಗ್ ಬೀಶ್ಟ್ (89) ದೆಹಲಿಯ ಆಸ್ಪತ್ರೆಯಲ್ಲಿ ನಿಧನರಾದರು, ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಇವರನ್ನು ಐಸಿಯುನಲ್ಲಿ ಇರಿಸಲಾಗಿತ್ತು, ಆದರೆ ಚಿಕಿತ್ಸೆ ಫಲಕಾರಿಯಾಗಲಿಲ್ಲ, ಇನ್ನು ಇವರ ಅಂತಿಮ ಕಾರ್ಯ ನೆರವೇರಿಸಲು ಮಗ ಬರಬೇಕು ಅಲ್ಲವೇ ಅದು ಆತನ ತಂದೆಯ ಕೊನೆ ಋಣ, ಆದರೆ ಮುಖ್ಯಮಂತ್ರಿಗಳು ತಮ್ಮ ತಂದೆಯ ಅಂತಿಮ ಕಾರ್ಯ ನೆರವೇರಿಸಲು ಹೋಗುತ್ತಿಲ್ಲ ಎಂದು ಸುರಹ್ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ಆದ ಅವನಿಷ್ ಕೆ ಅವಸ್ಥಿ ತಿಳಿಸಿದರು.

ಇಂತಹ ನಾಯಕರು ದೇಶದ ಇತರ ರಾಜಕೀಯ ನಾಯಕರಿಗೆ ಮಾದರಿಯಾಗಬೇಕು, ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಬರೆದು ತಿಳಿಸಿ.

LEAVE A REPLY

Please enter your comment!
Please enter your name here