ಕರ್ನಾಟಕ ಸೇರಿದಂತೆ ಹೊರ ರಾಜ್ಯದಲ್ಲಿಯೂ ಕುಡುಕರು ಕುಡಿಯಲು ಎಣ್ಣೆ ಸಿಗದೆ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದಾರೆ, ಹಾಗೂ ಇದರಿಂದ ಹೊರಬರಲು ಸಾಧ್ಯವಾಗದೆ ಆತ್ಮಹತ್ಯೆ ಅಂತಹ ಕ್ರೂರ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ, ಈ ಪರಿಸ್ಥಿತಿಯನ್ನು ಕಂಡು ಎಚ್ಚರಗೊಂಡ ಕೇರಳದ ಸರ್ಕಾರ ಆನ್ಲೈನಲ್ಲಿ ಮದ್ಯ ಮಾರಾಟ ಮಾಡಲು ಚಿಂತನೆ ನಡೆಸಿದೆ, ಅಷ್ಟೇ ಅಲ್ಲದೆ ಮಧ್ಯ ಸಿಗದೆ ಆತ್ಮಹತ್ಯೆಗೆ ಪ್ರಯತ್ನಿಸಿದವರನ್ನು ಅಥವಾ ಕಿನ್ನತೆಗೆ ಒಳಗಾದವರನ್ನು ಉಚಿತವಾಗಿ ಚಿಕಿತ್ಸೆ ನೀಡುವ ವ್ಯವಸ್ಥೆ ಮಾಡಲಾಗುವುದು, ಇದಕ್ಕಾಗಿ ಅಬಕಾರಿಇಲಾಖೆ ಚಿಕಿತ್ಸೆ ನೀಡುತ್ತದೆ ಎಂದು ಕೇರಳದ ಸಿಎಂ ಮಾಹಿತಿ ನೀಡಿದ್ದಾರೆ.
ಕರ್ನಾಟಕದಲ್ಲಿ ಕುಡುಕರ ಇದೇ ಪರಿಸ್ಥಿತಿ ಮುಂದುವರೆದಿದೆ ವಿಸ್ತರಿಸಿ ಹೇಳುವುದಾದರೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಬ್ಬರು, ಬೀದರ್ ಮತ್ತು ಹುಬ್ಬಳ್ಳಿಯಲ್ಲಿ ತಲಾ ಒಬ್ಬರು ಮಧ್ಯ ಸಿಗದೆ ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣಗಳು ಇದೆ, ಇನ್ನು ಬಾಗಲಕೋಟೆಯಲ್ಲಿ ಮಧ್ಯ ಕಾಗಿ ಊರೆಲ್ಲಾ ಸುತ್ತಾಡಿ ಕೊನೆಗೆ ಸುಸ್ತಾಗಿ ಅಂಗಡಿಯೊಂದರ ಶಟರ್ ತೆಗೆಯಲು ಪ್ರಯತ್ನ ಪಟ್ಟ ಕುಡುಕ ಕೊನೆಗೆ ಅಂಗಡಿ ಶೆಟ್ಟರ್ ತೆಗೆಯಲು ಸಾಧ್ಯವಾಗದೆ ಕೋಲಿನಿಂದ ಗೋಡೆ ಒಡೆಯಲು ಮುಂದಾಗಿದ್ದಾನೆ.
ಬೆಂಗಳೂರಿನ ಮಹಾಲಕ್ಷ್ಮಿಲೇಔಟ್ ನಿವಾಸಿಯಾದ ಮಂಜುನಾಥ್ ಎನ್ನುವವರು ಸಿಎಂ ಹಾಗೂ ಅಬಕಾರಿ ಇಲಾಖೆಯವರಿಗೆ 6 ಅಡಿ ದೂರದಲ್ಲಿ ನಿಂತು ಎಣ್ಣೆ ಖರೀದಿ ಮಾಡುತ್ತೇವೆ ದಯಮಾಡಿ ಬೆಳಗ್ಗೆ 9 ರಿಂದ 12 ಗಂಟೆಯವರೆಗೆ ಎಂಎಸ್ಐಎಲ್ ಓಪನ್ ಮಾಡಿ ಎಂದು ವಾಟ್ಸಾಪ್ನಲ್ಲಿ ಮನವಿ ಮಾಡಿಕೊಂಡಿದ್ದಾರೆ, ಅಷ್ಟೇ ಅಲ್ಲದೇ ಮೈಸೂರಿನಲ್ಲಿ ಕೂಲಿ ಕಾರ್ಮಿಕರು ಹಾಗೂ ಗ್ರಾಮದ ಕೃಷಿಕರು ಮದ್ಯದಂಗಡಿ ತೆರೆಯಬೇಕು ಎಂದು ಪ್ರತಿಭಟನೆ ಮಾಡಿದ್ದಾರೆ, ಇಲ್ಲವಾದರೆ ನಮಗೆ ಕೆಲಸ ಮಾಡುವುದು ಅಸಾಧ್ಯ ಎಂದು ಬೇಡಿಕೊಂಡಿದ್ದಾರೆ.