ಹೌದು ಈ ಹಣ್ಣುಗಳಲ್ಲಿ ಹಲವು ರೀತಿಯ ರೋಗ ನಿರೋಧಕ ಶಕ್ತಿಗಳು ಹೆಚ್ಚಿವೆ, ಮಾನವನ ಆರೋಗ್ಯಕ್ಕೆ ಹಣ್ಣುಗಳು ತುಂಬಾನೇ ಮುಖ್ಯವಾಗಿವೆ. ಇದೆ ರೀತಿ ಕಿತ್ತಳೆ ಹಣ್ಣು ತಿನ್ನುವುದರಿಂದ ಮನುಷ್ಯನ ಆರೋಗ್ಯಕ್ಕೆ ತುಂಬಾ ಸಹಕಾರಿಯಾಗಿದೆ. ಈಗ ಇದೆ ಹಣ್ಣು ತಿನ್ನುವುದರಿಂದ ಮಾನವನ ನೆನಪಿನ ಶಕ್ತಿ ಹೆಚ್ಚಿಸಲು ಈ ಹಣ್ಣು ಸಹಕಾರಿಯಾಗಲಿದೆ ಅನ್ನೋದು ಹೊಸ ಸಂಶೋಧನೆಯಿಂದ ತಿಳಿದುಬಂದಿದೆ.
ಸಾಮಾನ್ಯವಾಗಿ ಮನುಷ್ಯನಿಗೆ ವಯಸ್ಸಾದ ಮೇಲೆ ನೆನಪಿನ ಶಕ್ತಿ ಕಡಿಮೆಯಾಗುದು ಸಾಮಾನ್ಯ, ಆದ್ರೆ ಈ ಒಂದು ಹೊಸ ಸಂಶೋಧನಾ ವರದಿ ಪ್ರಕಾರ ನೀವು ಕಿತ್ತಳೆ ಹಣ್ಣು ತಿನ್ನುವುದರಿಂದ ನಿಮಗೆ ವಯಸ್ಸಾದ ಮೇಲೆ ಬರುವಂತಹ ಮರೆವು ಇರುವುದಿಲ್ಲ ಅನ್ನೋದು ಸಂಶೋಧನಾ ವರದಿಯಾಗಿದೆ. ಪ್ರತಿದಿನ ಕಿತ್ತಳೆ ಹಣ್ಣು ತಿನ್ನುವುದರಿಂದ ವಯಸ್ಸಾದ ಮೇಲೆ ಮರೆಯುವ ಸಮಸ್ಯೆ ಕಾಡುವುದಿಲ್ಲವಂತೆ.
ಅಧ್ಯಯನದ ವರದಿ ಪ್ರಕಾರ, ವಯಸ್ಸಾದ ಮೇಲೆ ಬುದ್ಧಿಮಾಂದ್ಯ ರೋಗ ಬರದಂತೆ ಕಾಪಾಡುತ್ತದೆಯಂತೆ, ಜಪಾನ್ ನ ತೊಹುಕು ವಿಶ್ವವಿದ್ಯಾನಿಲಯ ಈ ಬಗ್ಗೆ ಅಧ್ಯಯನ ನಡೆಸಿದೆ. ಸಂಶೋಧಕರ ಪ್ರಕಾರ ಕಿತ್ತಳೆ ಹಣ್ಣಿನಲ್ಲಿ ಸಿಟ್ರಿಕ್ ಆಮ್ಲವಿರುತ್ತದೆ. ಅದ್ರಲ್ಲಿರುವ ರಾಸಾಯನಿಕ ಅಂಶವೊಂದು ನೆನಪಿನ ಶಕ್ತಿ ಹಾಳಾಗದಂತೆ ನೋಡಿಕೊಳ್ಳುತ್ತದೆ. ಎನ್ನುವುದು ಸಂಶೋಧನಾ ವರದಿ ಹೇಳಿದೆ.
ಈ ಒಂದು ಸಂಶೋದನೆಯಲ್ಲಿ ಸುಮಾರು 13 ಸಾವಿರಕ್ಕೂ ಹೆಚ್ಚು ಹಿರಿಯ ವಯಸ್ಸಿನ ಪುರುಷರು ಹಾಗೂ ಮಹಿಳೆಯರ ಮೇಲೆ ಹಲವಾರು ವರ್ಷಗಳ ಕಾಲ ಅಧ್ಯಯನ ನಡೆಸಿದ ಸಂಶೋಧಕರು ಪ್ರತಿದಿನ ಕಿತ್ತಳೆ ಸೇವನೆ ಮಾಡದವರಿಗಿಂತ ಪ್ರತಿದಿನ ಕಿತ್ತಳೆ ತಿನ್ನುವವರಲ್ಲಿ ಶೇಕಡಾ 23ರಷ್ಟು ಬುದ್ದಿಮಾಂದ್ಯ ಸಮಸ್ಯೆ ಕಡಿಮೆಯಾಗಿದೆ ಅನ್ನೋದು ಸಂಶೋಧನಾ ವರದಿ ತಿಳಿಸಿದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.