ಶಾನ್ವಿಯ ಮದುವೆಯಾಗುವರೇ ರಕ್ಷಿತ್ ಶೆಟ್ಟಿ! ಕುತೂಹಲ ಮೂಡಿಸಿದೆ ಅವರ ನಡೆ

0
3347

ಶಾನ್ವಿ ಮೇಲೆ ಮತ್ತೆ ರಕ್ಷಿತ್’ಗೆ ಲವ್ವಾಯ್ತಾ ? ಅಂತ ಹುಬ್ಬೇರಿಸಬೇಡಿ. ಆ ಸಾನ್ವಿ ರಕ್ಷಿತ್’ನ ಬಿಟ್ಟು ಹೋದಳು. ನಾವು ಹೇಳ್ತಿರೋದು ಕನ್ನಡದ ಮತ್ತೊಬ್ಬ ಬ್ಯೂಟಿ ಕ್ವೀನ್ ಶಾನ್ವಿ ಶ್ರೀವಾತ್ಸವ್ ಬಗ್ಗೆ. ಶಾನ್ವಿ ಮತ್ತು ರಕ್ಷಿತ್ ನಡುವೆ ಏನೋ ಸಮ್ಥಿಂಗ್ ನಡಿತಿದೆಯಾ ಅಂತ ನಾವು ಹೇಳ್ತಿಲ್ಲ. ಸ್ವತಃ ಅವರ ಅಭಿಮಾನಿಗಳೇ ಹೇಳ್ತಿದ್ದಾರೆ.

ಡಿಸೆಂಬರ್ 8 ಶಾನ್ವಿ ಶ್ರೀವಾತ್ಸವ್ ರವರ ಹುಟ್ಟು ಹಬ್ಬ. ಚಿತ್ರರಂಗದ ಗಣ್ಯರು ಅನೇಕ ನಟ ನಟಿಯರು ಶಾನ್ವಿಗೆ ವಿಷ್ ಮಾಡಿದ್ದಾರೆ. ಆದರೆ ರಕ್ಷಿತ್ ಶೆಟ್ಟಿಯ ವಿಶ್ ಮಾತ್ರ ಸ್ವಲ್ಪ ಡಿಫರೆಂಟ್ ಆಗಿದ್ದು ಅನುಮಾನ ಭರಿಸುವಂತಿತ್ತು. ಅದರಲ್ಲಿ ” ನೀನು ನನಗೆ ಬೇರೆಯವರಿಗಿಂತ ಸ್ಪೆಷಲ್ ಆಗಿದಿಯಾ. ನೀನು ನನ್ನ ಕಷ್ಟದ ದಿನಗಳಲ್ಲಿ ಜತೆಗೆ ಇದ್ದೀಯ. ಈ ಎರಡು ವರ್ಷದ ಜರ್ನಿ ನಾನು ಮರೆಯುವಂತಿಲ್ಲ ” ಎಂದು ಟ್ವೀಟ್ ಮಾಡಿದ್ದಾರೆ.

ಇದನ್ನು ಕಂಡು ರಕ್ಷಿತ್ ಶೆಟ್ಟಿಯ ಅಭಿಮಾನಿಗಳು ಫುಲ್ ಖುಷಿಯಾಗಿದ್ದಾರೆ. ರಶ್ಮಿಕಾ ಕೈ ಕೊಟ್ಟ ಬಳಿಕ ರಕ್ಷಿತ್ ಸಕ್ಕತ್ ಬೇಜಾರಾಗಿದ್ದರು. ಈಗ ಶಾನ್ವಿಯ ಆಗಮನ ಅವರಿಗೆ ಫುಲ್ ಖುಷಿಯಾಗಿದ್ದಾರೆ. ದಯವಿಟ್ಟು ಶಾನ್ವಿಯನ್ನು ಮದುವೆಯಾಗಿ ಎಂದು ದುಂಬಾಲು ಬೀಳುತ್ತಿದ್ದಾರೆ.

ಕಳೆದ ಸಲ ರಶ್ಮಿಕಾ ಜೊತೆ ಪ್ರೀತಿ ಬೆಳೆಯಲು ಅಭಿಮಾನಿಗಳ ಒತ್ತಾಯವೇ ಕಾರಣವಾಗಿತ್ತು. ಈಗ ಶಾನ್ವಿಯ ಬಗ್ಗೆ ಈ ರೀತಿಯ ಕಾಮೆಂಟ್ ನೋಡಿ ರಕ್ಷಿತ್ ಯಾವುದೇ ರಿಪ್ಲೈ ಕೊಟ್ಟಿಲ್ಲ.

ಶಾನ್ವಿ ಶ್ರೀವಾತ್ಸವ್ ಅವನೇ ಶ್ರೀ ಮನ್ನಾರಾಯಣದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಎರಡು ವರ್ಷಗಳ ಶೂಟಿಂಗ್ ಜರ್ನಿಯಲ್ಲಿ ಇಬ್ಬರೂ ಸ್ನೇಹಿತರಾಗಿದ್ದಾರೆ. ಅದೇ ಪ್ರೀತಿಯಾಗಲಿ ಎಂದು ಅಭಿಮಾನಿಗಳ ಹಾರೈಕೆ. ಕಿರಿಕ್ ಪಾರ್ಟಿ ಚಿತ್ರದಲ್ಲಿ ಸಾನ್ವಿಯಾಗಿ ಮಿಂಚಿದ್ದ ರಶ್ಮಿಕಾ ಮಂದಣ್ಣಳನ್ನು ರಕ್ಷಿತ್ ಇಷ್ಟಪಟ್ಟಿದ್ದರು. ಅದೇನೂ ಒನ್ ಸೈಡ್‌ ಲವ್ ಆಗಿರಲಿಲ್ಲ. ಇಬ್ಬರೂ ಪರಸ್ಪರ ಮೆಚ್ಚಿದ್ದರು. ನಂತರ ಹಿರಿಯರು ಒಪ್ಪಿ ಎಂಗೇಜ್ಮೆಂಟ್ ಕೂಡ ಅದ್ದೂರಿಯಾಗಿ ನಡೆಯಿತು.

ಆನಂತರ ಅದೇನಾಯಿತೋ ಇಬ್ಬರೂ ಬೇರೆಯಾದರು. ರಶ್ಮಿಕಾ ಈಗ ತೆಲುಗಿನ ನಂಬರ್ ಒನ್ ನಟಿಯಾಗಿ ಬೆಳೆದಿದ್ದಾರೆ. ಇನ್ನೂ ಶಾನ್ವಿ ಶ್ರೀವಾತ್ಸವ್ ಬಗ್ಗೆ ಹೇಳುವುದಾದರೆ ಕನ್ನಡದ ಪ್ರತಿಭಾವಂತ ನಟಿ. ಮಫ್ತಿ, ಸಾಹೇಬ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಸಾಮಾಜಿಕ ಜಾಲತಾಣದಲ್ಲಿ ಅತಿ ಹೆಚ್ಚು ಫ್ಯಾನ್ ಪೇಜ್’ಗಳನ್ನು ಹೊಂದಿದ್ದಾರೆ. ಇಬ್ಬರಿಗೂ ಅಲ್ ದಿ ಬೆಸ್ಟ್ ಹೇಳೋಣ.

LEAVE A REPLY

Please enter your comment!
Please enter your name here