ಸುದೀಪ್ ಕನ್ನಡ ಚಿತ್ರರಂಗದ ಜನಪ್ರಿಯ ನಟ . ತಾಯವ್ವ ಚಿತ್ರದಿಂದ ಸಿನಿ ಜರ್ನಿ ಶುರು ಮಾಡಿದ ಸುದೀಪ್ ನಡೆದು ಬಂದ ಹಾದಿ ಸುಲಭವಾದುದ್ದೇನೂ ಅಲ್ಲ. ಒಂದು ಗೆಲುವಿನವರೆಗೂ ತಾಳ್ಮೆಯಿಂದ ಕಾದ ಸುದೀಪ್ ಹುಚ್ಚ ಚಿತ್ರದ ನಂತರ ಒಂದು ಗಟ್ಟಿಯಾಗಿ ತಳ ಊರಿದರು. ಮಾಸ್ ಮತ್ತು ಕ್ಲಾಸ್ ಪ್ರೇಕ್ಷಕರು ಸುದೀಪ್’ರನ್ನು ಹೆಚ್ಚು ಇಷ್ಟಪಡುತ್ತಾರೆ.
ಸುದೀಪ್ ಕನ್ನಡ ಮಾತ್ರವಲ್ಲದೇ ಹಿಂದಿ ,ತೆಲುಗು, ತಮಿಳು ಭಾಷೆಯ ಚಿತ್ರಗಳಲ್ಲಿ ಅಭಿನಯಿಸಿ ಅಲ್ಲೂ ಕೂಡ ಅಭಿಮಾನಿಗಳನ್ನು ಹೊಂದಿದ್ದಾರೆ. ಕನ್ನಡ ನಟನೊಬ್ಬ ದಕ್ಷಿಣ ಭಾರತೀಯ ಚಿತ್ರರಂಗದಲ್ಲಿ ಛಾಪು ಮೂಡಿಸಿರುವುದು ಹೆಮ್ಮೆಯ ವಿಷಯ. ಸುದೀಪ್ ಖಳನಾಗಿ ಪ್ರಮುಖ ಪಾತ್ರ ವಹಿಸಿರುವ ಸಲ್ಮಾನ್ ಖಾನ್ ನಟನೆಯ ದಬಾಂಗ್-3 ಕ್ರಿಸ್ಮಸ್ ವೇಳೆಯಲ್ಲಿ ಬಿಡುಗಡೆ ಆಗಲಿದೆ. ಅಪಾರ ನಿರೀಕ್ಷೆ ಮೂಡಿಸಿರುವ ಈ ಚಿತ್ರದ ಪ್ರಮೋಷನ್ ಭರದಿಂದ ನಡೆಯುತ್ತಿದೆ. ಚಿತ್ರತಂಡ ಎಲ್ಲಾ ಕಡೆ ಪ್ರಮೋಷನ್’ಗೆ ಓಡಾಡುತ್ತಿದ್ದು ಮೊದಲ ದಿನವೇ ನೂರು ಕೋಟಿ ಕಲೆಕ್ಷನ್ ಮಾಡುವ ನಿರೀಕ್ಷೆ ಹೊಂದಲಾಗಿದೆ. ಆ ಮೂಲಕ ವಾರ್ ಚಿತ್ರದ ಕಲೆಕ್ಷನ್ ರೆಕಾರ್ಡ್ ಮುರಿಯುವ ವಿಶ್ವಾಸದಲ್ಲಿದೆ.
ಇನ್ನೂ ಚಿತ್ರದಲ್ಲಿ ನಟನೆಗಾಗಿ ಸುದೀಪ್ ಎಷ್ಟು ಸಂಭಾವನೆ ಪಡೆದಿರಬಹುದು ಎಂಬ ಕುತೂಹಲ ನಮ್ಮ ಜನಕ್ಕೆ ಇದೆ. ಏಕೆಂದರೆ ಅಷ್ಟು ದೊಡ್ಡ ಬಜೆಟ್ಟಿನ ಚಿತ್ರಕ್ಕೆ ಸುದೀಪ್ ಪ್ರಮುಖ ಖಳ ಪಾತ್ರ ವಹಿಸಿದ್ದಾರೆ. ಅದೂ ಅಲ್ಲದೇ ಅವರು ಕನ್ನಡದಲ್ಲಿ ಪ್ರಮುಖ ನಟ. ಈ ಬಗ್ಗೆ ಸುದೀಪ್ ಹೇಳುವುದೆಂದರೆ ನನಗೆ ಸಲ್ಮಾನ್ ಖಾನ್ ದೊಡ್ಡ ಮಟ್ಟದ ಸಂಭಾವನೆ ಕೊಟ್ಟಿದ್ದಾರೆ ಎಂದು ಖುಷಿಯಾಗುತ್ತಾರೆ.
ಮೂಲಗಳು ಹೇಳುವಂತೆ ಸುದೀಪ್ ಈ ಚಿತ್ರಕ್ಕೆ 9.5 ಕೋಟಿ ಸಂಭಾವನೆ ಪಡೆದಿದ್ದಾರೆ. ಸಲ್ಮಾನ್ ಖಾನ್ ಈ ಚಿತ್ರದ ನಿರ್ಮಾಪಕರು ಆಗಿರುವುದರಿಂದ ಸುದೀಪ್ ತಂಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆದ ನಟರಾಗಿದ್ದಾರೆ. ಇನ್ನೂ ನಾಯಕಿ ನಟಿ 4.5 ಕೋಟಿ ಸಂಭಾವನೆ ನೀಡಲಾಗಿದೆ.
ದಬಾಂಗ್ 3 ಚಿತ್ರವನ್ನು ದಕ್ಷಿಣ ಭಾರತದ ಮೈಕೆಲ್ ಜಾಕ್ಸನ್ ಪ್ರಭುದೇವ ನಿರ್ದೇಶನ ಮಾಡಿದ್ದಾರೆ. ಈ ಮೊದಲು ಅನೇಕ ಮಾಸ್ ಚಿತ್ರ ನಿರ್ದೇಶನ ಮಾಡಿ ಗೆಲುವು ಕಂಡಿರುವ ಹಾಗೂ ಸಲ್ಮಾನ್ ಖಾನ್ ಜೊತೆ ವಾಂಟೆಡ್ ನಿರ್ದೇಶಿಸಿರುವ ಪ್ರಭುದೇವ ಮೇಲೆ ನಂಬಿಕೆ ಇದೆ. ಅವರು ಮಾಸ್ ಅಭಿಮಾನಿಗಳಿಗೆ ನಿರಾಸೆ ಮಾಡುವುದಿಲ್ಲ ಎಂದು.