ಕನ್ನಡದ ಬಿಗ್ಬಾಸ್ ನಲ್ಲಿ ಈ ವಾರ ಯಾರು ಹೊರಹೋಗುತ್ತಾರೆ ಎಂಬ ಕುತೂಹಲ ಎಲ್ಲರಿಗೂ ಇತ್ತು. ಭೂಮಿಕಾ ಶೆಟ್ಟಿ, ದೀಪಿಕಾ, ಅಥವಾ ಪ್ರಿಯಾಂಕ ಹೊಗಬಹುದಾ ? ಅಥವಾ ವಾಸುಕಿ ವೈಭವ್ ಹೊಗಬಹುದಾ ಎಂಬ ಲೆಕ್ಕಾಚಾರ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿತ್ತು.
ಆದರೆ ಅವರೆಲ್ಲರ ಲೆಕ್ಕಾಚಾರ ಉಲ್ಟಾ ಹೊಡೆದು ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಿದ್ದ ರಕ್ಷಾ ಸೋಮಶೇಖರ್ ಹೊರಹೋಗಿದ್ದಾರೆ. ಈ ಸಲ ರಕ್ಷಾ ಸೋಮಶೇಖರ್ ಕಡಿಮೆ ಓಟ್ ಪಡೆದಿದ್ದಾರೆ.
ಈ ಸಲ ರಕ್ಷಾ ಸೋಮಶೇಖರ್ ಈ ಸಲ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟಾಗ ಎಲ್ಲರೂ ಸ್ವಲ್ಪ ಹೆದರಿದ್ದರು. ಎಲ್ಲಿ ತಮ್ಮನ್ನು ಮೀರಿ ಬಿಗ್ಬಾಸ್ ಮನೆಯೊಳಗೆ ಜಾಸ್ತಿ ದಿನ ಇರ್ತಾರೆ ಅಂತ! ಆದರೆ ಅವರು ಎರಡೇ ವಾರದಲ್ಲೇ ಮನೆಗೆ ಹೋಗಿದ್ದಾರೆ.
ಬಿಗ್ಬಾಸ್ ಸಿಜನ್ ನಲ್ಲಿ ಈ ಸಲ ಶೈನ್ ಶೆಟ್ಟಿ, ಭೂಮಿಕಾ ಶೆಟ್ಟಿ, ರಾಜು ತಾಳಿಕೋಟೆ, ದೀಪಿಕಾ, ಪ್ರಿಯಾಂಕ, ಕುರಿ ಪ್ರತಾಪ್ ಮುಂತಾದವರು ಇದ್ದಾರೆ. ಕೊನೆಯ ಘಟ್ಟ ತಲುಪುತ್ತಿರುವ ಬಿಗ್ಬಾಸ್ ಕುತೂಹಲ ಕೆರಳಿಸದೆ. ಶೈನ್ ಶೆಟ್ಟಿ ಮತ್ತು ಕುರಿ ಪ್ರತಾಪ್ ನಡುವೆ ಸ್ಪರ್ಧೆ ಇದೆ. ಕೊನೆಯಲ್ಲಿ ಇವರಿಬ್ಬರಲ್ಲಿ ಒಬ್ಬರು ಗೆಲ್ಲುವ ಚಾನ್ಸ್ ಇದೆ.
ಈ ವಾರ ಸಲ್ಮಾನ್ ಖಾನ್ ಕನ್ನಡ ಬಿಗ್ಬಾಸ್ ಶೋಗೆ ಬಂದಿದ್ದಾರೆ. ತಮ್ಮ ದಬಾಂಗ್- 3 ಚಿತ್ರದ ಪ್ರಚಾರ ಸಲುವಾಗಿ ಚಿತ್ರತಂಡ ಬಂದಿದೆ. ನಿರ್ದೇಶಕ ಪ್ರಭುದೇವ, ಸೊನಾಕ್ಷಿ ಸಿನ್ಹಾ ಬಂದಿದ್ದಾರೆ. ಈ ಚಿತ್ರ ದಬಾಂಗ್ ಸರಣಿಯ ಮೂರನೆಯ ಚಿತ್ರವಾಗಿದ್ದು ಹಿಂದಿ, ತಮಿಳು, ತೆಲುಗು,ಮಲಯಾಳಂ ಹಾಗೂ ಕನ್ನಡ ಭಾಷೆಗಳಲ್ಲಿ ಮೂಡಿ ಬರುತ್ತಿದೆ.
ಈ ಚಿತ್ರದಲ್ಲಿ ಸುದೀಪ್ ವಿಲನ್ ಪಾತ್ರ ವಹಿಸಿದ್ದು ಅವರಿಗೆ ಹಿಂದಿಯಲ್ಲಿ ನೆಲೆ ನಿಲ್ಲುವ ಚಾನ್ಸ್ ಇದೆ. ವಿಶೇಷ ಎಂದರೆ ಸಲ್ಮಾನ್ ಖಾನ್ ಕನ್ನಡ ಭಾಷೆಯಲ್ಲಿ ಸ್ವತಃ ಡಬ್ ಮಾಡಿದ್ದಾರೆ. ಡಿಸೆಂಬರ್ 24 ರಂದು ವಿಶ್ವದಾದ್ಯಂತ ಬಿಡುಗಡೆ ಆಗಲಿದೆ.