ಉಚಿತ ಬೈಕ್ ಬೇಕಾ ಹಾಗಾದರೆ ಒಡೆಯ ಚಿತ್ರ ನೋಡಿ

0
2821

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಒಡೆಯ ಡಿಸೆಂಬರ್‌ 12 ರಂದು ಬಿಡುಗಡೆ ಆಗುತ್ತಿದೆ. ಚಿತ್ರಮಂದಿರಗಳಿಗೆ ಪ್ರೇಕ್ಷಕರನ್ನು ಕರೆದು ತರಲು ನಿರ್ಮಾಪಕರು ಇನ್ನಿಲ್ಲದ ಕಸರತ್ತು ಮಾಡತೊಡಗಿದ್ದಾರೆ. ಒಡೆಯ ಚಿತ್ರದ ನಿರ್ಮಾಪಕರು ಸಂದೇಶ್ ನಾಗರಾಜ್ ಹೊಸ ಆಫರೊಂದನ್ನು ನೀಡಿದ್ದಾರೆ.

ಒಡೆಯ ಚಿತ್ರವನ್ನು ನೋಡಿ , ಬೈಕ್ ಗೆಲ್ಲಿ . ಇದು ಲಕ್ಕಿ ಡಿಪ್ ಆಗಿದ್ದು ಪ್ರೇಕ್ಷಕರು ಒಡೆಯ ಚಿತ್ರವನ್ನು ನರ್ತಕಿ ಚಿತ್ರಮಂದಿರದಲ್ಲಿ ನೋಡಬೇಕು. ಅಲ್ಲಿ ಟಿಕೆಟ್ ಕೊಂಡು ನಂತರ ಅದನ್ನು ಭರ್ತಿ ಮಾಡಿ ಒಳಗಡೆ ಇರುವ ಒಂದು ಬಾಕ್ಸ್ ಒಳಗೆ ಹಾಕಬೇಕು. ಅದರಲ್ಲಿ ಇರುವ ಟಿಕೆಟ್‌’ಗಳಲ್ಲಿ ಒಂದನ್ನು ಆಯ್ಕೆ ಮಾಡಿ ಅವರಿಗೆ ಬೈಕನ್ನು ನೀಡಲಾಗುತ್ತೆ.

ಅಷ್ಟಕ್ಕೂ ಬೈಕ್ ಯಾವುದೆಂದರೆ ಬೈಕ್ ಕೆಂಪು ಬಣ್ಣದ್ದಾಗಿದ್ದು ವಿದ್ಯುತ್ ಚಾಲಿತ ವಾಹನವಾಗಿದೆ. ಇದರ ಬೆಲೆ ಸುಮಾರು 95 ಸಾವಿರ ರೂಪಾಯಿಗಳಾಗಿದ್ದು ಒಂದೇ ಒಂದು ಬೈಕನ್ನು ಲಾಟರಿಗೆ ಇಡಲಾಗಿದೆ. ಅದೃಷ್ಟ ಇದ್ದವರಿಗೆ ಈ ಬೈಕ್ ಸಿಗಲಿದೆ.

ಸಂದೇಶ್ ನಾಗರಾಜ್ ದರ್ಶನ್’ರ ಪ್ರಿನ್ಸ್ ಚಿತ್ರವನ್ನು ನಿರ್ಮಿಸಿದ್ದರು. ಎರಡು ಶೇಡ್’ಗಳಲ್ಲಿ ಕಾಣಿಸಿಕೊಂಡಿದ್ದ ದರ್ಶನ್ ರ ಚಿತ್ರ ಸೂಪರ್ ಹಿಟ್ ಆಗಿತ್ತು. ದರ್ಶನ್ ‘ರ ಒಡೆಯ ಚಿತ್ರವನ್ನು ಅವರ ಆಪ್ತ ಗೆಳೆಯ ಎಂಡಿ ಶ್ರೀಧರ್ ನಿರ್ದೇಶನ ಮಾಡಿದ್ದಾರೆ‌. ರೀಮೇಕ್ ಚಿತ್ರಗಳನ್ನೇ ಹೆಚ್ಚಾಗಿ ಮಾಡುವ ಶ್ರೀಧರ್ ಈಗಾಗಲೇ ದರ್ಶನ್ ‘ರ ಬುಲ್ ಬುಲ್ ಎಂಬ ರಿಮೇಕ್ ಚಿತ್ರವನ್ನು ನಿರ್ದೇಶಿಸಿದರು. ಒಡೆಯ ಕೂಡ ತಮಿಳಿನ ಅಜಿತ್ ನಟನೆಯ ವೀರಂ ಚಿತ್ರದ ರೀಮೇಕ್ . ಅಲ್ಲಿ ಅ ಚಿತ್ರ ಭರ್ಜರಿ ಯಶಸ್ಸು ಗಳಿಸಿದ್ದು ಅದು ತೆಲುಗಿಗೂ ರಿಮೇಕ್ ಆಗಿತ್ತು . ಕಾಟಮರಾಯುಡು ಆಗಿ ತೆರೆಗೆ ಬಂದ ಇದರ ಹೀರೋ ಪವರ್ ಸ್ಟಾರ್ ಪವನ್ ಕಲ್ಯಾಣ್.

ಒಡೆಯ ಚಿತ್ರ ಅಣ್ಣ ತಮ್ಮಂದಿರ ಕತೆ ಹೊಂದಿದ್ದು ಅಣ್ಣನಿಗೆ ಹೆಣ್ಣು ಹುಡುಕಿ ಮದುವೆ ಮಾಡಿಸುವ ಸಾಹಸವನ್ನು ತಮ್ಮಂದಿರು ಮಾಡುವುದನ್ನು ಅತ್ಯಂತ ತಮಾಷೆಯಾಗಿ ಹೇಳಲಾಗಿದೆ. ಚಿತ್ರದ ಟ್ರೇಲರ್ ಬಿಡುಗಡೆ ಆಗಿದ್ದು ಅತಿ ಹೆಚ್ಚು ವೀವ್ಸ್ ಪಡೆದಿದೆ. ಟ್ರೇಲರ್’ನಲ್ಲಿ ಪಂಚಿಂಗ್ ಡೈಲಾಗ್’ಗಳು ನಿರೀಕ್ಷೆ ಮೂಡಿಸಿದ್ದು ಚಿತ್ರದ ತುಂಬಾ ಎಂಜಾಯ್ ಮಾಡಬಹುದಾದಂತಹ ಸಂಭಾಷಣೆ ಇರಬಹುದು ಎಂದು ನಂಬಬಹುದು. ಈ ಒಡೆಯ ಚಿತ್ರ ಡಿಸೆಂಬರ್ 12 ಕ್ಕೆ ರಾಜ್ಯಾದ್ಯಂತ ಸುಮಾರು 300 ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗಲಿದ್ದು ನಿರೀಕ್ಷೆ ಮೂಡಿದೆ.

LEAVE A REPLY

Please enter your comment!
Please enter your name here