ಶೈನ್ ಶೆಟ್ಟಿ ಬಿಗ್ಬಾಸ್ ಕನ್ನಡದ ಈ ಸಲದ ಸೀಜನ್’ನಲ್ಲಿ ಹೆಸರು ಮಾಡುತ್ತಿರುವ ನಟ. ಮೂಲತಃ ಹೋಟೆಲ್ ಬಿಜಿನೆಸ್ ಮಾಡಿಕೊಂಡಿರುವ ಸುರದ್ರೂಪಿ. ಬಿಗ್ಬಾಸ್ ರಿಯಾಲಿಟಿ ಶೋನಲ್ಲಿ ಪ್ರತಿ ಸಲ ಲವ್ ಸ್ಟೋರಿ ಆಗುವುದು ಸಾಮನ್ಯವಾಗಿಬಿಟ್ಟಿದೆ. ಕಳೆದ ಸಲ ಚಂದನ್ ಶೆಟ್ಟಿ ಮತ್ತು ನಿವೇದಿತಾ ಇಬ್ಬರೂ ಬಿಗ್ಬಾಸ್ ನಲ್ಲಿ ಲವ್ ಮಾಡಿ ಹೊರಗಡೆ ಬಂದು ದಸರಾದಲ್ಲಿ ಎಂಗೇಜ್ಮೆಂಟ್ ಆದರು. ಸದ್ಯದಲ್ಲಿಯೇ ಮದುವೆ ಆಗುವರು. ಇನ್ನೂ ಸ್ವಲ್ಪ ಹಿಂದಿಗೆ ಹೋಗುವುದಾದರೆ ಇದು ಕಾಮನ್ ಆಗಿಬಿಟ್ಟಿದೆ. ಅಲ್ಲಿಯಂತೂ ಒಂದಲ್ಲ ಎರಡೆರಡು ಜೋಡಿಗಳು ಲವ್ ಮಾಡುತ್ತಿರುತ್ತವೆ.
ಈ ಸಲ ಚೆನ್ನಾಗಿ ಆಡುತ್ತಿರುವ ಶೈನ್ ಶೆಟ್ಟಿ ಮತ್ತು ದೀಪಿಕಾ ನಡುವೆ ಲವ್ ಆಗಿದೆಯಂತೆ. ಶೈನ್ ಶೆಟ್ಟಿ ಮೊದಲಿಂದಲೂ ದೀಪಿಕಾರನ್ನು ಹೊಗಳುತ್ತಿದ್ದರು. ಆವಾಗಲೇ ಇದು ಎಲ್ಲಿಗೋ ಮುಟ್ಟುತ್ತೆ ಅಂತ ಜನಕ್ಕೆ ಡೌಟ್ ಇತ್ತು. ದೀಪಿಕಾ ಕೂಡ ಶೈನ್ ಶೆಟ್ಟಿಯ ಬಗ್ಗೆ ಮೃದು ಧೋರಣೆ ಹೊಂದಿದ್ದಾರೆ . ಟಾಸ್ಕ್ ಸಮಯದಲ್ಲಿ ಇಬ್ಬರೂ ಪರಸ್ಪರ ಹೊಂದಿಕೊಂಡು ಆಡುತ್ತಿದ್ದಾರೆ. ಈಗಂತೂ ಅವರಿಬ್ಬರೂ ಒಟ್ಟಿಗೆ ಊಟ ಮಾಡುತ್ತಿದ್ದಾರೆ.
ದೀಪಿಕಾ ಮೊನ್ನೆ ಮೊನ್ನೆ ಶೈನ್ ಶೆಟ್ಟಿಗೆ ಗಡ್ಡ ಮೀಸೆ ತೆಗೆಯಿರಿ ಎಂದು ಹೇಳಿದ್ದರು . ಅದಕ್ಕಾಗಿಯೇ ಶೈನ್ ತಮ್ಮ ಗಡ್ಡ ಮತ್ತು ಮೀಸೆಯನ್ನು ತೆಗೆದರು. ಇದು ಎಲ್ಲರ ಅಚ್ಚರಿಗೆ ಕಾರಣವಾಗುವುದರ ಜೊತೆಗೆ ಅವರಿಬ್ಬರ ಲವ್ ಕನ್ಫರ್ನ್ ಆಗಿದೆ ಎಂದು ಜನ ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡುತಿದ್ದಾರೆ. ದೀಪಿಕಾ ಶೈನ್’ಗೆ ಗಡ್ಡ ತೆಗೆದಿದ್ದಕ್ಕೆ ಥ್ಯಾಂಕ್ಸ್ ಹೇಳಿದ್ದಾರೆ.
ಆದರೆ ಈ ಮೊದಲು ಪ್ರಾರಂಭದಲ್ಲಿ ಶೈನ್ ಶೆಟ್ಟಿ ಈಗಿರಲಿಲ್ಲ. ತನಗೆ ಹೋಟೆಲ್ ಬಿಜಿನೆಸ್ ಇದ್ದು ಈ ಬಣ್ಣದ ಲೋಕ, ಲವ್ ಇದ್ಯಾವುದೂ ಬೇಡ ಎಂದು ಹೇಳಿದ್ದರು. ಅಷ್ಟು ಬೇಗ ಅವರು ಹುಡುಗಿಯರ ಬಲೆಗೆ ಬೀಳುವವರು ಅಲ್ಲ ಎಂದು ನೋಡಿದ ಕೂಡಲೇ ಹೇಳಬಹುದಾಗಿತ್ತು. ಅಂತಹಾ ಶೆಟ್ಟರು ದೀಪಿಕಾಗೆ ಪ್ರೀತಿಗೆ ಬಿದ್ದಿದ್ದಾರೆಂದರೆ ಇದು ಬಿಗ್ಬಾಸ್ ಆಡುವ ನಾಟಕ ಇರಬಹುದು. ಅದು ಸೀಕ್ರೆಟ್ ಟಾಸ್ಕ್ ಇರಬಹುದು. ಪ್ರೀತಿಸುವಂತೆ ನಾಟಕ ಆಡಲು ಬಿಗ್ಬಾಸ್ ಹೇಳಿರಬಹುದು.
ಶೈನ್ ಶೆಟ್ಟಿ ಗಡ್ಡ ತೆಗೆದ್ದಕ್ಕೆ ಅವರಿಗೆ ಹೆಚ್ಚುವರಿ ಅಂಕಗಳು ಸಿಗುವ ಜೊತೆಗೆ ಸ್ವಲ್ಪ ವಾರ ಅವರು ಮನೆಯಲ್ಲಿ ಇರುವ ಅದೃಷ್ಟ ಪಡೆಯುತ್ತಾರೆ. ಕಳೆದ ಬಿಗ್ಬಾಸ್ ನಲ್ಲಿ ನಟ ಚಂದನ್ ತಲೆ ಕೂದಲು ತೆಗೆದು ಕೊನೆಯವರೆಗೂ ಉಳಿದಿದ್ದರು. ಎಕ್ಟ್ರಾ ಹಣ ಕೂಡ ಸಂದಾಯವಾಗಿತ್ತಂತೆ.