ಖ್ಯಾತ ನಟಿ ನಿತ್ಯಾ ಮೆನನ್ ತಲೆ ಕೂದಲು ಬೋಳಿಸಿಕೊಂಡಿದ್ದು ಯಾಕೆ

0
2791

ನಿತ್ಯಾ ಮೆನನ್ ಬಹು ಭಾಷಾ ಚಿತ್ರ ನಟಿ. ತನ್ನ ಮುದ್ದು ಸೌಂದರ್ಯದಿಂದ ಮನ ಗೆದ್ದ ನಟಿ. ತೆಲುಗು, ತಮಿಳು ,ಮಲಯಾಳಂ ನಲ್ಲಿ ಭಾರೀ ಬಿಜಿ ಇರುವ ನಟಿ . ಅಚ್ಚರಿ ಯೆಂದರೆ ಈಕೆ ಕನ್ನಡತಿ.

ಕನ್ನಡದ ಜೋಷ್ ಚಿತ್ರದ ಮೂಲಕ ತೆರೆಗೆ ಪರಿಚಯವಾದ ನಿತ್ಯಾ ಮೆನನ್ ನಂತರ ತೆಲುಗು ,ತಮಿಳು ,ಮಲಯಾಳಂ ನಲ್ಲಿ ಬಿಜಿ ಆದರು. ಪಾತ್ರವನ್ನು ,ಕತೆಯನ್ನು ಆಯ್ಕೆ ಮಾಡಿಕೊಳ್ಳುವುದರಲ್ಲಿ ಬಹಳಷ್ಟು ಚ್ಯೂಸಿ. ನಿತ್ಯಾ ಅಭಿನಯಿಸಿದ್ದಾರೆಂದರೆ ಆ ಚಿತ್ರ ಹಿಟ್ ಆಗುವುದರಲ್ಲಿ‌‌ ಸಂದೇಹವೇ ಇಲ್ಲ.‌

ನಿತ್ಯಾ ಮೆನನ್ ಇತ್ತೀಚೆಗೆ ಒಂದು ಸಂದರ್ಶನ ಕೊಟ್ಟರು. ಅದು ಯಾರಿಗೆ ಅಂತೀರಿ ?! ಕನ್ನಡದ ನಂಬರ್ ಒನ್ ನಿರೂಪಕಿ ಅನು ಶ್ರೀಯವರ ಯೂಟ್ಯೂಬ್ ಚಾನಲ್’ಗೆ. ಅನು ಶ್ರೀ ಜೊತೆಗೆ ಸಾಕಷ್ಟು ವಿಷಯಗಳನ್ನು ಹಂಚಿಕೊಂಡಿರುವ ನಿತ್ಯಾ ಮೆನನ್ , ಒಂದು ಇಂಟೆರೆಸ್ಟಿಂಗ್ ವಿಷಯವೊಂದನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ತಮ್ಮ ಬಾಲ್ಯದಲ್ಲಿ ತಲೆ ಕೂದಲನ್ನು ಬೋಳಿಸಿಕೊಂಡಿದ್ದು.

ನಿತ್ಯಾ ಮೆನನ್ ಅಂದವಾಗಿರುವ ಬಹು ಮುಖ್ಯ ಕಾರಣ ಅವರ ಗುಂಗುರು ಕೂದಲು. ಆದರೆ ಅವರಿಗೆ ಗುಂಗುರು ಕೂದಲಂದ್ರೆ ಇಷ್ಟವಿಲ್ಲವಂತೆ. ನೀಟಾದ ,ನೇರವಾದ ಕೂದಲು ಹೊಳಪು ಇರುವುದರಿಂದ ಅಂತಹ ಕೂದಲಿದ್ದರೆ ಎಷ್ಟು ಚೆಂದಗಿರುತ್ತೆ ಎಂದು ಆಸೆ ಪಟ್ಟಿದ್ದರಂತೆ.

ಒಮ್ಮೆ ಅವರು ಕೂದಲನ್ನು ಬೋಳಿಸಿಕೊಳ್ಳುತ್ತೇನೆ ಎಂದು ಅವರ ಅಪ್ಪನಿಗೆ ಮೆಸೇಜ್ ಮಾಡಿದ್ದರಂತೆ . ಸ್ವಲ್ಪ ಸಮಯದ ನಂತರ ಅವರಿಗೆ ಅವರ ಅಪ್ಪನಿಂದ ಓಕೆ ಎಂದು ರಿಪ್ಲೈ ಬಂತಂತೆ. ಆಗ ಅವರಿಗೆ ಬಹಳ ಆಶ್ಚರ್ಯವಾಯಿತಂತೆ .

ನಿಮಗೆ ಒಂದು ವಿಷಯ ಗೊತ್ತಿರಲಿ. ನಿತ್ಯಾ ಮೆನನ್ ಬಹಳ ಅದ್ಭುತವಾಗಿ ಹಾಡು ಹಾಡುತ್ತಾರೆ. ಆ ಶೋನಲ್ಲಿ ಅವರು ಎ ಚಿತ್ರದ ಸುಮ್ ಸುಮ್ನೆ ಹಾಡನ್ನು ಹಾಡಿ ರಂಜಿಸಿದರು.

ನಿತ್ಯಾ ಮೆನನ್ ಮೈನಾ , ಸುದೀಪ್ ಅಭಿನಯದ ಕೋಟಿಗೊಬ್ಬ 2 ಚಿತ್ರದಲ್ಲಿ ಗಮನಾರ್ಹ ಪಾತ್ರದಲ್ಲಿ ನಟಿಸಿದ್ದಾರೆ.

LEAVE A REPLY

Please enter your comment!
Please enter your name here