ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಗಳಗಳನೆ ಅತ್ತಿದ್ದಾರೆ. ಅವರ ಅಳುವಿಗೆ ಕಾರಣ ಅವರ ಹೆಂಗರುಳು. ಕಿಚ್ಚ ಸುದೀಪ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವಿಕಲ ಚೇತನ ಅಭಿಮಾನಿ ದೀಕ್ಷಾಳನ್ನು ಭೇಟಿ ಮಾಡಿದ್ದಾರೆ. ಮಂಗಳೂರಿನ ಮೂಲ್ಕಿಯ ಊರಾದ ದೀಕ್ಷಾ ಮೊದಲಿಂದಲೂ ಸುದೀಪ್ ಅಭಿಮಾನಿ.
ಸುದೀಪ್ ಅಂದ್ರೆ ಪಂಚಪ್ರಾಣ. ಅವರನ್ನು ಮಾವ ಎಂದು ಪ್ರೀತಿಯಿಂದ ಕರೆಯುತ್ತಾಳೆ . ಕೈಕಾಲು ಸ್ವಾಧೀನ ಕಳೆದುಕೊಂಡಿದೆ. ಮಾತನ್ನು ಸರಿಯಾಗಿ ಆಡಲು ಆಗುತ್ತಿಲ್ಲ. ಎಲ್ಲರಂತೆ ಆಡಿ ಬೆಳೆಯಬೇಕಾಗಿದ್ದ ಹುಡುಗಿಗೆ ಪಾಪ ! ಇಂತಹ ಸ್ಥಿತಿ ಕಂಡು ಸುದೀಪ್ ಭಾವುಕರಾಗಿದ್ದಾರೆ.
ಸುದೀಪ್’ಗೆ ದೀಕ್ಷಾ ಕನ್ನಡಕ ಕೊಟ್ಟು ಹಾಕಿಕೊಳ್ಳಿ ಎಂದು ಹೇಳಿದಾಗ ಸುದೀಪ್ ಸಂತೋಷದಿಂದಲೇ ಕನ್ನಡಕ ಹಾಕಿಕೊಂಡಿದ್ದಾರೆ. ದೀಕ್ಷಾ ಸುದೀಪ್ ಅಭಿನಯದ ಮುಸ್ಸಂಜೆ ಮಾತು ಚಿತ್ರದ ಸೂಪರ್ ಹಾಡು ‘ ಏನಾಗಲಿ , ಮುಂದೆ ಸಾಗೂ ನೀ , ಬಯಸಿದ್ದೆಲ್ಲ ಸಿಗದು ಬಾಳಲಿ’ ಹಾಡನ್ನು ಹಾಡಿ ಕಣ್ಣೀರಾಗಿದ್ದಾಳೆ . ಈ ಹಾಡು ಕೇಳಿ ಸುದೀಪ್ ಸಹ ಭಾವುಕರಾಗಿ ಅತ್ತಿದ್ದಾರೆ. ಸ್ವಲ್ಪ ಹೊತ್ತು ಅಕೆಯ ಜೊತೆ ಮಾತನಾಡಿ ನಗಿಸಿದ್ದಾರೆ. ಆಕೆಗೆ ಕೈಲಾದ ಸಹಾಯ ಮಾಡುವ ಭರವಸೆಯನ್ನು ನೀಡಿದ್ದಾರೆ. ಅವಳ ಆಸೆಯಂತೆ ಮೂಲ್ಕಿಗೆ ಬರುವುದಾಗಿ ಹೇಳಿದ್ದಾರೆ.
ಸುದೀಪ್ ಅಭಿಮಾನಿಗಳಾಗಲಿ ಅಥವಾ ಇನ್ಯಾರೆ ಕಷ್ಟದಲ್ಲಿದ್ದರೂ ಕೈಲಾದಷ್ಟು ಸಹಾಯ ಮಾಡುತ್ತಾರೆ. ಅವರಷ್ಟೆ ಅಲ್ಲದೇ ದರ್ಶನ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ,ಯಶ್ ರವರು ಕೂಡ ಅಭಿಮಾನಿಗಳು ಮತ್ತು ಸಾಮನ್ಯ ಜನರು ಕಷ್ಟದಲ್ಲಿ ಇದ್ದರೆ ಅವರಿಗೆ ಸಹಾಯ ಮಾಡುವ ಹೃದಯವನ್ನು ಹೊಂದಿದ್ದಾರೆ.
ಸುದೀಪ್ ಈ ವರ್ಷ ಪೈಲ್ವಾನ್ ಚಿತ್ರದ ಗೆಲುವಿನ ಖುಷಿಯಲ್ಲಿದ್ದಾರೆ. ಪೈಲ್ವಾನ್ ಪ್ಯಾನ್ ಇಂಡಿಯಾ ಸಿನಿಮಾವಾಗಿದ್ದು ತಮಿಳು , ತೆಲುಗು , ಕನ್ನಡ , ಮಲಯಾಳಂ ಹಾಗೂ ಹಿಂದಿಯಲ್ಲಿ ಬಿಡುಗಡೆ ಆಗಿ ಯಶಸ್ಸು ಗಳಿಸಿತ್ತು. ಮೂಲಗಳ ಪ್ರಕಾರ ಅದು ನೂರು ಕೋಟಿ ಕಲೆಕ್ಷನ್ ಮಾಡಿದೆಯಂತೆ.
ಈ ತಿಂಗಳು ಕ್ರಿಸ್ಮಸ್ ಪ್ರಯುಕ್ತ ಸುದೀಪ್ ನಟಿಸಿದ ಸಲ್ಮಾನ್ ಖಾನ್’ರವರ ದಬಾಂಗ್- 3 ಚಿತ್ರದ ಬಿಡುಗಡೆಯ ನಿರೀಕ್ಷೆಯಲ್ಲಿ ಇದ್ದಾರೆ. ಚಿತ್ರದಲ್ಲಿ ಸುದೀಪ್ ವಿಲನ್ ಪಾತ್ರ ಮಾಡಿದ್ದು , ಈಗ ತೆಲುಗು ಚಿತ್ರದ ನಂತರ ದಬಾಂಗ್ ಬಹಳ ಹೆಸರು ಕೊಡಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ.
ದಬಾಂಗ್ 3 ಚಿತ್ರವನ್ನು ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ನಿರ್ದೇಶಿಸಿದ್ದಾರೆ.