ನಿಮಗೇನಾದರೂ ಅತೀಂದ್ರಿಯ ಶಕ್ತಿಗಳು ಕಾಡುತ್ತಿದೆ ಎಂಬುವ ಸಣ್ಣ ಅನುಮಾನ ಬಂದರೂ ತಕ್ಷಣವೇ ಗಣಗಾಪುರದ ಈ ದೇವಾಲಯಕ್ಕೆ ಬನ್ನಿ..!

0
7114

ಮನುಷ್ಯನ ಕಲ್ಪನೆ ಹಾಗೂ ಯೋಚನೆಗೂ ಮೀರಿದ ಹಲವು ಅತೀಂದ್ರಿಯ ಶಕ್ತಿಗಳು ( ದೆವ್ವ, ಭೂತ, ಪಿಶಾಚಿ ) ಮನುಷ್ಯನನ್ನು ಸಹಜವಾಗಿಯೇ ಕಾಡುತ್ತವೆ, ಜೀವನದಲ್ಲಿ ಯಾವುದೇ ಏಳಿಗೆ ಆಗಲು ಬಿಡುವುದಿಲ್ಲ, ಬರೀ ಅಶುಭ ಸುದ್ದಿಗಳು ಕೇಳಿ ಬರುತ್ತಿರುತ್ತದೆ, ಅಂತಹ ಸಮಯದಲ್ಲಿ ಯೋಚನೆ ಮಾಡದೆ ತಕ್ಷಣ ಗಾಣಗಾಪುರ ದಲ್ಲಿರುವ ದತ್ತಾತ್ರೇಯ ದೇವಾಲಯಕ್ಕೆ ಭೇಟಿ ನೀಡಿ.

ಈ ದೇವಾಲಯಕ್ಕೆ ಇದೇ ಅತೀಂದ್ರಿಯ ಶಕ್ತಿಗಳನ್ನು ನಾಶ ಮಾಡುವ ಶಕ್ತಿ, ಇವತ್ತಿಗೂ ಈ ದೇವಸ್ಥಾನದಲ್ಲಿ ಪೂಜೆ ಅಥವಾ ಮಂಗಳಾರತಿಯ ಸಮಯದಲ್ಲಿ ದೆವ್ವ ಮೈ ಮೇಲೆ ಬರುವುದನ್ನು ಕಾಣಬಹುದು, ಮೈಮೇಲೆ ಬರುವ ಅತೀಂದ್ರಿಯ ಶಕ್ತಿಯು ಹುಚ್ಚೆದ್ದು ಕುಣಿಯಲಾರಂಭಿಸುತ್ತವೆ, ಇಂತಹ ದೇವಾಲಯದಲ್ಲಿ ನಿಂದು ಸೇವೆ ಮಾಡಿದರೆ ಇಷ್ಟಾರ್ಥಗಳು ಈಡೇರುತ್ತವೆ.

ಕರ್ನಾಟಕದ ಗುಲ್ಬರ್ಗ ಜಿಲ್ಲೆಯಲ್ಲಿರುವ ಗಾಣಗಾಪುರ ದಲ್ಲಿ ಸುಮಾರು 600 ವರ್ಷಗಳ ಇತಿಹಾಸ ಇರುವ ಈ ದೇವಸ್ಥಾನ, ಅತ್ರಿ ಮಹರ್ಷಿಗಳು ತಪಸ್ಸು ಮಾಡಿ ಶಿವನನ್ನು ಮಗನಾಗಿ ಪಡೆದರು, ಆಂಧ್ರಪ್ರದೇಶದಲ್ಲಿ ಮುಖಗಳುಳ್ಳ ದತ್ತಾತ್ರೇಯನ ರೂಪದಲ್ಲಿ ಜನ್ಮ ನೀಡಿದ್ದಾಗಿಯೂ ಹಾಗೂ ಮೂರು ಅವತಾರಗಳನ್ನು ಎತ್ತಿ ಅವತಾರಪುರುಷ ಎನಿಸಿಕೊಂಡಿರುವುದ್ದಾಗಿಯು ಪುರಾಣ ಹೇಳುತ್ತದೆ.

ಇನ್ನು ಶಿವನ ಮೂರು ಅವತಾರಗಳಲ್ಲಿ ದತ್ತಾತ್ರೇಯನು ಗುಲ್ಬರ್ಗ ಜಿಲ್ಲೆಯ ಗಣಗಪೂರ ದಲ್ಲಿ ಸರಸ್ವತಿ ನರಸಿಂಹಸ್ವಾಮಿ ಯಾಗಿ ಎರಡನೇ ಅವತಾರವೆತ್ತಿ, ಮಹಾರಾಷ್ಟ್ರದಲ್ಲಿ ಮೂರನೇ ಅವತಾರದೊಂದಿಗೆ ಸಮಾಪ್ತಿಯಾಗುತ್ತದೆ.

ಭಕ್ತಾದಿಗಳು ಈ ದೇವಸ್ಥಾನಕ್ಕೆ ಬಂದ ಮೇಲೆ ಮೊದಲಿಗೆ ವಿಶೇಷವಾಗಿ ನಿರ್ಗುಣ ಪಾದುಕೆಗಳ ಪೂಜೆಯನ್ನು ಮಾಡುತ್ತಾರೆ, ದೇವಸ್ಥಾನದ ಧಾರ್ಮಿಕ ರೂಢಿಯಲ್ಲಿರುವಂತೆ ಭಕ್ತರು ಮೊದಲು ಸಂಗಮ ಸ್ಥಳದಲ್ಲಿ ಸ್ನಾನ ಮಾಡಿ ನಂತರ ಗಣಗಪೂರ ದಲ್ಲಿರುವ ಕನಿಷ್ಠ ಐದು ಮನೆಗಳಲ್ಲಿ ಭಿಕ್ಷೆ ಬೇಡಿ, ನಂತರವೇ ಪಾದುಕೆಗಳ ಪೂಜೆಯನ್ನು ನಿರ್ಗುಣ ಮಠದಲ್ಲಿ ನೆರವೇರಿಸುತ್ತಾರೆ.

ಗುರು ದತ್ತಾತ್ರೇಯರ ಕೃಪೆಯನ್ನು ಪಡೆಯಲು ಭಕ್ತರು ಈ ಮಾರ್ಗವನ್ನು ಅನುಸರಿಸುತ್ತಾರೆ, ಕಾರಣ ಇಂದಿಗೂ ಇಲ್ಲಿ ಸ್ವತಹ ದತ್ತಾತ್ರೇಯ ಸ್ವಾಮಿಯವರು ಮುಂಜಾನೆಯ ವೇಳೆ ಸಂಗಮದಲ್ಲಿ ಸ್ನಾನಮಾಡಿ, ಮಧ್ಯಾಹ್ನ ಭಿಕ್ಷಾಟನೆ ಮಾಡಿ ಭಕ್ತರು ಸಲ್ಲಿಸುವ ಪಾದುಕ ಪೂಜೆಗಳನ್ನು ಸ್ವೀಕರಿಸುತ್ತಾರೆ ಎಂಬುವ ನಂಬಿಕೆ ಇದೆ.

LEAVE A REPLY

Please enter your comment!
Please enter your name here