ಮಾವಿನ ಕಾಯಿ ಹಾಗೂ ಹಣ್ಣುಗಳ ಅದ್ಭುತ ಔಷಧಿ ಗುಣಗಳು..!

0
3219

ಇದು ಬೇಸಿಗೆ ಕಾಲ, ಬೇಸಿಗೆಕಾಲ ಬನ್ನಿ ದ್ವೇಷ ಮಾಡಲು ಹಲವು ಕಾರಣಗಳಿವೆ, ಆದರೆ ಇಷ್ಟ ಪಡಲು ಇರುವುದು ಒಂದೇ ಕಾರಣ ಅದು ಮಾವಿನ ಹಣ್ಣು, ಬೇಸಿಗೆಯಲ್ಲಿ ಮಾತ್ರ ಸಿಗುವಂತಹ ರುಚಿಯಾದ ಮಾವಿನ ಹಣ್ಣುಗಳು ಚಿಕ್ಕ ಮಕ್ಕಳಿಂದ ದೊಡ್ಡವರವರೆಗೂ ಎಲ್ಲರಿಗೂ ಬಲು ಪ್ರಿಯ, ಇಂತಹ ಮಾವಿನ ಅತ್ಯದ್ಭುತ ಆರೋಗ್ಯ ಔಷಧಿ ಗುಣಗಳ ಬಗ್ಗೆ ಇಂದು ಸವಿವರವಾಗಿ ತಿಳಿಯೋಣ.

ಮಾವಿನ ಔಷಧಿ ಉಪಯೋಗಿ ಭಾಗಗಳೆಂದರೆ ಕಾಯಿ, ಹಣ್ಣು, ಕಾಂಡದ ಚೆಕ್ಕೆ, ಓಟೆ, ಎಲೆ ಮತ್ತು ಹೂಗಳು.

ಮಾವಿನ ಹಣ್ಣನ್ನು ಇಡಿಯಾಗಿ ತಿಂದು ನಂತರ ಒಂದು ಲೋಟ ಹಾಲು ಕುಡಿದರೆ ಅದು ಉತ್ತಮ ಮೇಧ್ಯ ರಸಾಯನ ವಾಗಿ ಕೆಲಸ ಮಾಡುತ್ತದೆ, ಎಂದರೆ ಮೆದುಳಿನ ಕಾರ್ಯ ಕ್ಷಮತೆಯನ್ನು ಹೆಚ್ಚಿಸುತ್ತದೆ.

ಮಾವಿನ ಹಣ್ಣನ್ನು ಜೇನಿನ ಜೊತೆಗೆ ಸೇವಿಸಿದರೆ ಅದು ಹೃದಯಕ್ಕೆ ಒಳ್ಳೆಯದು.

ಎಳೆಯ ಮಾವಿನ ಕಾಯಿಯನ್ನು ಸೇವಿಸಿದರೆ ಹಸಿವು ಹೆಚ್ಚುತ್ತದೆ ಮತ್ತು ರಕ್ತ ಉತ್ಪತ್ತಿಗೆ ಸಹಕರಿಸುತ್ತದೆ.

ಮಾವಿನ ಚಕ್ಕೆಯನ್ನು ಮೇಲೆ ಕೆರೆದು ತೆಗೆದು ಅದರ ಮೇಲೆ ಕೆಂಪು ಮಣ್ಣು ಹಚ್ಚಿರುವ ಬಟ್ಟೆ ಸುತ್ತಬೇಕು, ನಂತರ ಇದನ್ನು ಬೆಂಕಿಯ ಮೇಲೆ ಬಿಸಿ ಮಾಡಬೇಕು, ನಂತರ ಹೊಟ್ಟೆಯ ಒಳಗಿರುವ ಚಕ್ಕೆಯನ್ನು ತೆಗೆದು ವೆಕ್ಕೆಯ ರಸ ( ನಾಲ್ಕು ಅಥವಾ ಆರು ಚಮಚ ) ಸಮಪ್ರಮಾಣದ ಎಳ್ಳೆಣ್ಣೆ ಬೆರೆಸಬೇಕು, ಇದನ್ನು ಬೆಳಗ್ಗೆ ಮತ್ತು ರಾತ್ರಿ ಅರ್ಧ ಪ್ರಮಾಣದಲ್ಲಿ ಸೇವಿಸಬೇಕು, ಇದು ರಕ್ತ ಮಿಶ್ರಿತ ಬೇದಿ ಹಾಗು ಮಾಂಸ ಮಿಶ್ರಿತ ಬೇದಿಗೆ ಒಳ್ಳೆಯ ಮದ್ದು ಹಾಗೆಯೇ ಮೂಲವ್ಯಾಧಿಗೆ ಹಿತಕರ.

ಮಾಡಿದ ಮರದ ಒಳಗಿನ ತೊಗಟೆಯನ್ನು ಅಕ್ಕಿ ತೊಳೆದ ನೀರಿನಲ್ಲಿ ಹರಿದು ಕುಡಿದರೆ ಜ್ವರ ದಿಂದ ಕೂಡಿದ ಭೇದಿ ನಿಲ್ಲುತ್ತದೆ.

ಮಾವಿನ ಚಿಗುರು ಹಾಗೂ ನೇರಳೆ ಚಿಗುರನ್ನು ಸಮಭಾಗ ಸೇರಿಸಿ ಅದರ ರಸವನ್ನು ಹಾಲು ಸಕ್ಕರೆಯ ಜೊತೆ ನಾಲ್ಕರಿಂದ ಆರು ವಾರಗಳವರೆಗೆ ಸೇವಿಸಿದರೆ ಮೂಲವ್ಯಾಧಿ ಮೊಳಕೆ ಗುಣವಾಗುತ್ತದೆ.

ಮಾವಿನ ಮರದ ಎಲೆಯಲ್ಲಿ ಕಷಾಯದ ರಸ ವಿದೆ, ಎಲ್ಲಿಂದ ಹಲ್ಲು ತಿಕ್ಕಿದರೆ ಶುಭ್ರವಾಗುತ್ತದೆ, ಮಾತ್ರವಲ್ಲ ಹಲ್ಲು ಮತ್ತು ವಸಡುಗಳು ಗಟ್ಟಿಯಾಗುತ್ತದೆ.

ಮಾವಿನ ಮರದ ತೊಗಟೆಯ ಕಷಾಯ ವನ್ನು ಆಮವಾತ ಸಮಸ್ಯೆಗೆ ಔಷಧಿಯಾಗಿ ಉಪಯೋಗಿಸುತ್ತಾರೆ.

ಅರ್ಧ ಲೋಟದಷ್ಟು ಮಾವಿನ ಚಕ್ಕೆಯ ಕಷಾಯಕ್ಕೆ ಶೋಧಿಸಿದ ಸುಣ್ಣದ ತಿಳಿ ನೀರು ಸೇರಿಸಿ ಕುಡಿದರೆ ಹೊಟ್ಟೆ ನೋವು ಶಮನವಾಗುತ್ತದೆ.

ಮಾವಿನ ಎಲೆಯ ಕಷಾಯ ಮಾಡಿ ತಣಿಸಿ, ಅದಕ್ಕೆ ಜೇನು ಸೇರಿಸಿ ಕುಡಿದರೆ ಕೆಮ್ಮು ಕಡಿಮೆಯಾಗುತ್ತದೆ, ಸ್ವರವು ಉತ್ತಮವಾಗುತ್ತದೆ.

ಅಡುಗೆಯಲ್ಲಿ ಮಾವಿನಕಾಯಿ ಬಳಸಿ ಚಟ್ನಿ ಮಾಡುವ ವಿಧಾನ.

ಚಿಕ್ಕದಾಗಿ ಹಚ್ಚಿಕೊಂಡ ಮಾವಿನ ಕಾಯಿಯನ್ನು ಕಾಯಿತುರಿ, ಹಸಿಮೆಣಸು, ಉಪ್ಪು, ಇವುಗಳೊಂದಿಗೆ ಹದವಾಗಿ ರುಬ್ಬಿಕೊಳ್ಳಿ, ತೆಂಗಿನ ಎಣ್ಣೆ, ಕರಿಬೇವು, ಸಾಸಿವೆ, ಉದ್ದಿನಬೇಳೆ, ಹಾಗೂ ಕೆಂಪು ಮನಸ್ಸಿನ 2 – 3 ಚೂರು ಇವುಗಳನ್ನೆಲ್ಲ ಸೇರಿಸಿ ಒಗ್ಗರಣೆ ಹಾಕಿ, ಈ ಚಟ್ನಿಯನ್ನು ಇಡ್ಲಿ, ದೋಸೆಗೆ ಜೊತೆಗೆ ಅಥವಾ ಊಟದಲ್ಲಿ ಬಳಸಿಕೊಳ್ಳಬಹುದು, ಇದು ಹಸಿವು ಹಾಗೂ ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.

ಮಾವಿನ ಹಣ್ಣಿನ ಗೊಜ್ಜು : 2 3 ಚೆನ್ನಾಗಿ ಕಳೆತ ಮಾವಿನ ಹಣ್ಣುಗಳನ್ನು ಕಿವುಚಿ ರಸ ತೆಗೆದಿಟ್ಟುಕೊಳ್ಳಿ, ಓಟೆಗಳ ಜೊತೆಗೆ ಈ ರಸವನ್ನು ಬೇಯಿಸಿ, ನಂತರ ಒಗ್ಗರಣೆ ಕೊಡಿ, ಈ ಗೊಜ್ಜು ರುಚಿಕರ ಹಾಗೂ ಆರೋಗ್ಯಕರ.

LEAVE A REPLY

Please enter your comment!
Please enter your name here