ಮಲ್ಲಿಗೆ ಹೂವು : ರೋಗ ನಿವಾರಣೆ, ಆರೋಗ್ಯ ಭಾಗ್ಯ ದೊರೆಯುತ್ತದೆ.
ತುಂಬೆ ಹೂ : ದೇವರಲ್ಲಿ ಭಕ್ತಿ ಇಮ್ಮಡಿಗೊಳಿಸುತ್ತದೆ.
ಕನಕಾಂಬರ ಹೂ : ವೈರಾಗ್ಯ ದೊರೆಯುತ್ತದೆ.
ನಂದಿ ಬಟ್ಟಲು ಶಿವನಿಗೆ : ಜೀವನದಲ್ಲಿ ಸುಖ ಶಾಂತಿ ನೆಮ್ಮದಿ.
ಕಮಲದ ಹೂ : ದಾರಿದ್ರ್ಯ ನಿವಾರಣೆ, ಲಕ್ಷ್ಮಿ ಕಟಾಕ್ಷ ದೊರೆಯುತ್ತದೆ.
ಸಂಪಿಗೆ ಹೂವು : ಮಾಂತ್ರಿಕ ಪ್ರಯೋಗಗಳು ಕೆಲಸ ಮಾಡುವುದಿಲ್ಲ, ಶತ್ರುಗಳ ನಿವಾರಣೆಯಾಗುತ್ತದೆ.
ಕೇದಿಗೆ ಹೂ : ಅಧಿಕಾರದಲ್ಲಿರುವ ಮನಸ್ತಾಪ ದೂರವಾಗುತ್ತದೆ.
ರುದ್ರಾಕ್ಷಿ ಹೂ : ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ ಜಯ ನಿಮ್ಮದಾಗುತ್ತದೆ.
ಜಾಜಿ ಹೂ : ದುಷ್ಟ ಗುಣಗಳಿಂದ ದೂರಾಗಿ ಒಳ್ಳೆಯ ಗುಗುಣವಂತರಾಗಿ ಬಾಳುತ್ತೇವೆ.
ಪಾರಿಜಾತ ಹೂ : ಕಾಳ ಸರ್ಪದೋಷ ನಿವಾರಣೆಯಾಗುತ್ತದೆ.
ಮೇಲೆ ತಿಳಿಸಿರುವಂತಥ ಪುಷ್ಪಗಳನ್ನು ಅರ್ಪಿಸಿ ಬೆಳಗಿನ ಜಾವ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ಬೆಳಗ್ಗೆ 5 ಗಂಟೆಯಿಂದ 6 30 ನಿಮಿಷದವರೆಗೆ ಭಕ್ತಿಯಿಂದ ಪೂಜೆ ಮಾಡಿದರೆ ಸಂತೃಪ್ತಿಯ ಜೀವನ ಮತ್ತು ಜೀವನದಲ್ಲಿ ಯಾವುದೇ ತರಹದ ತೊಂದರೆಯೂ ಬರುವುದಿಲ್ಲ, ಬಯಸಿದ ಕಾರ್ಯಗಳೆಲ್ಲವೂ ಸಿದ್ಧಿಯಾಗುತ್ತದೆ, ಸಾಯಂಕಾಲದ ಪೂಜೆಯಿಂದ ದೇವರಲ್ಲಿ ಭಕ್ತಿಯು ಹೆಚ್ಚಾಗಿ ಸಮಸ್ತ ಕಷ್ಟಗಳಿಂದ ಪರಿಹಾರ ಸಿಗುತ್ತದೆ, ರಾತ್ರಿ ಕಾಲದ ಪೂಜೆಯಿಂದ ಆರೋಗ್ಯದಲ್ಲಿ ಏರುಪೇರಾಗುತ್ತದೆ ಮತ್ತು ಮಧ್ಯ ರಾತ್ರಿ ದೇವರ ಪೂಜೆ ಮಾಡಲೇಬಾರದು ಅಪಮೃತ್ಯುವಿಗೆ ಇಡಾಗುತ್ತಾನೆ, ಇನ್ನು ಬಿಳಿ ಎಕ್ಕದ ಹೂವಿನಿಂದ ಗಣೇಶನಿಗೆ, ಶಿವನಿಗೆ, ಪೂಜೆ ಮಾಡಿದರೆ ಸಮಸ್ತ ರೋಗಗಳಿಂದ ನಿವಾರಣೆಯಾಗಿ ಆರೋಗ್ಯ ಭಾಗ್ಯ ಲಭಿಸುತ್ತದೆ.