ಬೆಳಗ್ಗಿನ ತಿಂಡಿ ಸಮಯದಲ್ಲಿ ಕಾಫಿ, ಟೀ ಕುಡಿಯುವ ಬದಲು ಹಾಲು ಕುಡಿಯಿರಿ, ಗೋಧಿಯ ತಿಂಡಿ ತಿಂದರೆ ಉತ್ತಮ, ಒಣ ಚಪಾತಿ ಒಳ್ಳೆಯದು.
ಮಧ್ಯಾಹ್ನದ ಊಟಕ್ಕೂ ಮೊದಲು ಹಸಿವಾದರೆ ಕಿತ್ತಳೆ, ಅನನಾಸು ಅಥವಾ ಕ್ಯಾರೆಟ್ಟಿನ ಜ್ಯೂಸ್ ಕುಡಿಯಿರಿ, ಸಕ್ಕರೆ ಹಾಕದಿದ್ದರೆ ಉತ್ತಮ, ಕೇವಲ ಹಣ್ಣಿನ ರಸ ತೆಗೆದು ಕುಡಿಯಿರಿ.
ಮಧ್ಯಾಹ್ನ ಊಟವಾದ ನಂತರ ಮಜ್ಜಿಗೆ ನೀರಿಗೆ ಕೊತ್ತಂಬರಿ ಸೊಪ್ಪು, ಸ್ವಲ್ಪ ಉಪ್ಪು ಹಾಕಿ ಕುಡಿಯಿರಿ, ಅದಕ್ಕೆ ಸ್ವಲ್ಪ ಶುಂಠಿಯನ್ನೂ ಸೇರಿಸಬಹುದು.
ಬೆಳಿಗ್ಗೆ ಎದ್ದ ತಕ್ಷಣ ಅರ್ಧ ನಿಂಬೆಯನ್ನು ಒಂದು ಲೋಟ ಬಿಸಿ ನೀರಿಗೆ ಹಿಂಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯಿರಿ, ಇದು ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ರಾತ್ರಿ ಹೋಲ್ ವೀಟ್ ಬ್ರೆಡ್ ಅಥವಾ ಹೋಲ್ ಗ್ರೈನ್ ಬ್ರೆಡ್ ತಿನ್ನಿ ಅಥವಾ ಚಪಾತಿಯೂ ತಿನ್ನಬಹುದು, ಜತೆಗೆ ಬಾಳೆಹಣ್ಣು ಹಾಗೂ ಆಪಲ್ ಹೊರತುಪಡಿಸಿ ಉಳಿದೆಲ್ಲಾ ಹಣ್ಣುಗಳನ್ನು ತಿನ್ನಬಹುದು, ಬಾಳೆಹಣ್ಣು ತೂಕ ನೀಡುತ್ತದೆ.
ಈ ಆಹಾರ ಪದ್ಧತಿಯನ್ನು ತಿಂಗಳುಗಳ ಕಾಲ ಮಾಡಿದರೆ ಖಂಡಿತಾ ತೂಕ ಇಳಿಯುತ್ತದೆ, ಆದರೆ ಇಂಥ ಸಿದ್ಧ ಮಾದರಿಯ ಶಿಸ್ತಾದ ಆಹಾರಕ್ರಮ ಸಾಧ್ಯವಾಗದಿದ್ದರೆ ನಮ್ಮ ದಿನನಿತ್ಯದ ಆಹಾರ ಪದ್ಧತಿಯಲ್ಲೇ ಕೊಂಚ ಮಾರ್ಪಾಟು ಮಾಡಿಕೊಂಡರೂ ತೂಕ ಇಳಿಕೆ ಸಾಧ್ಯ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.