ಪ್ರತಿದಿನ ನಿಮ್ಮ ಅಡುಗೆಯಲ್ಲಿ ಇಂಗೂ ಬಳಸಿದರೆ ಇಷ್ಟೆಲ್ಲಾ ಕಾಯಿಲೆಗಳಿಂದ ಮುಕ್ತಿ ಸಿಗುತ್ತದೆ ಗೊತ್ತಾ..?

0
2976

ಮಸಾಲೆ ಪದಾರ್ಥಗಳಲ್ಲಿ ಸರ್ವಶ್ರೇಷ್ಠ ಇಂಗು ಕಾರಣ ಇದು ಜೀರ್ಣಕ್ರಿಯೆಗೆ ಬಹಳ ಸಹಕಾರಿ, ಇದನ್ನು ಉಪ್ಪಿನಕಾಯಿಯಲ್ಲಿ ಹಾಗೂ ಕೆಲವು ಜನಾಂಗ ತಮ್ಮ ಪ್ರತಿ ಆಹಾರದಲ್ಲೂ ಬಳಸುತ್ತಾರೆ, ಇದರ ವಾಸನೆಯೂ ಅಭ್ಯಾಸ ಇಲ್ಲದಿದ್ದವರಿಗೆ ಬಹಳ ಕಟುವಾಗಿದ್ದರೆ, ಇನ್ನು ಬಳಸುವ ಅಭ್ಯಾಸ ಇದ್ದವರಿಗೆ ಇದರ ವಾಸನೆ ಬಹಳ ಇಷ್ಟವಾಗುತ್ತದೆ, ತುಪ್ಪದಲ್ಲಿ ಅಥವಾ ಎಣ್ಣೆಯಲ್ಲಿ ಇಂಗನ್ನು ಬಿಸಿ ಮಾಡಿದಾಗ ಅದರ ವಾಸನೆ ಹಾಗೂ ರುಚಿ 2 ಸೌಮ್ಯ ವಾಗುತ್ತದೆ, ಇನ್ನು ಇಂಗಿನ ಇತರ ಆರೋಗ್ಯ ಲಾಭಗಳನ್ನು ಈ ಕೆಳಗೆ ಓದಿ.

ಶೀತ ಜ್ವರ ಉಪಶಮನ : ಅಡುಗೆ ಒಗ್ಗರಣೆಗೆ ಸಾಸಿವೆ ಜೊತೆ ಇಂಗನ್ನು ಬಳಸುವ ರೂಢಿ ಮಾಡಿಕೊಂಡಿದ್ದಲ್ಲಿ ಹಂದಿ ಜ್ವರ ವೈರಸ್, ಹೆಚ್ ವನ್ ಏನ್ ವನ್ ವೈರಸ್ ಅಥವಾ ವಾತಾವರಣದಿಂದ ಹರಡುವ ವೈರಸ್ ನಿಂದ ಬರುವಂಥ ಸೀತ ಜ್ವರವನ್ನು ಶಮನಗೊಳಿಸುತ್ತದೆ.

ಜೀರ್ಣಕ್ರಿಯೆ : ಥೈಲ್ಯಾಂಡ್ ನಂತಹ ದೇಶದಲ್ಲಿ ಇಂಗನ್ನು ಮಹಾ ಇಂಗು ಎಂದು ಕರೆಯುತ್ತಾರೆ ಹಾಗೂ ಇದನ್ನು ಉದರದ ಮೇಲೆ ಇಂಗಿಗೆ ನೀರು ಮಿಶ್ರ ಮಾಡಿ ಆ ದ್ರಾವಣವನ್ನು ಲೇಪಿಸುತ್ತಾರೆ ಇದರಿಂದ ಜೀರ್ಣಕ್ರಿಯೆ ಸಹಕಾರಿಯಾಗುತ್ತದೆ.

ಉಬ್ಬಸ ಹಾಗೂ ಗೂರಲು ರೋಗ : ಕೆಲವು ಸಂಶೋಧನೆಗಳು ಪ್ರತಿನಿತ್ಯದ ಹಿಂಗೂ ಸೇವನೆ ಉಬ್ಬಸ ಹಾಗೂ ಗೂರಲು ರೋಗ ಗಳನ್ನು ತಡೆಯಬಲ್ಲದು ಎಂಬ ವಿಶ್ಲೇಷಣೆಯನ್ನು ನೀಡಿದೆ.

ಮಕ್ಕಳ ಶೀತ : ಇಂಗನ್ನು ಒಂದು ಬಟ್ಟೆಯಲ್ಲಿ ಕಟ್ಟಿ ಅದನ್ನು ಸೀಟ್ ನಿಂದ ಬಳಲುತ್ತಿರುವ ಮಕ್ಕಳ ಗಂಟೆಗೆ ಮೃದುವಾಗಿ ಕಟ್ಟಿದರೆ ಮಕ್ಕಳ ಶೀತ ಬಹು ಬೇಗ ಶಮನವಾಗುತ್ತದೆ.

ವಾತವನ್ನು ನಿಯಂತ್ರಿಸುತ್ತದೆ : ಆಯುರ್ವೇದದಲ್ಲಿ ಇಂಗು ವಾತ ದೋಷವನ್ನು ನಿವಾರಿಸುವ ಉತ್ತಮ ಪದಾರ್ಥ ಎಂದು ಪರಿಗಣಿಸಲಾಗಿದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here