ಹೊಟ್ಟೆಯನ್ನು ಸ್ವಚ್ಛಗೊಳಿಸಿ ಬೇಡದ ಅಂಶಗಳನ್ನು ಹೊರಹಾಕಲು ಲಿಂಬೆ ಸಹಕಾರಿಯಾಗಿದೆ, ಲಿಂಬೆಯಿಂದ ದೈಹಿಕ ಸ್ವಾಸ್ಥ್ಯ ಉತ್ತಮವಾಗಿರುತ್ತದೆ, ಲಿಂಬೆ ಚಹಾ ಕೂಡ ಈ ದಿಶೆಯಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸುತ್ತದೆ, ತೂಕವನ್ನು ಇಳಿಸಿ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಲಿಂಬೆ ಚಹಾ ಉತ್ತಮ ಪಾತ್ರ ನಿರ್ವಹಿಸುತ್ತದೆ, ಲಿಂಬೆ ಚಹಾ ನಿಮ್ಮ ಮನಸ್ಸನ್ನು ತಾಜಾಗೊಳಿಸಿ ಆರೋಗ್ಯವಂತರನ್ನಾಗಿಸುತ್ತದೆ.
ನೈಸರ್ಗಿಕ ಚಹಾವಾದ ಲಿಂಬೆಯುಕ್ತ ಚಹಾ ದೇಹದಿಂದ ಬೇಡವಾದ ಕೊಬ್ಬನ್ನು ಹೊರಹಾಕಿ ಸ್ವಾಸ್ಥ್ಯಗೊಳಿಸುತ್ತದೆ, ಹರ್ಬಲ್ ಲಿಂಬೆ ಚಹಾ ಯಾವುದೇ ಅಡ್ಡಪರಿಣಾಮಗಳನ್ನು ಹೊಂದಿರುವುದಿಲ್ಲ. ಶೀತ, ಕೆಮ್ಮು, ತಲೆನೋವು, ಸುಸ್ತು ಮುಂತಾದ ಕಾಯಿಲೆಗಳಿಗೂ ಲಿಂಬೆ ಚಹಾ ರಾಮಬಾಣವಾಗಿದೆ.
ನಿಮ್ಮ ದೈನಂದಿನ ಜೀವನದಲ್ಲಿ ಲಿಂಬೆ ಚಹಾವನ್ನು ಸೇವಿಸುವುದು ನಿಮ್ಮನ್ನು ಚಟುವಟಿಕೆಯಿಂದ ಇರಿಸಲು ಪ್ರಮುಖ ಪಾತ್ರವಹಿಸುತ್ತದೆ, ಇಂದು ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿರುವ ಲಿಂಬೆ ಚಹಾದ ತಯಾರಿ ವಿಧಾನ ಹೀಗಿದೆ.
ಪ್ರಮಾಣ : 3 ರಿಂದ 4 ಜನರಿಗೆ ಸಾಕಾಗುವಷ್ಟು, ಸಿದ್ಧತಾ ಸಮಯ : 8 ರಿಂದ 10 ನಿಮಿಷಗಳು.
ಸಾಮಾಗ್ರಿಗಳು : ಕಪ್ಪು ಚಹಾ ಎಲೆಗಳು – 1 ಟೇಸ್ಫೂನ್ (ನೀವು ಚಹಾ ಬ್ಯಾಗ್‌ಗಳನ್ನು ಕೂಡ ಬಳಸಬಹುದು), ಲಿಂಬೆ – 1, ಏಲಕ್ಕಿ -1/2 ಇಂಚಿನ ಕೋಲು, ಜೇನು – 1/2 ಟೇಸ್ಪೂನ್, ಲಿಂಬೆ ಹೋಳು – 5-6 (ಅಲಂಕಾರಕ್ಕಾಗಿ).
ಮಾಡುವ ವಿಧಾನ : ಚಹಾ ಪಾತ್ರೆಯಲ್ಲಿ ನೀರನ್ನು ಇಡಿ, ಕಪ್ಪು ಚಹಾ ಎಲೆಗಳನ್ನು ಸೇರಿಸಿ ಅಥವಾ ಚಹಾ ಬ್ಯಾಗನ್ನು ಮುಳುಗಿಸಿ ಲಿಂಬೆ ರಸ, ಜೇನು ಮತ್ತು ಏಲಕ್ಕಿಯನ್ನು ಚಹಾ ಪಾತ್ರೆಗೆ ಹಾಕಿ, ಮೂರು ನಿಮಿಷಗಳಷ್ಟು ಕಾಲ ಕುದಿಸಿ, ಚೆನ್ನಾಗಿ ಕುದಿದ ನಂತರ, ಕಪ್‌ಗೆ ಸೋಸಿ ಮತ್ತು ಲಿಂಬೆ ಹೋಳುಗಳಿಂದ ಅಲಂಕರಿಸಿ.
ಲಿಂಬೆ ಚಹಾ ಸವಿಯಲು ಸಿದ್ಧವಾಗಿದೆ, ಈ ತೂಕ ಇಳಿಸುವ ಪೇಯವನ್ನು ಬಿಸಿ ಇಲ್ಲವೇ ತಣ್ಣಗೆ ಸವಿಯಬಹುದು, ಇದು ಕೊಬ್ಬಿನ ಅಂಶಗಳನ್ನು ದೇಹದಿಂದ ತೊಡೆದುಹಾಕಿ ಗಂಟಲನ್ನು ಸೋಂಕಿನಿಂದ ರಕ್ಷಿಸುತ್ತದೆ.