ದಾಳಿಂಬೆ ಮತ್ತು ಜೇನುತುಪ್ಪ : ದಾಳಿಂಬೆ ಮತ್ತು ಜೇನುತುಪ್ಪವು ನಿಮ್ಮ ಚರ್ಮದ ಕಾಂತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಮೊದಲಿಗೆ ಅರ್ಧ ಬಟ್ಟಲಿನಲ್ಲಿ ದಾಳಿಂಬೆ ಕಾಳನ್ನು ಮಿಶ್ರಣ ಮಾಡಿ ಅದರಲ್ಲಿ ಒಂದು ಚಮಚ ಜೇನುತುಪ್ಪ ಸೇರಿಸಿ ನಂತರ ಆ ಮಿಶ್ರಣವನ್ನು ನಿಮ್ಮ ಮುಖದ ಚರ್ಮದ ಮೇಲೆ ಸಿಂಪಡಿಸಿ 20 ನಿಮಿಷದ ನಂತರ ತಣ್ಣಗಿನ ನೀರಲ್ಲಿ ತೊಳೆಯಿರಿ ಹೀಗೆ ಮಾಡುವುದರಿಂದ ತ್ವಚೆಯು ತಾಜಾತನದಿಂದ ಕೂಡಿರುವುದು.
ಹೆಸರುಕಾಳು : 2 ಟೇಬಲ್ ಚಮಚಮ ಹೆಸರುಕಾಳು ಹಿಟ್ಟಿಗೆ ಒಂದು ಅರ್ಧ ಚಮಚ ಅರಿಶಿನವನ್ನು ಸೇರಿಸಿ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಈ ಪೇಸ್ಟ್ ಅನ್ನು ಮುಖಕ್ಕೆ ಹಚ್ಚಿ 20 ನಿಮಿಷಗಳ ಕಾಲ ಬಿಡಿ ನಂತರ ತಣ್ಣಗಿನ ನೀರಲ್ಲಿ ತೊಳೆಯಿರಿ ಇದು ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸುತ್ತದೆ.
ಪುದೀನ ಮತ್ತು ಮುಲ್ತಾನಿ ಮಿಟ್ಟಿ : ತಾಜಾ ಪುದೀನ ಎಲೆಗಳನ್ನು ಪೇಸ್ಟ್ ಮಾಡಿ ಅದಕ್ಕೆ ಕೆಲವು ಹನಿ ಗುಲಾಬಿ ನೀರು ಮತ್ತು 1 ಟೀ ಚಮಚ ಮುಲ್ತಾನಿಮಿಟ್ಟಿಯನ್ನು ಸೇರಿಸಿ ಮಿಶ್ರಗೊಳಿಸಿ, ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ 20 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ ಚರ್ಮವು ಸದಾ ತೇವಾಂಶದಿಂದ ಕೂಡಿರುವುದು.
ತುಳಸಿ ಮತ್ತು ಬೇವು : 2 ಟೀ ಚಮಚ ತುಳಸಿ ಪುಡಿ, 2 ಟೀ ಚಮಚ ಬೇವಿನ ಪುಡಿ ಮತ್ತು ಕೆಲವು ಹನಿ ಗುಲಾಬಿ ನೀರನ್ನು (rose water) ಸೇರಿಸಿ, ಮಿಶ್ರಗೊಳಿಸಿ, ಮಿಶ್ರಣವನ್ನು ಮುಖ ಹಾಗೂ ಕತ್ತಿನ ಭಾಗಕ್ಕೆ ಅನ್ವಯಿಸಿ, 15 ನಿಮಿಷಗಳ ಬಳಿಕ ತಣ್ಣೀರಿನಲ್ಲಿ ತೊಳೆಯಿರಿ, ಚರ್ಮವು ಸೋಂಕು ಮತ್ತು ಕಲೆ ರಹಿತವಾಗಿ ಆಕರ್ಷಕ ತ್ವಚೆಯಿಂದ ಕಂಗೊಳಿಸುವುದು.
ಟೊಮೆಟೋ : ಟೊಮೆಟೋವು ಚರ್ಮಕ್ಕೆ ಶಕ್ತಿ ನೀಡುತ್ತದೆ ಇದು ಎಲ್ಲಾ ರೀತಿಯ ಚರ್ಮಕ್ಕೆ ಮತ್ತು ಅದರ ಸಮಸ್ಯೆಗಳಿಗೆ ಒಳ್ಳೆಯದು ಜೇನುತುಪ್ಪದೊಂದಿಗೆ ಸೇರಿಸುವುದರಿಂದ ಚರ್ಮಕ್ಕೆ ಒಳ್ಳೆಯ ಕಾಂತಿ ಸಿಗುವುದು ಜೇನುತುಪ್ಪ ಮತ್ತು ಟೊಮೆಟೋ ಜ್ಯೂಸ್ ಅನ್ನು ಸರಿಯಾದ ಪ್ರಮಾಣದಲ್ಲಿ ಸೇರಿಸಿಕೊಂಡು ಈ ಮಿಶ್ರಣ ಮುಖಕ್ಕೆ ಹಚ್ಚಿಕೊಳ್ಳಿ ರಾತ್ರಿ ಹಾಗೆ ಬಿಟ್ಟು ಬೆಳಗ್ಗೆ ಮುಖ ತೊಳೆಯಿರಿ.