ಪ್ರತಿದಿನ ಬೆಳಗ್ಗೆ ಒಂದು ಎಳನೀರು ಸೇವನೆ ಮಾಡಿದ್ರೆ ಈ 8 ಸಮಸ್ಯೆಗಳಿಂದ ದೂರವಿರಬಹುದು..!!

0
11876

ಪ್ರತಿದಿನ ಒಂದು ಎಳನೀರು ಸೇವನೆ ಮಾಡಿದರೆ ಈ ಕೆಳಗಿನ ಸಮಸ್ಯೆಗಳಿಂದ ದೂರವಿರಬಹುದು ಹೌದು ಎಳನೀರು ಒಂದು ಇಂಜೆಕ್ಷನ್ ಗೆ ಸಮ ಎಂದು ಹೇಳಲಾಗುತ್ತದೆ ಹಾಗಾಗಿ ಈ ಕೆಳಗೆ ಇರುವ ಸಮಸ್ಯೆಗಳಿಗೆ ಪರಿಹಾರ ಅಂದ್ರೆ ಅದು ಎಳನೀರು.

ಹ್ಯಾಂಗೋವರ್‌ : ವೀಕೆಂಡ್‌ ಪಾರ್ಟಿ ಮುಗಿಸಿ ಬೆಳಗ್ಗೆ ಏಳುವಾಗ ಹ್ಯಾಂಗೋವರ್‌ ಕಾಡುತ್ತಿದೆಯೇ, ಖಾಲಿ ಹೊಟ್ಟೆಯಲ್ಲಿ ಒಂದು ಎಳನೀರು ಕುಡಿದರೆ ಸಾಕು ರಿಫ್ರೆಶ್‌ ಆಗುವಿರಿ.

ಬೊಜ್ಜು ಕರಗಲು : ಬೊಜ್ಜು ಕರಗಲು ದಿನಾ ಅರ್ಧ ಗಂಟೆ ವ್ಯಾಯಾಮ ಹಾಗೂ ಒಂದು ಎಳನೀರು ಕುಡಿಯಿರಿ, ಬೊಜ್ಜು ಕರಗುವುದು ಮುಖದ ಕಾಂತಿ ಕೂಡ ಹೆಚ್ಚುವುದು.

ಹೃದಯದ ಆರೋಗ್ಯಕ್ಕೆ ಎಳನೀರು : ಇದು ಕೆಟ್ಟ ಕೊಲೆಸ್ಟ್ರಾಲ್‌ ಕಡಿಮೆ ಮಾಡಿ ಒಳ್ಳೆಯ ಕೊಲೆಸ್ಟಾಲ್ ಹೆಚ್ಚು ಮಾಡುತ್ತದೆ ಇದರಿಂದ ಹೃದಯ ಸಂಬಂಧಿ ಸಮಸ್ಯೆಗಳನ್ನು ನಿಯಂತ್ರಿಸಬಹುದು.

ಸಕ್ಕರೆಯಂಶವನ್ನು ನಿಯಂತ್ರಣದಲ್ಲಿಡುತ್ತದೆ : ಇದರಲ್ಲಿ ಅಮೈನೋ ಆ್ಯಸಿಡ್‌ ಇದ್ದು ಸಕ್ಕರೆಯಂಶವನ್ನು ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ.

ಮೈಗ್ರೇನ್‌ : ದೇಹದಲ್ಲಿ ಮೆಗ್ನಿಷಿಯಂ ಅಂಶ ಕಡಿಮೆಯಾದರೆ ಮೈಗ್ರೇನ್‌ ಕಾಣಿಸುವುದು ಮೈಗ್ರೇನ್‌ಗೆ ಎಳನೀರಿನಲ್ಲಿರುವ ಮೆಗ್ನಿಷಿಯಂ ಒಳ್ಳೆಯದೆಂದು ಎಕ್ಸ್‌ಪರ್ಟ್ಸ್‌ ಕೂಡ ಸಲಹೆ ನೀಡುತ್ತಾರೆ, ಯೌವನದ ಲುಕ್ ಬೇಕೆ, ವಯಸ್ಸಾದಂತೆ ಸುಕ್ಕಾಗುವುದು ನೈಸರ್ಗಿಕ ನಿಯಮವಾದರೂ ಯೌವನ ಕಳೆ ಬೇಗನೆ ಮಾಸದಿರಲು ಎಳನೀರು ಸಹಾಯ ಮಾಡುತ್ತದೆ.

ಬಿಪಿ ನಿಯಂತ್ರಣ : ವೆಸ್ಟ್‌ ಇಂಡಿಯಾ ಮೆಡಿಕಲ್ ಜರ್ನಲ್‌ ಮಾಡಿರುವ ಅಧ್ಯಯನದಲ್ಲಿ ಎಳನೀರಿನಲ್ಲಿರುವ ಪೊಟಾಷ್ಯಿಯಂ ರಕ್ತದೊತ್ತಡ ನಿಯಂತ್ರಣ ಮಾಡುತ್ತದೆ ಎಂದು ಸಾಬೀತಾಗಿದೆ.

ನ್ಯಾಚುರಲ್‌ ಎನರ್ಜಿ ಡ್ರಿಂಕ್ಸ್‌ : ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ತುಂಬಾ ಸುಸ್ತು ಅನಿಸುವುದು, ಒಂದು ಎಳನೀರು ದಿನಪೂರ್ತಿ ಚಟುವಟಿಕೆಯಿಂದ ಇರಲು ಚೈತನ್ಯ ನೋಡುವುದು.

LEAVE A REPLY

Please enter your comment!
Please enter your name here