ಸಾಮಾನ್ಯವಾಗಿ ಎಲ್ಲರೂನಿಂಬೆಹಣ್ಣನ್ನು ಹಿಂದಿ ರಸ ಸಂಗ್ರಹಿಸಿ ಸಿಪ್ಪೆಯನ್ನು ಎಸೆದುಬಿಡುತ್ತಾರೆ. ಆದರೆ ಈ ಸಿಪ್ಪೆಯಲ್ಲಿಯೂ ಹಲವಾರು ಆರೋಗ್ಯಕರ ಪ್ರಯೋಜನಗಳಿವೆ ಎಂದು ನಿಮಗೆ ಗೊತ್ತಿತ್ತೇ, ನಿಂಬೆಹಣ್ಣಿನಲ್ಲಿ ವಿಟಮಿನ್ ಬಿ6, ಬಿ, ಎ ಹಾಗೂ ಸಿ ಫೋಲಿಕ್ ಆಮ್ಲ, ಮೆಗ್ನಿಶಿಯಂ, ಕ್ಯಾಲ್ಸಿಯಂ, ಪೊಟ್ಯಾಶಿಯಂ ಹಾಗೂ ಗಂಧಕ ಉತ್ತಮ ಪ್ರಮಾಣದಲ್ಲಿದೆ. ಇವೆಲ್ಲವೂ ಆರೋಗ್ಯವನ್ನು ವೃದ್ಧಿಸುವುದು ಮಾತ್ರವಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ ಹಾಗಾದರೆ ಸಿಪ್ಪೆಯಲ್ಲಿ ಏನು ಇಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿ ಬರಬಹುದು. ಹೌದು ಸಿಪ್ಪೆಯಲ್ಲಿಯೂ ಪೊಟ್ಯಶಿಯಂ ವಿಟಮಿನ್ ಸಿ, ಹಾಗೂ ಕರಗದ ನಾರು ಇದೆ. ಬನ್ನಿ ಈ ಸಿಪ್ಪೆಯನ್ನು ಸಂಧಿವಾತದ ಉಪಶಮನಕ್ಕಾಗಿ ಹೇಗೆ ಬಳಸಬಹುದು ಎಂಬುದು ಇಲ್ಲಿದೆ ನೋಡಿ.
ನಿಂಬೆ ಹಣ್ಣಿನ ಸಿಪ್ಪೆಯು ಉತ್ತಮ ಪ್ರತಿಜೀವಕಗಳನ್ನು ಹೊಂದಿದ್ದು ಸಮರ್ಥ ಔಷಧಿಯಂತೆ ಕೆಲಸ ನಿರ್ವಹಿಸುತ್ತದೆ, ಅಲ್ಲದೆ ಇದರಲ್ಲಿರುವ ಕೆಲವು ಅವಶ್ಯಕ ತೈಲಗಳಲ್ಲಿಯೂ ಗುಣಪಡಿಸುವ ಗುಣಗಳಿದ್ದು ದೇಹದ ಹೊರಗಿನಿಂದ ಹಾಗೂ ಒಳಗಿನಿಂದಲೂ ಉಪಶಮನ ಒದಗಿಸುತ್ತದೆ. ನಿಂಬೆ ಸಿಪ್ಪೆಯಲ್ಲಿರುವ ಪೋಷಕಾಂಶಗಳು ರಕ್ತನಾಳಗಳನ್ನು ನಿರಾಳಗೊಳಿಸಿ ರಕ್ತ ಸಂಚಾರ ಸುಗಮಗೊಳಿಸಲು ನೆರವಾಗುವುದಲ್ಲದೆ ಉರಿಯೂತವನ್ನು ಕಡಿಮೆ ಮಾಡುತ್ತದೆ.
ಸಂಧಿವಾತವೇ ಈ ವಿಧಾನವನ್ನು ಅನುಸರಿಸಿ..
ರಸ ಹಿಂಡಿ ತೆಗೆದ ನಿಂಬೆಹಣ್ಣಿನ ಸಿಪ್ಪೆಯನ್ನು ಸಂಗ್ರಹಿಸಿ ಈ ಸಿಪ್ಪೆಯ ಒಳಭಾಗದಲ್ಲಿರುವ ಬಿಳಿಪದರ ವನ್ನು ನಿವಾರಿಸಿ ಕೇವಲ ಹಳದಿ ಬಣ್ಣದ ಹೊರಪದರವನ್ನು ಮಾತ್ರವೇ ಸಂಗ್ರಹಿಸಿ ಈ ಪದರವನ್ನು ನೋವಿರುವ ಸಂದುಗಳ ಮೇಲೆ ಇರಿಸಿ ಅಲ್ಲಾಡದಂತೆ ಬಟ್ಟೆಯ ಪಟ್ಟಿಯೊಂದನ್ನು ಬಿಗಿಯಾಗಿ ಕಟ್ಟಿ ಒಂದೆರಡು ಗಂಟೆಗಳ ಬಳಿಕ ಪಟ್ಟಿಯನ್ನು ನಿವಾರಿಸಿ.
ಸಂಧಿವಾತಕ್ಕೆ ಇನ್ನೊಂದು ವಿಧಾನ ಹೀಗಿದೆ. ಕೆಲವು ನಿಂಬೆಹಣ್ಣುಗಳ ಹೊರಸಿಪ್ಪೆಯನ್ನು ಸಂಗ್ರಹಿಸಿ ಒಂದು ಚಿಕ್ಕ ಗಾಜಿನ ಬಾಟಲಿಯಲ್ಲಿ ಹಾಕಿ. ಇದಕ್ಕೆ ಸುಮಾರು ಮೂರರಿಂದ ನಾಲ್ಕು ದೊಡ್ಡ ಚಮಚ ಆಲಿವ್ ಎಣ್ಣೆಯನ್ನು ಬೆರೆಸಿ ಸುಮಾರು ಹದಿನೈದು ದಿನಗಳ ಕಾಲ ಗಟ್ಟಿಯಾಗಿ ಮುಚ್ಚಳ ಮುಚ್ಚಿ. ಬಳಿಕ ಈ ಎಣ್ಣೆಯನ್ನು ನೋವಿರುವ ಜಾಗಕ್ಕೆ ನಯವಾಗಿ ಮಸಾಜ್ ಮಾಡಿ. ಕೆಲವು ಗಂಟೆಗಳ ಕಾಲ ಹಾಗೆ ಇರಿಸಿ ಬಳಿಕ ತೊಳೆದುಕೊಳ್ಳಿ.
ಲಿಂಬೆ ರಸದಂತೆಯೇ ನಿಂಬೆ ಸಿಪ್ಪೆಯಲ್ಲಿಯೂ ವಿಟಮಿನ್ ಸಿ ಹಾಗೂ ಕ್ಯಾಲ್ಸಿಯಂ ಉತ್ತಮ ಪ್ರಮಾಣದಲ್ಲಿದೆ ಈ ಕ್ಯಾಲ್ಸಿಯಂ ಮೂಳೆಗಳಿಗೆ ಅಗತ್ಯವಾಗಿದೆ. ಭಾರತೀಯರು ಲಿಂಬೆಹಣ್ಣನ್ನು ಸಿಪ್ಪೆ ಸಹಿತ ಉಪ್ಪಿನ ಕಾಯಿ ಹಾಕಿ ವರ್ಷವಿಡೀ ಊಟದೊಡನೆ ಸೇವಿಸುತ್ತಾರೆ. ಈ ಸಿಪ್ಪೆಯ ಸೇವನೆಯಿಂದ ಸಂಧಿವಾತ ಹಾಗೂ ಮೂಳೆಗಳು ಟೊಳ್ಳಾಗುವ ಓಸ್ಟೆಯೋಪೋರೊಸಿಸ್ ಎಂಬ ಸ್ಥಿತಿಯಿಂದ ರಕ್ಷಿಸುತ್ತದೆ.
ನಿಂಬೆ ಸಿಪ್ಪೆಯಲ್ಲಿಯೂ ಉತ್ತಮ ಪ್ರಮಾಣದ ಓಯೋ ಪ್ಲಾವನಾಯ್ಡ್ ಗಳಿದ್ದು ಇವು ಉತ್ಕ್ರಷನಶೀಲ ಒತ್ತಡವನ್ನು ನಿವಾರಿಸಿಸಲು ಸಮರ್ಥವಾಗಿದೆ. ಲಿಂಬೆ ಸಿಪ್ಪೆಯಲ್ಲಿರುವ ಪಾಲಿಫೆನಾಲ್ ರಕ್ತದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ತಾಗಿಸುತ್ತದೆ. ಲಿಂಬೆ ಸಿಪ್ಪೆಯನ್ನು ತುರಿದು ಆಹಾರದ ಜೊತೆಗೆ ಸೇವಿಸುವ ಮೂಲಕ ದೇಹದಲ್ಲಿರುವ ವಿಷವಸ್ತುಗಳನ್ನು ಹೊರಹಾಕಲು ನೆರವಾಗುತ್ತದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.