ನರ ಸಂಬಂದಿ ಕಾಯಿಲೆಗಳಿಗೆ ಒಣ ದ್ರಾಕ್ಷಿಯನ್ನು ಈ ರೀತಿ ಬಳಸಿ..!!

0
6351

ಹೌದು ನಿಮಗೆ ಸುಲಭವಾಗಿ ಸಿಗುವಂತ ಈ ಒಣ ದ್ರಾಕ್ಷಿಯು ನಿಮ್ಮ ಉತ್ತಮ ಆರೋಗ್ಯವನ್ನು ರೂಪಿಸುಕೊಳ್ಳುವಲ್ಲಿ ಸಹಕಾರಿಯಾಗಿದೆ, ಪ್ರತಿದಿನ ಸ್ವಲ್ಪ ಮಟ್ಟಿಗೆ ನಿಮ್ಮಲ್ಲಿ ಒಣ ದ್ರಾಕ್ಷಿಯ ಸೇವನೆ ಮಾಡುವ ಅಭ್ಯಾಸ ಮಾಡಿಕೊಂಡರೆ ಒಳ್ಳೆಯದು, ನಿಮ್ಮ ಆರೋಗ್ಯಕ್ಕೆ ಒಣ ದ್ರಾಕ್ಷಿ ತುಂಬಾನೇ ಮಹತ್ವದಾಗಿದೆ.

ನೀವು ಒಣ ದ್ರಾಕ್ಷಿ ಸೇವನೆ ಮಾಡೋದ್ರಿಂದ ನಿಮ್ಮ ದೇಹಕ್ಕೆ ರೋಗ ನಿರೋಧಕ ಶಕ್ತಿ ಹೆಚ್ಚುವಂತೆ ಮಾಡುತ್ತದೆ ಹಾಗು ಒಣ ದ್ರಾಕ್ಷಿ ಸೇವನೆಯಿಂದ ರಕ್ತ ನಾಳಗಳು ಪ್ರಚೋದಿಸಲ್ಪಟ್ಟು ಚಟುವಟಿಕೆ ಭರಿತರಾಗಿರುತ್ತೀರಿ, ಒಣದ್ರಾಕ್ಷಿಯಲ್ಲಿ ವಿಟಮಿನ್ನುಗಳು ಹೆಚ್ಚಾಗಿವೆ, ರಕ್ತಹೀನತೆಯನ್ನು ತಡೆಯುತ್ತದೆ, ಒಣದ್ರಾಕ್ಷಿಯಲ್ಲಿ ಜೀರ್ಣಕ್ರಿಯೆಯನ್ನು ಹೆಚ್ಚಿಸುವ ಶಕ್ತಿಯಿದೆ.

ಇವುಗಳನ್ನು ನಿರಂತರವಾಗಿ ದಿನಕ್ಕೆ ಆರು ಇಲ್ಲ ಐದು ತೆಗೆದುಕೊಂಡರೆ ಸಣ್ಣಕರುಳಿನಲ್ಲಿರುವ ವ್ಯರ್ಥ ಪದಾರ್ಥಗಳನ್ನು ಸುಲಭವಾಗಿ ಹೊರಹೊಗುತ್ತವೆ. ಒಣದ್ರಾಕ್ಷಿಯಲ್ಲಿ ಪ್ರೊಟೀನ್, ವಿಟಮಿನ್ನುಗಳು ಹೆಚ್ಚಿರುವುದರಿಂದ ತುಂಬಾ ಸಣ್ಣ ಇರುವವರು ತೆಗೆದುಕೊಳ್ಳಬಹುದು.

ಇವುಗಳಲ್ಲಿನ ಕೊಲೆಸ್ಟರಾಲ್, ವಿಟಮಿನ್ನುಗಳು ಮುಂತಾದವು ಪೋಷಕಾಂಶಗಳನ್ನು ಒದಗಿಸಿ ರೋಗ ನಿರೋಧಕ ಶಕ್ತಿ ನೀಡುತ್ತವೆ ಹಾಗು ಕ್ರೀಡಾಪಟುಗಳು ತಮ್ಮ ಬಲ ವೃದ್ಧಿಸಿಕೊಳ್ಳಲು ಒಣದ್ರಾಕ್ಷಿ ತಿನ್ನುವುದು ಉತ್ತಮ, ಒಣದ್ರಾಕ್ಷಿಯಲ್ಲಿನ ಯಾಂಟೀಯಾಕ್ಸಿಡೆಂಟ್ ಗಳು ಕ್ಯಾನ್ಸರ್ ಕಣಗಳನ್ನು ದೂರ ಮಾಡುತ್ತವೆ, ಹೈಬಿಪಿಯನ್ನು ನಿವಾರಿಸುತ್ತದೆ.

ಒಣದ್ರಾಕ್ಷಿಯಲ್ಲಿನ ವಿಟಮಿನ್ ಬಿ ಕಾಂಪ್ಲೆಕ್ಸ್, ಕಬ್ಬಿಣ ಇರುವುದರಿಂದ ರಕ್ತಕಣಗಳ ಉತ್ಪಾದನೆಗೆ ತುಂಬಾ ಸಹಾಯಕವಾಗಿವೆ. ಮತ್ತು ಇವುಗಳಲ್ಲಿನ ಪೊಟಾಸಿಯಂ ರಕ್ತನಾಳಗಳಲ್ಲಿನ ಒತ್ತಡವನ್ನು ಕಡಿಮೆ ಮಾಡಿ ಆರೋಗ್ಯವಾಗಿರಿಸುತ್ತದೆ.

ಒಣದ್ರಾಕ್ಷಿಯಲ್ಲಿ ಕ್ಯಾಲ್ಸಿಯಂ, ಕಬ್ಬಿಣದಂಸ, ಮ್ಯಾಗ್ನಿಸೆ, ಸತು, ಫ್ಲೋರೈಡ್, ತಾಮ್ರದಂಶ, ಸತು ಈ ಎಲ್ಲಾಅಂಶಗಳಿದ್ದು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ. ಇದು ಹೃದಯ, ನರ ಸಂಬಂಧಿ ರೋಗಗಳ ವಿರುದ್ಧ ಹೋರಾಡುತ್ತದೆ, ಅಲ್ಜೈಮರ್ಸ್ ವಿರುದ್ಧ ಹೋರಾಡುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here