ನೀರನ್ನು ಕುದಿಸಿ ಕುಡಿಯುವ ಅಭ್ಯಾಸ ಇದ್ದವರು ಮೊದಲು ಇಲ್ಲಿ ಓದಿ.

0
35553

ನೀರು ಬಣ್ಣ ಗುಣ ಆಕಾರ ಗಾತ್ರ ಇಲ್ಲದ ದ್ರವ ವಸ್ತುವಾಗಿದೆ ನೀರು ಸಕಲ ಜೀವಿಗಳಿಗೂ ಅವಶ್ಯಕ ನೀರು ಇಲ್ಲದಿದ್ದರೆ ನಾವು ಬದುಕಲು ಸಾಧ್ಯವೇ ಇಲ್ಲ ಹಾಗೂ ನೀರಿನಿಂದಲೇ ಸೃಷ್ಟಿ ಸುಗಮವಾಗಿ ಸಾಗುತ್ತಿರುವುದು ಒಬ್ಬ ಮನುಷ್ಯ ಆಹಾರವಿಲ್ಲದೆ ಸಾಮಾನ್ಯವಾಗಿ ಹತ್ತರಿಂದ ಹನ್ನೆರಡು ದಿನ ಬದುಕಬಹುದು ಆದರೆ ನೀರು ಇಲ್ಲದಿದ್ದರೆ ಎರಡು ಮೂರು ದಿನಕ್ಕೆ ಸಾವನ್ನಪ್ಪಬಹುದು ಹಾಗಾಗಿ ನೀರು ಮನುಷ್ಯನಿಗೆ ಪ್ರಕೃತಿಗೆ ಸಕಲ ಜೀವಿಗಳಿಗೂ ಅತ್ಯವಶ್ಯಕ ಆದರೆ ನೀರನ್ನು ಯಾವ ರೀತಿ ಬಳಸಬೇಕು ಎಂದು ತಿಳಿದುಕೊಂಡರೆ ನೀರಿನಿಂದ ಆಗುವ ಉಪಯೋಗಗಳು ಹೆಚ್ಚಾಗುತ್ತವೆ..

ದೋಷ ಮತ್ತು ನೀರು : ನೀರನ್ನು ಸ್ವಲ್ಪ ಅಂದರೆ ಕಾಲು ಭಾಗ ಆವಿಯಾಗುವ ವರೆಗೆ ಕುದಿಸಿ ಉಳಿದ ಮುಕ್ಕಾಲು ಭಾಗದ ನೀರಿಗೆ ಪಾದಹಿನ ನೀರು ಎಂದು ಕರೆಯುತ್ತಾರೆ ಇದು ಪಿತ್ತ ಸಮಸ್ಯೆಯ ರೋಗಗಳಿಗೆ ನೆರವಾಗುತ್ತದೆ ಮತ್ತು ಕುದಿಸಿ ಅರ್ಧದಷ್ಟು ಉಳಿಸಿದ ನೀರು ವಾತ ರೋಗಗಳನ್ನು ಹೊಡೆದೋಡಿಸುತ್ತದೆ ಮತ್ತು ನೀರಿನ ಮೂರು ಭಾಗದಷ್ಟು ಆವಿಯಾಗುವ ವರೆಗೂ ಕುದಿಸಿ ಉಳಿದ ಕಾಲು ಭಾಗದ ನೀರಿಗೆ ಪಾದ ವಶೇಷ ಎಂದು ಕರೆಯುತ್ತಾರೆ ಈ ನೀರನ್ನು ಕುಡಿಯುವುದರಿಂದ ಕಫ ಶಮನವಾಗುತ್ತದೆ.

ಆರೋಗ್ಯ ಅಂಬು : ನೀರಿನ ಮುಕ್ಕಾಲು ಭಾಗದಷ್ಟು ಆವಿಯಾಗುವವರೆಗೆ ಕುದಿಸಿ ಉಳಿದ ಕಾಲು ಭಾಗದ ನೀರಿಗೆ ಪಾದ ವಷೇಶ ನೀರು ಅಥವಾ ಅಂಬು ಎನ್ನುವರು ಈ ನೀರನ್ನು ಪತ್ಯ ದಂತೆ ಉಪಯೋಗಿಸಬಹುದು ಇದು ಉಬ್ಬಸ ಕೆಮ್ಮು ಬಹುದಿನದ ನೆಗಡಿ  ನೋವು ಮೂಲವ್ಯಾಧಿ ರೋಗಗಳಲ್ಲಿ ಉತ್ತಮವಾಗಿದೆ ಹಸಿವನ್ನು ಹೆಚ್ಚಿಸುವುದಲ್ಲದೆ ರಾತ್ರಿ ಹೊತ್ತು ಈ ನೀರನ್ನು ಕುಡಿಯುವುದರಿಂದ ಅಜೀರ್ಣ ಹತೋಟಿಗೆ ಬರುವುದು.

ಉಷ್ಣೋದಕ ದ ಉಪಯೋಗ : ಕುದಿಸಿದ ನೀರು ಕಂಠ ರೋಗಗಳಲ್ಲಿ ಹಿತವಾಗಿದೆ ಹಸಿವನ್ನು ಹೆಚ್ಚಿಸಿ ಜೀರ್ಣಶಕ್ತಿಯನ್ನು ಉತ್ತಮಗೊಳಿಸುವುದು ಕಫಾ ವಾತ ಆಮವಾತ ಆಮ ದೋಷ ಕೆಮ್ಮು ಮೂತ್ರ ವಿಕಾರಗಳನ್ನು ಬಹುದಿನದ ಅಲರ್ಜಿ ನೆಗಡಿ ಹುಳಿತೇಗು ಬಿಕ್ಕಳಿಕೆ ಬಾಯಾರಿಕೆ ಉಬ್ಬಸ ಹೊಟ್ಟೆ ನೋವು ಮತ್ತು ಜ್ವರಕ್ಕೆ ಪಥ್ಯ.

ಋತುಗಳು ಮತ್ತು ಬಿಸಿನೀರು : ಜೀರ್ಣಕ್ರಿಯೆಗೆ ಅನುಸಾರವಾಗಿ ಋತುಗಳಿಗೆ ಅನುಗುಣವಾಗಿ ಯೇ ಬಿಸಿನೀರನ್ನು ಕುಡಿಯಲು ಶಾಸ್ತ್ರದಲ್ಲಿ ಹೇಳಿದೆ ಗ್ರೀಷ್ಮಾ ಮತ್ತು ಸರತ್ ಋತುಗಳಲ್ಲಿ ಪಾದ ವಶೇಷ ನೀರನ್ನು ಮತ್ತು ಉಳಿದ ಹೇಮಂತ ಶಿಶಿರ ವಸಂತ ಮತ್ತು ವರ್ಷ ಋತುಗಳಲ್ಲಿ ಅರ್ಧ ಶೇಷ ನೀರನ್ನು ಉಪಯೋಗಿಸಬೇಕು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here