ಎಚ್ಚರ ಪ್ರತಿದಿನ ಸಕ್ಕರೆ ಬಳಸುವುದು ಧೂಮಪಾನಕಿಂತಲೂ ಅಪಾಯವಂತೆ..!!

0
6273

ಸಿಹಿ ಇಲ್ಲದೆ ಜೀವನವಿಲ್ಲ ಎನ್ನುವ ರೀತಿ ಜನರು ಪ್ರತಿ ದಿನವೂ ತಮ್ಮ ಆಹಾರದಲ್ಲಿ ಎಲ್ಲದರಲ್ಲೂ ಸಕ್ಕರೆ ಉಪಯೋಗಿಸುತ್ತಾರೆ ಅದರಲ್ಲಂತೂ ಬೇಕರಿ ಸಿಹಿ ತಿನಿಸುಗಳು ಸಕ್ಕರೆಯಿಂದ ತಯಾರಾಗುತ್ತವೆ ಇಂತಹ ಪದಾರ್ಥಗಳನ್ನು ನೋಡಿದರೆ ತಿನ್ನದೆ ಇರಲು ಸಾಧ್ಯವಿಲ್ಲ ಅಲ್ಲವೇ ಅದರಲ್ಲಿ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಬ್ಬಗಳಿಗೆ ಏನು ಕಡಿಮೆ ಇಲ್ಲ ಮದುವೆಗಳಲ್ಲಿ ಸಕ್ಕರೆಯಿಂದ ತಯಾರಿಸಿದ ಆಹಾರವನ್ನು ಸವಿಯುವುದು ಸಾಮಾನ್ಯ.

ಗಮನದಲ್ಲಿ ಇಟ್ಟುಕೊಳ್ಳಿ ಸಕ್ಕರೆಯನ್ನು ಅಂದರೆ ಸಿಹಿಯನ್ನು ಸತತವಾಗಿ ಸೇವಿಸುವುದರಿಂದ ಇಲ್ಲದ ಸಲ್ಲದ ಕಾಯಿಲೆಗಳು ಹುಟ್ಟಿಕೊಳ್ಳುತ್ತವೆ ನೀವು ಪ್ರತಿನಿತ್ಯ ಹೆಚ್ಚು ಸಕ್ಕರೆ ಅಂಶವಿರುವ ಆಹಾರಗಳನ್ನು ಸೇವಿಸಿ ಯಾವುದೇ ವ್ಯಾಯಾಮ ಮಾಡದೆ ಇದ್ದರೆ ಆರೋಗ್ಯದಲ್ಲಿ ಸಮಸ್ಯೆ ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಿ ಏಕೆಂದರೆ ದೇಹದಲ್ಲಿ ಸಕ್ಕರೆ ಮಟ್ಟವು ಹೆಚ್ಚುವುದರಿಂದ ನಿಮ್ಮ ಶಕ್ತಿ ಸಾಮರ್ಥ್ಯ ಕುಂಠಿತವಾಗುತ್ತದೆ ಇದರಿಂದ ದೇಹ ದಣಿವಿನ ಸಮಸ್ಯೆಯನ್ನು ಎದುರಿಸುತ್ತದೆ.

ಸಕ್ಕರೆ ಸೇವನೆಯಿಂದ ಬರುವ ಸಮಸ್ಯೆಗಳು : ಸಕ್ಕರೆ ಅಂಶವಿರುವ ಆಹಾರಗಳನ್ನು ಹೆಚ್ಚು ಸೇವಿಸುವುದರಿಂದ ದೇಹದ ಅಂದರೆ ನಾಲಿಗೆಯಲ್ಲಿರುವ ಟೆಸ್ಟ್ ಬಡ್ಸ್ ಗಳು ಸರಿಯಾಗಿ ಕೆಲಸ ಮಾಡುವುದಿಲ್ಲ ಕಾಲಕ್ರಮೇಣ ಇದು ಇಂದ್ರಿಯಗಳ ಮೇಲೆ ಪರಿಣಾಮ ಬೀರುತ್ತದೆ ಅಲ್ಲದೆ ಮಧುಮೇಹ ರೋಗಕ್ಕೆ ತುತ್ತಾಗಬಹುದು ಅಲ್ಲದೆ ನಮ್ಮ ದೇಹದ ತೂಕವನ್ನು ಹೆಚ್ಚಿಸುತ್ತದೆ, ಇದರಲ್ಲಿ ಕ್ಯಾಲೋರಿ ಅಂಶ ಹೆಚ್ಚಾಗಿರುವುದರಿಂದ ಸ್ಥೂಲಕಾಯತೆ ಸಮಸ್ಯೆಯನ್ನು ತರುತ್ತದೆ, ದೇಹದಲ್ಲಿರುವ ಇನ್ಸುಲಿನ್ ಹಾರ್ಮೋನನ್ನು ಸಕ್ಕರೆ ಉತ್ತೇಜಿಸುವುದರಿಂದ ದೇಹ ತೂಕ ಬಹುಬೇಗನೆ ಹೆಚ್ಚಾಗುತ್ತದೆ ಅಲ್ಲದೆ ಅನೇಕ ರೋಗಗಳಿಗೆಕಾರಣವಾಗುತ್ತದೆ.

ದೇಹದಲ್ಲಿ ಅಂದರ ರಕ್ತದಲ್ಲಿ ಸಕ್ಕರೆ ಅಂಶವು ಹೆಚ್ಚಾಗುವುದರಿಂದ ದೇಹದ ಇಮ್ಮುನಿಟಿ ಮೇಲೆ ಪ್ರಭಾವ ಬೀರುತ್ತದೆ ಇದು ರೋಗ ನಿರೋಧಕ ಶಕ್ತಿಯನ್ನು ಕಡಿಮೆ ಮಾಡಿ ದೇಹ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತದೆ ಇದರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುವುದಿಲ್ಲ ದೇಹ ಶಕ್ತಿಯನ್ನು ಕಳೆದುಕೊಳ್ಳುತ್ತದೆ ಹಾಗಾಗಿ ಆಹಾರದಲ್ಲಿ ಕಡಿಮೆ ಬೆಳೆಸುವುದು ಉತ್ತಮ ಮತ್ತು ಪ್ರತಿದಿನ 30 ನಿಮಿಷ ವ್ಯಾಯಾಮ ಮಾಡುವುದು ಆರೋಗ್ಯಕ್ಕೆ ಪ್ರಫುಲ್ಲವಾದದ್ದು.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here