ಅಂಜೂರ ಹಣ್ಣು ಶ್ವಾಶಕೋಶದಲ್ಲಿ ಕಫವನ್ನು ಕರಿಗಿಸಬಲ್ಲದು, ರಕ್ತಪಿತ್ತನಾಶಕ, ಮೂಲ ವ್ಯಾಧಿ, ಮೂತ್ರಕೋಶದಲ್ಲಿ ಕಲ್ಲು ಮುಂತಾದ ವ್ಯಾಧಿಗಳಿಗೆ ಇದು ಪರಿಣಾಮಕಾರಿ ಯಾಕೆಂದರೆ ಇಡಿ ತುಂಬಾ ತಂಪು.
ಈ ಹಣ್ಣನ್ನು ತಿನ್ನಿಸಿದರೆ ಮಕ್ಕಳು ಗಾಜಿನ ತುಂಡು, ಪಿನ್ನು ಮುಂತಾದವುಗಳನ್ನು ನುಂಗಿದ್ದರೆ ಅದು ಮಲದಲ್ಲಿ ಹೊರಹೋಗುವುದು.
ಮಲಬದ್ಧತೆ ದೂರವಾಗಳು ದಿನನಿತ್ಯವೂ ಖಾಲಿಹೊಟ್ಟೆಯಲ್ಲಿ 2-3 ಹಣ್ಣುಗಳನ್ನು ಸೇವಿಸಬೇಕು.
ಒಣದ್ರಾಕ್ಷಿಗಳೊಂದಿಗೆ 5-6 ಹಣ್ಣುಗಳನ್ನು ಒಂದು ಪಾವು ಹಾಲಿನಲ್ಲಿ ಹಾಕಿ ಬೇಯಿಸಿ ಆ ಹಾಲನ್ನು ಕುಡಿಯುವುದರಿಂದ ರಕ್ತಶುದ್ಧಿಯಾಗಿ ರಕ್ತವೃದ್ಧಿಯಾಗುತ್ತದೆ.
ಉಷ್ಣ ಪೀಡತೆಯಿಂದ ಮುಕ್ತಿ ಹೊಂದಲು ಅಂಜೂರದ ರಸವನ್ನು ಸೇವಿಸುವುದು ಉತ್ತಮ.
ಶ್ವಾಶಕೋಶದ ತೊಂದರೆಯಿರುವವರು ೫ ಅಂಜೂರವನ್ನು ಅರ್ಧ ಲೀಟರ್ ನೀರಿನಲ್ಲಿ ಹಾಕಿ ಕಾಯಿಸಿ ನಂತರ ಆರಿಸಿ ಇಟ್ಟಿಕೊಂಡು ಬೆಳಗ್ಗೆ- ಸಂಜೆ ಸೇವಿಸುವುದರಿಂದ ತೊಂದರೆಗಳು ದೂರವಾಗುತ್ತವೆ.
ಜೊತೆಯಲ್ಲಿ ಇದನ್ನು ಓದಿ ಒಂದು ನಾಯಿಯನ್ನು ಸಾಕುವುದರಿಂದ ಹೃದಯರಕ್ತನಾಳದ ಅಪಾಯದಿಂದ ದೂರವಾಗಬಹುದು..!!
ನೀವು ಮನೆಯಲ್ಲಿ ಸಾಕುವ ಮುದ್ದಾದ ಸಾಕು ಪ್ರಾಣಿಗಳಿಂದ ನಿಮಗೆ ಹಾಗುವ ಉಪಯೋಗ ನಿಮಗೆ ತಿಳಿದಿರುವುದಿಲ್ಲ, ಈ ಬಗ್ಗೆ ಹೆಚ್ಚಿನ ಸಂಶೋಧನೆಗಳು ನಡೆಯುತ್ತಲೇ ಇದೆ ಮತ್ತು ಫಲಿತಾಂಶಗಳು ಧನಾತ್ಮಕವಾಗಿಯೇ ವರದಿಯಾಗಿದೆ, ಅದರ ಪ್ರಕಾರ ಸಾಕುಪ್ರಾಣಿಗಳು ತಮ್ಮ ಮಾಲೀಕರ ದೈಹಿಕ ಮತ್ತು ಮಾನಸಿಕ ಯೋಗಕ್ಷೇಮವನ್ನು ಕಾಪಾಡುವ ಸಾಧನವಾಗಿದೆ.
ಮಾನಸಿಕ ಒತ್ತಡ: ಮನಃಶಾಸ್ತ್ರಜ್ಞರಾದ ಆರನ್ ಕ್ಯಾಚರ್ ಮತ್ತು ತಂಡವು ಒಂದು ಅಧ್ಯನವನ್ನು ನಡೆಸಿದೆ, ಅಚ್ಚರಿ ಅಂದರೆ ಸಾಕು ಪ್ರಾಣಿಗಳಿಂದ ಸ್ನಾಯುವಿನ ಸೆಳೆತ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ ಹಾಗು ಇದರ ಪರಿಣಾಮ ಮಾನಸಿಕ ಒತ್ತಡವು ಕಡಿಮೆ ಯಾಗುತ್ತದೆಯಂತೆ.
ಹೃದಯರಕ್ತನಾಳದ ಅಪಾಯ: ಒಂದು ಅಧ್ಯಯನದ ಪ್ರಕಾರ ಮಾನಸಿಕ ಒತ್ತಡವು ಹೃದಯ ಸಂಬಂಧ ಪಟ್ಟ ಸಮಸ್ಯೆಗಳಿಗೆ ಮುಖ್ಯ ಕಾರಣವಾಗಿದೆ, ಸಾಕುಪ್ರಾಣಿಗಳು ಮನೆಯಲ್ಲಿ ಇರುವದರಿಂದ ಈ ರೀತಿಯ ಸಮಸ್ಯೆಗಳನ್ನು ಕಡಿಮೆ ಮಾಡಲು ಸಹಾಯವಾಗುವುದು ಎಂದು ಹೇಳಲಾಗಿದೆ. ಸಾಕುಪ್ರಾಣಿಗಳ ಭಾವನಾತ್ಮಕ ಬೆಂಬಲದಿಂದ ಹೆಚ್ಚು ಕಾಲ ಬದುಕುಳಿಯಲು ಸಹಾಯವಾಗುತ್ತದೆಯಂತೆ.
ಒಂಟಿತನ ದೂರವಾಗುತ್ತದೆ : ಈಗಿನ ಸಾಮಾಜದಲ್ಲಿ ಬೇರೆ ಊರುಗಳಿಂದ ಬಂದು ಇಲ್ಲಿ ನೆಲಸಿರುತ್ತಾರೆ ಮತ್ತು ಭಾಂದವರನ್ನ ನೆನೆದು ವಾಸಿಸುತ್ತಿರುತಾರೆ ಮತ್ತು ಅವರಿಗೆ ಒಂಟಿತನ ಹೆಚ್ಚು ಕಾಡುತ್ತಿರುತ್ತದೆ ಅಂತವರು ಮನೆಯಲ್ಲಿ ಒಂದು ನಾಯಿಯನ್ನು ಸಾಕುವುದರಿಂದ ಒಂಟಿಯಾಗಿ ಬದುಕುತ್ತಿರುವ ವ್ಯಕ್ತಿಗಳಲ್ಲಿ ಖಿನ್ನತೆಯು ಕಡಿಮೆಯಾಗುತ್ತದೆ, ಹಾಗು ಅವರು ಜೀವನದಲ್ಲಿ ಹೆಚ್ಚು ಸಂತೃಪ್ತಿಯಿಂದ ಇರುವುದಾಗಿ ಹೇಳಲಾಗಿದೆ.
ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.