ಗಣಪತಿಯ ಇದೊಂದು ಮಂತ್ರ ದಿನಕ್ಕೊಮ್ಮೆ ಓದಿದರೆ ಸಾಕು ನಿಮ್ಮ ಸರ್ವ ವಿಘ್ನವನ್ನು ದೂರಮಾಡುವ ವಿಘ್ನವಿನಾಶಕ..!!

0
45021

ಭಾರತದಲ್ಲಿ ವೈಭವದಿಂದ ಆಚರಿಸಲ್ಪಡುವ ಒಂದು ಹಬ್ಬ. ಪ್ರತಿ ವರ್ಷದ ಭಾದ್ರಪದ ಮಾಸದ ಶುಕ್ಲಪಕ್ಷದ ಚೌತಿಯ (ಚತುರ್ಥಿಯ) ದಿನ ಈ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬದಲ್ಲಿ ಗಣಪತಿಯನ್ನು ಪೂಜಿಸಲಾಗುತ್ತದೆ. ಬೆಳ್ಳಿ ಅಥವಾ ಮಣ್ಣಿನಿಂದ ಮಾಡಿದ ಗಣಪತಿಯ ಮೂರ್ತಿಯನ್ನು ವಿಧ್ಯುಕ್ತವಾಗಿ ಪೂಜಿಸಿ, ವ್ರತವೆಂದು ಆಚರಿಸಲಾಗುತ್ತದೆ. ಹಬ್ಬದ ದಿನ ಮೋದಕ, ಕಡುಬು ಎಂಬ ಸಿಹಿ ತಿಂಡಿಯನ್ನು ಮಾಡಿ ಗಣೇಶನಿಗೆ ನೈವೇದ್ಯ ಮಾಡಲಾಗುತ್ತದೆ.

ಹಿಂದೂ ದೇವರುಗಳಲ್ಲಿ ಅತಿ ಶಕ್ತಶಾಲಿ ಎಂದೆನಿಸಿರುವ ಗಣೇಶನು ವಿಘ್ನ ವಿನಾಶಕ ಎಂಬ ಬಿರುದಿನಿಂದಲೇ ಪ್ರಸಿದ್ಧತೆಯನ್ನು ಗಳಿಸಿದವರಾಗಿದ್ದಾರೆ. ಮಗುವಿನ ಮನಸ್ಸನ್ನು ಹೊಂದಿರುವ ಗಣೇಶನಲ್ಲಿ ನಾವು ಯಾವುದೇ ಕಷ್ಟಗಳನ್ನು ತೋಡಿಕೊಂಡರೂ ಅದಕ್ಕೆ ಪರಿಹಾರ ಕೂಡಲೇ ದೊರೆಯುತ್ತದೆ ಅಂತೆಯೇ ನಮ್ಮ ದುಃಖಕ್ಕೆ ಮೂಲವಾಗಿರುವ ಕಾರಣವನ್ನು ಸಮಸ್ಯೆಯನ್ನು ಆತ ದೂರಮಾಡುವ ಗಣಪನ ಈ ಸ್ತೋತ್ರವನ್ನ ಮರೆಯದೆ ಜಪಿಸಿ.

ಒಂ ಪ್ರಣಮ್ಯಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್
ಭಕ್ತಾವಾಸಂ ಸ್ಮರೇನ್ನಿತ್ಯಮಾಯುಃ ಕಾಮಾರ್ಥದ್ದಯೇ

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಮ್
ತೃತೀಯಂ ಕೃಷ್ಣಪಿಂಗಾಕ್ಷಂ ಗಜವಕ್ತ್ರಂಚತುರ್ಥಕಮ್

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೀವ ಚ
ಸಪ್ತಮಂ ವಿಘ್ನರಾಜಂ ಚ ಧೊಮ್ರುವರ್ಣಂ ತಥಾಽಷ್ಟಮಮ್

ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಮ್
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ
ನ ಚ ವಿಘ್ನ ಭಯಂ ತಸ್ಯ ಸರ್ವಸಿದ್ದಿಕರಂ ಪ್ರಭೋ

ವಿದ್ಯಾರ್ಥಿ ಲಭತೇ ವಿದ್ಯಾಂ ಧನಾರ್ಥಿ ಲಭತೇ ಧನಮ್
ಪುತ್ರಾರ್ಥಿ ಲಭತೇ ಪುತ್ರಾನ್ ಮೋಕ್ಷಾರ್ಥಿ ಲಭತೇ ಗತಿಮ್

ಜಪೇದ್ಗಣಪತಿಸ್ತೋತ್ರಂ ಷಡ್ಬಿರ್ಮಾಸೈಃ ಫಲಂ ಲಭೇತ್
ಸಂವತ್ಸರೇಣ ಸಿದ್ದಿಂ ಚ ಲಭತೇ ನಾತ್ರ ಸಂಶಯಃ

ಅಷ್ಟಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾಯಃ ಸಮರ್ಪಯೇತ್
ತಸ್ಯ ವಿದ್ಯಾಭವೇತ್ ಸರ್ವಾ ಗಣೇಶಸ್ಯ ಪ್ರಸಾದತಃ.

ಅಪೂರ್ಣ ಕಾರ್ಯವನ್ನು ಪೂರ್ತಿ ಮಾಡಲು ಲವಂಗ ಬಳಸಿ ಹೀಗೆ ಮಾಡಿ.

ಅಡುಗೆ ಮನೆಯಲ್ಲಿರುವ ಒಂದು ಮಸಾಲೆ ಪದಾರ್ಥ ಲವಂಗ, ಈ ಲವಂಗ ಆಹಾರದ ರುಚಿಯನ್ನು ಹೆಚ್ಚಿಸುವಲ್ಲದೆ ಆರೋಗ್ಯವನ್ನು ನೀಡುತ್ತದೆ ಅನ್ನುವುದು ನಮಗೆಲ್ಲ ತಿಳಿದಿರುವ ವಿಷ್ಯ ಆದರೆ ನಿಮಗೆ ತಿಳಿಯದ ಇನ್ನೊಂದು ವಿಷಯವೆಂದರೆ ನಿಗೂಢ ಕಾರ್ಯ ಸಿದ್ಧಿಗೂ ಹಾಗು ಮಾಟ ಮಂತ್ರದಂತಹ ಕಾರ್ಯಗಳಿಗೂ ಲವಂಗ ಅತಿ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ ಎನ್ನಲಾಗಿದೆ.

ಎಷ್ಟೋ ಕೆಲಸಗಳು ನಮ್ಮಿಂದ ಅದೆಷ್ಟೇ ಕಷ್ಟ ಪಟ್ಟರು ಪೂರ್ಣ ಮಾಡಲು ಸಾಧ್ಯವೇ ಆಗಿರುವುದಿಲ್ಲ, ಬಹಳಷ್ಟು ಸಮಯ ಹಾಗು ಹಣವನ್ನು ಅದಕ್ಕಾಗಿ ಕಳೆದಿರುತ್ತೇವೆ, ಆದರೂ ಏನಾದರೂ ಸಮಸ್ಯೆ ಎದುರಾಗಿ ಆ ಕಾರ್ಯ ಅರ್ಧಕ್ಕೆ ನಿಂತು ಬಿಡುತ್ತದೆ, ಈ ತರಹದ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಒಂದು ಲವಂಗ ಬಳಸಿ ನಾವು ಹೇಳಿದ ಹಾಗೆ ಮಾಡಿ ಪರಿಹಾರ ಕಂಡುಕೊಳ್ಳಿ.

ಬೆಳಗ್ಗೆ ದೇವರ ಪೂಜೆ ಮಾಡುವ ವೇಳೆ ದೀಪಕ್ಕೆ ಎರಡು ಲವಂಗ ಹಾಕಿ, ಇದು ಅರ್ಧಕ್ಕೆ ನಿಂತ ಕೆಲಸಗಳನ್ನ ಪೂರ್ಣಗೊಳಿಸಲು ಹಾಗು ನಿಮ್ಮ ನೋವು, ಸಂಕಷ್ಟಗಳನ್ನ ಕಡಿಮೆ ಮಾಡುತ್ತದೆ.

ಧನ ಪ್ರಾಪ್ತಿಗೆ ಲವಂಗ ಹೇಳಿ ಮಾಡಿಸಿದ ಉಪಾಯವೆಂದು ನಂಬಲಾಗಿದೆ, ಎರಡು ಲವಂಗವನ್ನು ಸಾಸಿವೆ ಎಣ್ಣೆಯಲ್ಲಿ ಹಾಕಿ ಹನುಮಂತನ ಪೂಜೆ ಮಾಡಿ, ಇದು ಆರ್ಥಿಕ ವೃದ್ಧಿ ಜೊತೆಗೆ ನಿಮ್ಮ ಎಲ್ಲ ಭಯವನ್ನು ದೂರ ಮಾಡುತ್ತದೆ.

ಪ್ರತಿ ಕೆಲಸದಲ್ಲಿಯೂ ಯಶಸ್ಸು ಬಯಸುವರು ಈ ವಿಧಾನ ಅನುಸರಿಸ ಬಹುದು, ಮೊದಲು ಒಂದು ನಿಂಬೆ ಹಣ್ಣು ಹಾಗು ನಾಲ್ಕು ಆವಂಗವನ್ನು ತೆಗೆದುಕೊಳ್ಳಿ, ಹನುಮಂತನ ಮೂರ್ತಿ ಮುಂದೆ ಕುಳಿತು ನಿಂಬೆ ಹಣ್ಣಿನ ಮೇಲೆ ಲವಂಗವನ್ನ ಚುಚ್ಚಿಡಿ.

ಮುಖ್ಯವಾಗಿ ಈ ಎಲ್ಲಾ ಕೆಲಸವನ್ನ ಮಾಡುವಾಗ ಲವಂಗವನ್ನ ಶುದ್ಧ ಮಾಡುವುದನ್ನು ಮರೆಯದಿರಿ, ಹಾಗು ಲವಂಗ ಶುದ್ಧ ಮಾಡಲು ಬೆಳಗ್ಗೆ ಉತ್ತಮ ಸಮಯ, ಹತ್ತಿ, ಲವಂಗ, ಸಿಂಧೂರ, ತುಪ್ಪ, ನೀರು ಬೇಕಾಗುತ್ತದೆ, ಪದ್ಧತಿ ಪ್ರಕಾರ ಲವಂಗವನ್ನು ಶುದ್ಧ ಮಾಡಬೇಕು.

LEAVE A REPLY

Please enter your comment!
Please enter your name here