ಸೋಮವಾರ, ಗುರುವಾರ, ಮತ್ತು ಶನಿವಾರಗಳು ಮಾಂಸ ಆಹಾರ ತಿಂದರೆ ಏನಾಗುತ್ತೆ ಗೊತ್ತಾ..?

1
5515

ಹಿಂದೂಗಳು ಕೋಳಿ, ಕುರಿ ಅಥವಾ ಮೀನಿನಂಥ ಮಾಂಸಹಾರಿ ಆಹಾರವನ್ನು ನಿರ್ದಿಷ್ಟ ದಿನಗಳಲ್ಲಿ ತಿನ್ನುವುದಿಲ್ಲ,ಅಂದರೆ ಪ್ರತಿ ಸೋಮವಾರ, ಗುರುವಾರ, ಮತ್ತು ಶನಿವಾರಗಳು, ಯಕದಾಶಿ, ಸಂಕ್ರಾಂತಿ, ದಸರಾ, ಸಂಕಷ್ಟ ಚತುರ್ಥಿ ಮುಂತಾದ ಹಲವು ಮಂಗಳಕರ ದಿನಗಳು, ಅಂಕಾರ್ಕಿ ಚತುರ್ಥಿ, ಏಕಾದಶಿ, ಗುಡಿಪದ್ವಾ, ಅಕ್ಷಯ ತೃತೀಯ, ದೀಪಾವಳಿ (ಇನ್ನು ಮುಂತಾದ ಹಬ್ಬದ ದಿನಗಳು).

ಭಾರತೀಯ ಸಂಸ್ಕೃತಿಯ ಪ್ರಕಾರ ಹಬ್ಬಗಳ ದಿನದಂದು ಮಾಂಸಾಹಾರ ಮಾಡಿದರೆ ಹಬ್ಬದ ಪವಿತ್ರತೆ ಹೊರಟುಹೋಗುತ್ತದೆ, ಸಾಪ್ತಾಹಿಕ ದಿನಗಳ ಹೊರತುಪಡಿಸಿ ಕೆಲವು ನಿರ್ದಿಷ್ಟ ದಿನಗಳಲ್ಲಿ ಮಾಂಸವನ್ನು ತಿನ್ನುವುದಿಲ್ಲ ಎಂಬ ಕಾರಣವು ಸಂಪೂರ್ಣವಾಗಿ ಧಾರ್ಮಿಕವಾಗಿದೆ. ಪ್ರಾಣಿಗಳನ್ನು ಕೊಲ್ಲುವುದು ಹಿಂದೂ ಧರ್ಮದಲ್ಲಿ ಪಾಪ ಎಂದು ಪರಿಗಣಿಸಲಾಗಿದೆ. ಆದ್ದರಿಂದ, ಆ ನಿರ್ದಿಷ್ಟ ದಿನದ ಪವಿತ್ರತೆಯನ್ನು ಕಾಪಾಡಿಕೊಳ್ಳಲು ಆ ಮಂಗಳಕರ ದಿನಗಳಲ್ಲಿ ಜನರು ಮಾಂಸವನ್ನು ಸೇವಿಸುವುದಿಲ್ಲ.

ಸೋಮವಾರ, ಗುರುವಾರ, ಮತ್ತು ಶನಿವಾರಗಳು ಸೇರಿದಂತೆ ವಾರದ ದಿನಗಳಲ್ಲಿ ಮಾಂಸವನ್ನು ತಿನ್ನುವುದಿಲ್ಲ ಕಾರಣವೆನೆಂದರೆ ನಮ್ಮ ದೇಹಕ್ಕೆ ಸ್ವಲ್ಪ ಮಟ್ಟದ ಕಬ್ಬಿಣ, ವಿಟಮಿನ್ ಬಿ 12 ಮತ್ತು ಇತರ ಪ್ರಮುಖ ಪೋಷಕಾಂಶಗಳ ಪೂರೈಸಲು ಸ್ವಲ್ಪ ಪ್ರಮಾಣದ ಮಾಂಸದ ಅವಶ್ಯಕತೆ ಇದೆ. ಆದರೆ ಮಾನವರು ಮೂಲತಃ ಪ್ರಾಣಿಗಳೇ ಆಗಿರುದರಿಂದ ಮಾಂಸವನ್ನು ಸೇವಿಸುವುದಕ್ಕೆ ನಾವು ವ್ಯಸನಿಯಾಗಬಹುದು, ವಿಪರೀತ ಮಾಂಸವನ್ನು ತಿನ್ನುವುದು ನಮ ಆರೋಗ್ಯಕ್ಕೆ ಒಳ್ಳೆಯದಲ್ಲ.

ಇದು ಪೈಲ್ಸ್, ಮೂತ್ರಪಿಂಡದ ಕಲ್ಲುಗಳು, ಕರುಳಿನ ಕ್ಯಾನ್ಸರ್, ರಕ್ತದೊತ್ತಡ, ಹೃದಯಾಘಾತ ಮುಂತಾದ ರೋಗಗಳನ್ನು ಉಂಟುಮಾಡಬಹುದು. ಒಮ್ಮೆ ಮಾಂಸಕ್ಕೆ ವ್ಯಸನಿಯಾದರೆ ನಂತರ ಜನರು ಮಾಂಸವನ್ನು ತಿನ್ನುವುದನ್ನು ತಡೆಯಲು ಸಾಧ್ಯವಿಲ್ಲ. ಆದ್ದರಿಂದ, ನಿರ್ದಿಷ್ಟ ಆಹಾರಕ್ಕೆ ದಿನಗಳನ್ನು ನಿಯೋಜಿಸಿ ಹಿಂದೂ ಧರ್ಮವು ಕೆಲವು ನಿರ್ಬಂಧಗಳನ್ನು ಮಾಡಿದೆ. ಕೆಲವು ದಿನಗಳೆಂದರೆ ಸೋಮವಾರ ಶಿವನಿಗೆ ಸಮರ್ಪಿಸಲಾಗಿದೆ.

ಮಂಗಳವಾರ ಅಂಜನೆಯನಿಗೆ, ಗುರುವಾರ ಗುರು ರಾಘವೇಂದ್ರ ಮತ್ತು ಸಾಯಿಬಾಬಾ, ಶನಿವಾರದಂದು ಅಂಜನೆಯ ಮತ್ತು ವೆಂಕಟೇಶ್ವರ.

ಹೌದು, ಭಾರತದ ಕೆಲವು ಭಾಗಗಳಲ್ಲಿ, ಬುಧವಾರ ಮತ್ತು ಶುಕ್ರವಾರ ಸಹ ಕೆಲವು ದೇವರಿಗೆ ಸಮರ್ಪಿಸಲಾಗಿದೆ ಆದರೆ ಒಂದಲ್ಲ ಒಂದು ದಿನ ಯಾವುದೇ ದೇವರಿಗೆ ಅರ್ಪಿಸದೇ ಮಾಂಸಹಾರವನ್ನು ಖಚಿತವಾಗಿ ಬಿಡಬೇಕು. ಈ ರೀತಿಯಾಗಿ,ಹಿಂದೂ ಧರ್ಮದಲ್ಲಿ ಕೆಲವು ಧಾರ್ಮಿಕ ನಿರ್ಬಂಧಗಳಿವೆ ಮತ್ತು ಹೆಚ್ಚಿನ ಹಿಂದೂಗಳು ಧರ್ಮ ಪಾಲಕರಗಿರುವುದರಿಂದ ಅವರು ಈ ನಿಯಮವನ್ನು ಪಾಲಿಸುತ್ತಾರೆ.

1 COMMENT

LEAVE A REPLY

Please enter your comment!
Please enter your name here