ರಾಜ್ಯ ಸರ್ಕಾರವು ಅನುಷ್ಠಾನಕ್ಕೆ ತಂದಿರುವ ಸ್ವಯಂ ಉದ್ಯೋಗ ಯೋಜನೆ​ ಬಗ್ಗೆ ನಿಮಗೆ ಗೊತ್ತಾ.!!

0
531

​​​​​​​​​​​​​​​​ಸ್ವಯಂ ಉದ್ಯೋಗ ಯೋಜನೆ​ : ಯೋಜನೆಯಡಿ ಪರಿಶಿಷ್ಟ ವರ್ಗದ ವಿವಿಧ ಚಟುವಟಿಕೆಗಳಿಗೆ ಘಟಕ ವೆಚ್ಚ ರೂ.1,00,000/- ಒಳಗಿನ ಉದ್ದೇಶಗಳಿಗೆ ಬ್ಯಾಂಕ್ ಮುಖಾಂತರ ಸಾಲ ಸೌಲಭ್ಯವನ್ನು ಒದಗಿಸಲಾಗುವುದು.
ನಿಗಮದಿಂದ ಘಟಕ ವೆಚ್ಚದ ಶೇ.50 ಭಾಗ ಅಥವಾ ಗರಿಷ್ಟ ರೂ. 35,000/-ಗಳು ಸಹಾಯಧನ ಮಂಜೂರು ಮಾಡಲಾಗುವುದು. ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ.

ಹೈನುಗಾರಿಕೆ ಯೋಜನೆ : ಯೋಜನೆಯಡಿ ಹೈನುಗಾರಿಕೆ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಪರಿಶಿಷ್ಟ ಪಂಗಡದ ಫಲಾಪೇಕ್ಷಿಗಳಿಗೆ ಘಟಕ ವೆಚ್ಚ ರೂ.1.00 ಲಕ್ಷದ ಮಿತಿಯೊಳಗೆ 2 ಹಾಲು ಕರೆಯುವ ಮಿಶ್ರತಳಿ ಹಸು ಅಥವಾ ಸುಧಾರಿತ ಎಮ್ಮೆಗಳನ್ನು ಖರೀದಿಸಲು ಬ್ಯಾಂಕ್‍ಗಳ ಸಹಬಾಗಿತ್ವದೊಂದಿಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು.

ನಿಗಮದಿಂದ ಘಟಕ ವೆಚ್ಚದ ಶೇ.50 ಭಾಗ ಅಥವಾ ಗರಿಷ್ಟ ರೂ. 50,000/-ಗಳು ಸಹಾಯಧನವನ್ನು ಮಂಜೂರು ಮಾಡಲಾಗುವುದು. ಉಳಿದ ಭಾಗ ಬ್ಯಾಂಕ್ ಸಾಲವಾಗಿರುತ್ತದೆ.​

ಯೋಜನೆಗಳ ಅನುಷ್ಟಾನದಲ್ಲಿ ಅನುಸರಿಸಬೇಕಾದ ನೀತಿ ನಿಯಮಗಳು.

ಗುರಿಗಳಿಗೆ ಅನುಗುಣವಾಗಿ ಮಾ​ತ್ರ ಪ್ರಸ್ತವನೆಗಳನ್ನು ಪರಿಗಣಿಸುವುದು.

ನಿಗದಿಪಡಿಸಿರುವ ಭೌತಿಕ ಗುರಿಯಂತೆ ಮುಂಚಿತವಾಗಿ ಲೀಡ್ ಬ್ಯಾಂಕಿಗಳಿಗೆ ಮಾಹಿತಿ ನೀಡಿ ಅವರ ಸೇವಾ ವ್ಯಾಪ್ತಿಗೆ ಒಳಪಡುವ ಬ್ಯಾಂಕುಗಳಿಗೆ ಗುರಿ ನಿಗದಿಪಡಿಸಲು ತಿಳಿಸುವುದು

ರಾಷ್ಟ್ರೀಕೃತ ಬ್ಯಾಂಕ್, ಷೆಡ್ಯೂಲ್ಡ್ ಬ್ಯಾಂಕ್ ಹಾಗೂ ಗ್ರಾಮೀಣ ಬ್ಯಾಂಕುಗಳೀಗೆ ಅಯ್ಕೆಯಾದ ಫಲಾಪೇಕ್ಷಿಗಳ ಅರ್ಜಿಗಳನ್ನು ಶಿಫಾರಸ್ಸು ಮಾಡತಕ್ಕದ್ದು.

ಬ್ಯಾಂಕ್ಗಳಿಂದ ಸಾಲ ಮಂಜೂರಾಗಿ ಸಹಾಯಧನ ಬಿಡುಗಡೆ ಮಡಲು ಬಂದ ಬೇಡಿಕೆ(Claims) ಪ್ರಸ್ತಾವನೆಗಳನ್ನು ಪರಿಶೀಲಿಸಿ, ನಿಗಮದಿಂದ ಶಿಫಾರಸ್ಸುಗೊಂಡಿದ್ದ, ಮತ್ತು ನಿಯಮಾನುಸಾರ ಬ್ಯಾಂಕ್ ವ್ಯವಸ್ಥಾಪಕರ ಮಂಜೂರಾತಿ ನಿಡಿದ ಮುಖ ಪತ್ರದೊಂದಿಗೆ ಬರುವಂತಹ ಪ್ರಸ್ತಾವನೆಗಳನ್ನು ಮಾತ್ರ ಸಹಾಯಧನ ಬಿಡುಗಡೆಗೆ ಪರಿಗಣಿಸತಕ್ಕದ್ದು.

ಮೇಲಿನಂತೆ ಸ್ವೀಕರಿಸಲಾಗುವ ಕ್ಲೈಮ್ಗದಳನ್ನು ದಿನಾಂಕವಾರು ವಿಂಗಂಡಿಸಿ ಮೊದಲು ಬಂದ ಪ್ರಸ್ತಾವನೆಗಳಿಗೆ ಮೊದಲ ಆಧ್ಯತೆ ಮೇಲೆ ಸಹಾಯಧನ ಬಿಡುಗಡೆಮಾಡತಕ್ಕದು.

ಮಂಜೂರಾತಿ ನೀಡಿದ ಪ್ರತಿಯೊಬ್ಬ ಫಲಾನುಭವಿಗಳಿಗೆ ಪ್ರತ್ಯೇಕವಾಗಿ ಮಂಜೂರಾತಿ ನೀಡುವುದು ಮತ್ತು ಬ್ಯಾಂಕ್ನ ಲ್ಲಿ ಉಳಿತಾಯ ಖಾತೆಯನ್ನು ತೆರೆಯಲು ಸಹಕರಿಸುವುದು.

ಸಹಾಯದನವನ್ನು ಬ್ಯಾಂಕಿಗೆ ಕಳುಹಿಸಿದ 30 ದಿವಸದೊಳಗೆ ಸಹಯಧನವನ್ನು ಫಲಾನುಭವಿಗಳಿಗೆ ಸ್ವತ್ತುಗಳನ್ನು ಸೃಜಿಸಲು ಬಿಡುಗಡೆಯಾಗುವ ಕ್ರಮವಹಿಸುವುದು.

ಫಲಾನುಭವಿಗಳಿಗೆ ನಿಗಮ ಮತ್ತು ಬ್ಯಾಂಕಿನಿಂದ ಕಲ್ಪಿಸಲಾದ ಸೌಲಭ್ಯದಿ ಸೃಜಿಸಿದ ಸ್ವತ್ತಿನ ಛಾಯಚಿತ್ರವನ್ನು ತೆಗೆದು ಅದರ ಪ್ರತಿಯನ್ನು ಜಿಲ್ಲಾ ಕಛೇರಿಯಲ್ಲಿ ನಿರ್ವಹಿಸಲಾಗುವ ಫಲಾನುಭವಿಯ ವೈಯಕ್ತಿಕ ಸಾಲದ ಕಡತದಲ್ಲಿಡುವುದು ಮತ್ತು ಮತ್ತೊಂದು ಪೂರ್ಣ ವಿವರಗಳೊಂದಿಗೆ ನಿಗಮದ ಕೆಂದ್ರಕಛೇರಿಗೆ ಕಳುಹಿಸುವುದು.

ನಿಗಮದಿಂದ ಬ್ಯಾಂಕುಗಳಿಗೆ ಬಿಡುಗಡೆ ಮಾಡಲಾದ ಸಹಾಯಧನವನ್ನು ಸಾಲದ ಹಣದೊಂದಿಗೆ ವಿನಿಯೋಗ ಮಾಡಿದ ಬಗ್ಗೆ ಹಣ ವಿನಿಯೋಗ ಪ್ರಮಾಣಪತ್ರವನ್ನು ಬ್ಯಾಂಕ್ನ ವ್ಯವಸ್ಥಾಪಕರು ಮತ್ತು ಜಿಲ್ಲಾ ವ್ಯವಸ್ಥಾಪಕರು ಚೀಟಿ ಸಹಿಯೊಂದಿಗೆ ಕೆಂದ್ರಕಛೇರಿಗೆ ಸಲ್ಲಿಸುವುದು.

ಪ್ರತಿ ತಿಂಗಳು ಸೌಲಭ್ಯ ಕಲ್ಪಿಸಲಾದ ಮತ್ತು ಸಹಾಯಧನ ಮತ್ತು ಸಾಲದ ಹಣದ ವಿವರಗಳನ್ನು ಒಳಗೊಂಡ ಮಾಹಿತಿvಯನ್ನು ಫಲಾನುಭವಿವಾರು ಮತ್ತು ಉದ್ದೇಶವಾರು ಸಿದ್ದಪಡಿಸಿ ಕೆಂದ್ರಕಛೇರಿಗೆ ಸಲ್ಲಿಸುವುದು.​

ಮೂಲ : ಕರ್ನಾಟಕ ಮಹರ್ಷಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮ ನಿಯಮಿತ

LEAVE A REPLY

Please enter your comment!
Please enter your name here