ಓಂ ಶಾಂತಿ ಶಾಂತಿ ಶಾಂತಿ ಎಂದು ಮೂರು ಸಲ ಪಠಿಸುವುದರ ಮಹತ್ವವೇನು..!!

0
3784
Loading...
Loading...
Loading...

ಶಾಂತಿ ಎಂದರೆ ಪ್ರಶಾಂತತೆಯ ತುತ್ತತುದಿ ಅಥವಾ ಆನಂದದ ಅನುಭೂತಿ ಎಂದು ಹೇಳಬಹುದು  ಇನ್ನು ತ್ರೀವರಂ ಸತ್ಯಂ ಎಂಬುದು ಹಿರಿಯರ ಬಲವಾದ ನಂಬಿಕೆ ಅಂದರೆ ಯಾವುದು ಮೂರು ಬಾರಿ ಹೇಳಲ್ಪಡುತ್ತದೋ ಅದು ಸತ್ಯವಾಗುತ್ತದೆ ಎಂದು ಅರ್ಥ  ಪ್ರಾರ್ಥನೆಯನ್ನು ಮಾಡುವಾಗಿನ ಕೊನೆಯಗಳಿಗೆಯಲ್ಲಿ ಅತಿ ಪ್ರಾಮುಖ್ಯತೆಯನ್ನು ಒಳಗೊಂಡಿರುವುದನ್ನು ಪುನಹ ಪುನಹ ಹೇಳಿ ಪಾವನರಾದರೆ ಅದೇ ಶಾಂತಿಯ ಅನುಸಂಧಾನವೆನಿಸಿಕೊಳ್ಳುವುದು.

ಬದುಕಿನಲ್ಲಿ ಬರುವ ಎಲ್ಲಾ ಅಡಚನೆಗಳು ಅಥವಾ ದುಃಖದ ಅನುಭವಗಳು ಈ ಕೆಳಗಿನ ಮೂರು ತಾಪತ್ರಯಗಳಿಂದಲೇ  ಉಗಮವಾಗುವಂಥವುಗಳಾಗಿವೆ.

This image has an empty alt attribute; its file name is raghvendra-sharma1-1024x536.jpg

ಆಧಿದೈವಿಕ : ಅಗೋಚರವಾಗಿರುವ ದೈವ ಶಕ್ತಿಯ ಪ್ರಭಾವದಿಂದ ಉದ್ಭವಿಸುವ ಶಾಪಗಳು ಉದಾಹರಣೆ ಭೂಕಂಪ, ಪ್ರವಾಹ, ಅನಾವೃಷ್ಟಿ, ಜ್ವಾಲಾಮುಖಿ ಪರ್ವತ, ಬಿರುಗಾಳಿ, ಸುಂಟರಗಾಳಿ ಇತ್ಯಾದಿ.

ಆದಿಭೌತಿಕ : ನಮ್ಮ ಸುತ್ತಮುತ್ತ ಗೋಚರವಾಗುವ ಅಂತಹ ತಾಪಗಳು, ಉದಾಹರಣೆ ಪರಿಸರ ಮಾಲಿನ್ಯ, ಅಪಘಾತ, ಅಪರಾಧ, ಕೌಟುಂಬಿಕ ಒಳಜಗಳ, ನೆರೆಹೊರೆ ಸಂಬಂಧಿಕರ ಕಿರುಕುಳ ಇತ್ಯಾದಿ.

ಆಧ್ಯಾತ್ಮಿಕ : ಶರೀರ ದಿಂದಾಗುವ ರೋಗಗಳು ಮತ್ತು ಮಾನಸಿಕವಾಗಿ ಅನುಭವಿಸುವ ಸಂಕಟಗಳು, ಉದಾಹರಣೆ ಶೀತ, ಉಷ್ಣ, ಕ್ರೋಧ, ಮತ್ಸರ, ಜಿಗುಪ್ಸೆ ಇತ್ಯಾದಿ.

ಇಲ್ಲಿ ನಮೂದಿತ ವಾಗಿರುವ 3 ತಾಪತ್ರಯಗಳ ನಿವಾರಣೆಗಾಗಿ ಪರಮಾತ್ಮನನ್ನು ಕುರಿತು ಅಧಿಷ್ಠಾನದಿಂದ  ಅಂತರಿಕ ಪ್ರಾರ್ಥನೆಯನ್ನು ಮಂಡಿಸುತ್ತವೆ ಸದಾ ಸರ್ವದ ಎಲ್ಲೆಲ್ಲೋ ಶಾಂತಿಗೆ ನೆಲೆಸಲಿ ಎಂದು ಸೂಕ್ತವಾಗಿ ಅನುಸರಿಸಿದಲ್ಲಿ ತಳಮಳ ದೂರವಾಗುವುದು ವಿಷಯ ಪರಿಸ್ಥಿತಿ ಹೋಗುವುದು ಅಷ್ಟೇ ಅಲ್ಲ ಸ್ಥಿರ ಚಿತ್ತ ನೆಲೆನಿಂತು ನಲುಮೆ ಅಧಿಕವಾಗುವುದು.

Loading...

LEAVE A REPLY

Please enter your comment!
Please enter your name here