ಪ್ರತಿದಿನ ಬಾದಾಮಿ ಹಾಲನ್ನು ಕುಡಿದರೆ ಏನಾಗುತ್ತದೆ ಗೊತ್ತಾ

0
6199

ನಾವು ಮಕ್ಕಳಾಗಿದ್ದಾಗ ಹಾಲು ಕೊಟ್ಟರೆ ಸಾಕು ಕಟಕಟನೆ ಕುಡಿದು ಬಿಡುತ್ತಿದ್ದೆವು,  ನಮಗೆ ಹಾಲು ಎಂದರೆ ಅಷ್ಟು ಇಷ್ಟವಾಗುತ್ತಿತ್ತು, ಆದರೆ ಇಂದಿನ ಮಕ್ಕಳಿಗೆ ಅದೇನು ಹಾಲು ಎಂದರೆ ಅಲರ್ಜಿ ಹಾಲಿಗೆ  ಇತರ ಪೇಯಗಳನ್ನು ಮಿಶ್ರ ಮಾಡಿ ಕುಡಿಯಲು ಕೊಡಬೇಕು, ಈಗಲೂ ಕೆಲವರು ಹಾಲನ್ನು ಕುಡಿಯಲು ಚಿಂತಿಸುತ್ತಾರೆ ಕಾರಣ ಹಾಲು ಹೆಚ್ಚಿನ ಕಬ್ಬಿನ ಅಂಶವನ್ನು ಹೊಂದಿರುವುದರಿಂದ ದೇಹದಲ್ಲಿ ಬೊಜ್ಜು ಹೆಚ್ಚುತ್ತದೆ ಎಂದು, ಅಂತವರಿಗೆ ಇಂದು ಒಂದು ಸುಲಭ ಸಲಹೆಯನ್ನು ಕೊಡುತ್ತೇವೆ.

ಪ್ರತಿದಿನ ಹಾಲಿನಲ್ಲಿ ಬಾದಾಮಿ ಪುಡಿಯನ್ನು ಮಿಶ್ರ ಮಾಡಿ ಕುಡಿಯುವುದರಿಂದ ಅದರಲ್ಲಿ ಬೇಡವಾದ  ಕೊಲೆಸ್ಟ್ರಾಲ್ ಇರುವುದಿಲ್ಲ ಹಾಗಾಗಿ ಧಾರಾಳವಾಗಿ ಬಾದಾಮಿ ಮಿಶ್ರಿತ ಹಾಲನ್ನು ಕುಡಿಯಬಹುದು.

ಇನ್ನು ಬಾದಾಮಿಯಲ್ಲಿ ನಿಮಗೆ ಅಧಿಕವಾದ ಪೋಷಕಾಂಶಗಳು ಸಿಗುತ್ತದೆ ವಿಟಮಿನ್ ಎ ವಿಟಮಿನ್ ಬಿ ಮತ್ತು ಕ್ಯಾಲ್ಸಿಯಂನಂತಹ ಪೋಷಕಾಂಶಗಳು ಹೇರಳವಾಗಿದ್ದು ಕಣ್ಣಿನ ಸಮಸ್ಯೆ ಚರ್ಮದ ಸಮಸ್ಯೆ ಹಾಗೂ ಕೂದಲುಗಳ ಬೆಳವಣಿಗೆಗೆ ಉತ್ತಮ ಸಹಾಯಕಾರಿ.

ಬ್ಲಡ್ ಪ್ರೆಶರ್ ರಕ್ತದೊತ್ತಡ ಸಮಸ್ಯೆ ಇದ್ದರೂ ಬಾದಾಮಿ ಹಾಲನ್ನು ಕುಡಿಯಲೇ ಬೇಕು,  ದೇಹದಲ್ಲಿ ರಕ್ತದ ಪರಿಚಲನೆ ಸರಿಯಾಗಿ ನಡೆಯದೇ ಇದ್ದಾಗ ರಕ್ತದೊತ್ತಡ ಹೆಚ್ಚಾಗಿ ಸಮಸ್ಯೆ ಉಂಟಾಗುತ್ತದೆ ಆದರೆ ಬಾದಾಮಿ ಹಾಲನ್ನು ಪ್ರತಿನಿತ್ಯ ಕುಡಿಯುವ ಅಭ್ಯಾಸವಿದ್ದವರಿಗೆ ಈ ಸಮಸ್ಯೆ ಕಾಡುವುದಿಲ್ಲ.

LEAVE A REPLY

Please enter your comment!
Please enter your name here