ಮಾನವ ದೇಹಕ್ಕೆ ಅಮೃತದಂತೆ ಕೆಲಸ ಮಾಡುವ ಮಸಾಲ ಮಜ್ಜಿಗೆಯ ಉಪಯೋಗಗಳು..!!

0
1423

ಬಿಸಿಲಿನಲ್ಲಿ ಓಡಾಡಿ ಮನೆಗೆ ಬಂದು ಒಂದು ಲೋಟ ಮಜ್ಜಿಗೆ ಕುಡಿದರೆ ಆಹಾ ಎಂತ ಆನಂದ ಅಲ್ಲವೇ ಅದರಲ್ಲೂ ಮಸಾಲ ಮಜ್ಜಿಗೆ ಅಂತೂ ಇನ್ನು ಹೆಚ್ಚಿನ ಹಿತವನ್ನೇ ನೀಡುತ್ತದೆ, ಹಾಗು ನಮ್ಮ ಹಿರಿಯಲು ಸಹ ಮಜ್ಜಿಗೆಯನ್ನು ದಣಿದು ಬಂದವರಿಗೆ ಮಜ್ಜಿಗೆಯನ್ನು ಮರೆಯದೆ ನೀಡುತ್ತಿದ್ದರು, ಈ ರೀತಿ ಮಜ್ಜಿಗೆ ಕುಡಿಯುವುದರಿಂದ ಬಾಯಾರಿಕೆ ನೀಗುವುದಲ್ಲದೆ ಬೇರೆ ಯಾವ ಅರೋಗ್ಯ ಲಾಭಗಳಿವೆ ಅಂತ ನಿಮಗೆ ಗೊತ್ತಾದ್ರೆ ನೀವು ಮರೆಯದೆ ಪ್ರತಿದಿನ ಮಜ್ಜಿಗೆ ಕುಡಿಯುವ ಅಭಯಸವನ್ನ ಮಾಡಿಕೊಳ್ಳುತ್ತೀರಾ ಹಾಗು ಬೇರೆಯವರಿಗೂ ಮಜ್ಜಿಗೆ ನೀಡುತ್ತೀರಾ.

ಅರ್ಧ ಚಮಚ ಶುಂಠಿ ರಸ ಹಾಗೂ ಜೀರಿಗೆ ಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಆ್ಯಸಿಡಿಟಿ, ಮಲಬದ್ಧತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ.

ಅಜೀರ್ಣ ಅಥವಾ ಒಗ್ಗದ ಆಹಾರ ಸೇವಿಸಿದ ಬಳಿಕ ಕಾಡುವ ಅತಿಸಾರ, ಆಮ್ಲೀಯತೆ ಮತ್ತು ನೀರಿನಂಶದ ಕೊರತೆಯನ್ನು ನಿವಾರಿಸಬಹುದು.

ಮಸಾಲೆಭರಿತ ಊಟದ ನಂತರ ಮಜ್ಜಿಗೆ ಸೇವಿಸುವುದರಿಂದ ಆಹಾರವು ಜೀರ್ಣವಾಗುವಂತೆ ಮಾಡಲು ಮಜ್ಜಿಗೆಯು ಬಹಳಷ್ಟು ಸಹಕಾರಿಯಾಗಿದೆ.

ಮಜ್ಜಿಗೆ ಸೇವಿಸುವುದರಿಂದ ದೇಹಕ್ಕೆ ಅಗತ್ಯವಾದ ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳನ್ನೂ, ಪ್ರೋಟೀನ್ ಮತ್ತು ಪೊಟ್ಯಾಷಿಯಂ ನಂತಹ ಖನಿಜಾಂಶಗಳನ್ನು ಒದಗಿಸುತ್ತದೆ.

ಮಜ್ಜಿಗೆಗೆ ಸೈಂಧವ ಉಪ್ಪು ಮತ್ತು ಹಸಿ ಶುಂಠಿಯ ರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here