ಈ ಚಾಲಕಿ ಕಳ್ಳ ಆಭರಣ ಕದಿಯುತ್ತಿದ್ದ ರೀತಿಯೇ ನಿಮಗೆ ಆಶ್ಚರ್ಯ ಮೂಡಿಸುತ್ತದೆ..!!

0
201

ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಕಳ್ಳರು ಬಾಗಿಲು ಹೊಡೆದು ಅಥವಾ ಕಿಟಕಿಗಳ ಮುಖಾಂತರ ಇನ್ನು ಕೆಲವೊಮ್ಮೆ ಗೋಡೆಗಳನ್ನು ಒಡೆದು ಮನೆಗೆ ನುಗ್ಗಿ ಕಳ್ಳತನ ಮಾಡುವುದರ ಬಗ್ಗೆ ನಾವು ತಿಳಿದಿದ್ದೇವೆ, ಆದರೆ ಈ ಕಳ್ಳ ಬಹಳ ಚಾಲಾಕಿ, ಈತನು ಮನೆಗಳಿಗೆ ಕನ್ನ ಹಾಕುವುದರ ಐಡಿಯಾ ಕೇಳಿದರೆ ನಿಮಗೂ ಒಂದು ಕ್ಷಣ ಅಬ್ಬಾ ಎನಿಸುತ್ತದೆ.

ದೊಡ್ಡ ದೊಡ್ಡ ಅಪಾರ್ಟ್ಮೆಂಟ್ ಗಳಿಗೆ ಬಾಡಿಗೆ ಮನೆ ಕೇಳಿಕೊಂಡು ಹೋಗುತ್ತಿದ್ದನು ನಂತರ ಆ ಮನೆಯ ಕೀಗಳನ್ನು ತನ್ನ ಮೊಬೈಲ್ ನಲ್ಲಿ ಫೋಟೋ ತೆಗೆದುಕೊಂಡು, ಬರುತ್ತಿದ್ದನು ಆ ಫೋಟೋ ನೋಡಿಕೊಂಡು ನಕಲಿ ಕೀ ಗಳನ್ನು ತಯಾರಿಸಿ ಇಟ್ಟುಕೊಳ್ಳುತ್ತಿದ್ದರು, ಈತ ನೋಡಿಕೊಂಡು ಬಂದ ಕಾಲಿ ಮನೆಗಳಿಗೆ ಬೇರೆಯವರು ಬಾಡಿಗೆಗೆ ಬಂದ ನಂತರ ಯಾರು ಇಲ್ಲದ ಸಮಯ ನೋಡಿ ನಕಲಿ ಕೀ ಬಳಸಿ ದರೋಡೆ ಮಾಡುತ್ತಿದ್ದನು.

ಈ ಕುಖ್ಯಾತ ಮನೆಗಳ ಹೆಸರು ಬಾಲಾಜಿ ಪ್ರಕಾಶ್, ಈತ ದೋಚಿದ್ದು ಬರೋಬರಿ 40 ಲಕ್ಷ ಬೆಳೆ ಬಾಳುವ ಒಂದು ಕಾಲು ಕೆಜಿ ಚಿನ್ನ, ಈತನ ಟಾರ್ಗೆಟ್ ಏರಿಯಾಗಳು ಕೋರಮಂಗಲ, ಮೈಕೋಲೇಔಟ್ ಹಾಗೂ ಗುಂಟೆ ಪಾಳ್ಯ, ಸದ್ಯ ಪೊಲೀಸ್ ಅಧಿಕಾರಿಗಳು ಈತನನ್ನು ಬಂಧಿಸಿದ್ದು ಚಿನ್ನಾಭರಣಗಳ ಜೊತೆಯಲ್ಲಿ ಹಲವು ನಕಲಿ ಕೀ ಗಳು ಮತ್ತು ಒಂದು ಕೀ ಮೇಕರ್ ವಶಕ್ಕೆ ಪಡೆದಿದ್ದಾರೆ.

ಈ ಮಾಹಿತಿಯು ನಿಮಗೆ ಇಷ್ಟವಾಗಿದ್ದರೆ ಮರೆಯದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿ ಕೊಳ್ಳಿ, ಒಳ್ಳೆಯ ವಿಷಯಗಳನ್ನು ಹಂಚಿಕೊಳ್ಳುವುದು ಸಹ ಒಂದು ಒಳ್ಳೆಯ ವಿಷಯ, ಹಾಗೆಯೇ ಮರೆಯದೆ ನಮ್ಮ ಪೇಜ್ ಅನ್ನು ಲೈಕ್ ಮಾಡಿ ಹೆಚ್ಚಿನ ಅಪ್ಡೇಟ್ ಗಳನ್ನು ಪ್ರತಿದಿನ ಪಡೆಯಿರಿ.

LEAVE A REPLY

Please enter your comment!
Please enter your name here