ಪ್ರಾಣಿಗಳನ್ನು ಸಾಯಿಸಿದರೆ ಅವುಗಳಿಗೆ ದುಃಖವಾಗುತ್ತದೆಯೇ..?

0
10
Loading...
Loading...
Loading...

ದಿನನಿತ್ಯದ ಜೀವನದಲ್ಲಿ ಬೆಳಗ್ಗೆ ಇಂದ ಸಂಜೆಯ ವರೆಗೂ ಬಹಳಷ್ಟು ಕೆಲಸಗಳನ್ನ ಮಾಡಿರುತ್ತೇವೆ, ಕೆಲವುಗಳ ಅವಶ್ಯಕತೆ ಎಷ್ಟಿದೆ ಎಂಬುದರ ಬಗ್ಗೆ ಯೋಚನೆ ಸಹ ಮಾಡಿರುವುದಿಲ್ಲ, ಅದರಂತೆ ಮನಸ್ಸಿನಲ್ಲಿ ಸಾವಿರ ರೀತಿಯ ಆಲೋಚನೆಗಳು ಬಂದಿರುತ್ತವೆ, ಈ ಯೋಚನೆಗಳು ಬರುವುದು ತಪ್ಪಲ್ಲ ಕಾರಣ ಯೋಚನೆಗಳಿಂದಲೇ ಮನುಷ್ಯನಿಗೆ ಹಲವು ಪ್ರೆಶ್ನೆಗಳು ಹಾಗು ಉತ್ತರಗಳು ಹುಟ್ಟುವುದು, ಅದರಂತೆ ನಾವು ದಿನನಿತ್ಯ ಮಾಡುವ ಕೆಲಸಗಳ ಆಧಾರಿತ ಕೆಲವು ಪ್ರೆಶ್ನೆಗಳಿಗೆ ಉತ್ತರ ಹುಡುಕುವ ಕೆಲಸ ಮಾಡೋಣ.

ಮೊದಲನೆಯದ್ದಾಗಿ ಪ್ರಾಣಿಗಳನ್ನು ಸಾಯಿಸಿದರೆ ಅವುಗಳಿಗೆ ದುಃಖವಾಗುತ್ತದೆಯೇ?.

ಪ್ರಾಣಿಗಳಿಗೆ ಉಂಟಾಗುವುದಿಲ್ಲ, ಅವುಗಳನ್ನು ಕೊಂದು ತಿಂದವರಿಗೇ ಅಪಾರವಾದ ದುಃಖವುಂಟಾಗುತ್ತದೆ. ಪ್ರಾಣಿಗಳಿಗೆ ಶರೀರದೊಂದಿಗೆ ಸಾಮೂಹಿಕ ಆತ್ಮಚೈತನ್ಯವಿರುತ್ತದೆ, ಅವುಗಳಿಗೆ ಮನಸ್ಸು ಎನ್ನುವುದು ಇರುವುದಿಲ್ಲವಾದ್ದರಿಂದ, ಸಾಯುತ್ತಿರುವಾಗ ದುಃಖದ ಬದಲು ಸಂಕಟ ಮಾತ್ರವಿರುತ್ತದೆ.

ಮನುಷ್ಯನಿಗೆ ಮಾತ್ರ ಶರೀರಕ್ಕೆ, ಆತ್ಮಕ್ಕೂ ಮಧ್ಯೆ ಅನೇಕಾನೇಕ ಕರ್ಮಗಳೊಂದಿಗೆ ಕೂಡಿದ ಮನಸ್ಸು ಇರುತ್ತದೆ, ಆದ್ದರಿಂದ ಪ್ರಾಣಿಗಳನ್ನು ಸಾಯಿಸಿದ ಕರ್ಮಫಲಿತದೊಂದಿಗೆ ಕೂಡಿದ ದುಃಖ ಆತನಿಗೆ ಇರುತ್ತದೆ. ಮಾನವ ಜೀವನದಲ್ಲಿ ದುಃಖ ಎಂಬುದು ಇರಬಾರದೆಂದರೆ ಮೂಕ ಜೀವಿಗಳನ್ನು ಸಾಯಿಸುವುದನ್ನು ಬಿಡಬೇಕು.

ಷರತ್ತುಗಳಿಲ್ಲದ ಪ್ರೇಮ ಎಂದರೇನು?.

ಈ ಪ್ರಪಂಚದಲ್ಲಿ ಇಲ್ಲದಿರುವುದು ಎರಡು : ಒಂದು ಪ್ರೇಮ ಎರಡು ಸಾವು ಇರುವುದು ಒಂದೇ ಅದೇ ಮೈತ್ರೀತತ್ವ.

ಬೃಹದಾರಣ್ಯಕೋಪನಿಷತ್ತುನಲ್ಲಿ ಯಾಜ್ಞ್ಯವಲ್ಕನು ತನ್ನ ಹೆಂಡತಿಯಾದ ಮೈತ್ರೇಯಳೊಂದಿಗೆ ಹೇಳುತ್ತಾನೆ, ಈ ಪ್ರಪಂಚದಲ್ಲಿ ಪ್ರೇಮವೆನ್ನುವುದು ಎಲ್ಲೂ ಇಲ್ಲಾ. ಒಬ್ಬಳು ಸ್ತ್ರೀ, ಪುರುಷನನ್ನು ತನಗಾಗಿಯೇ ವಿವಾಹ ಮಾಡಿಕೊಳ್ಳುತ್ತಾಳೆ, ಹಾಗೆಯೇ ಪುರುಷನೂ ಸಹ ಸ್ತ್ರೀಯನ್ನು ತನಗೋಸ್ಕರವೇ ವಿವಾಹವಾಗುತ್ತಾನೆ, ಆ ಇಬ್ಬರೂ ಸೇರಿ ತಮಗಾಗಿ ಒಂದು ಮಗುವಿಗೆ ಜನ್ಮ ನೀಡುತ್ತಾರೆ. ಇದೆಲ್ಲವೂ ಕೂಡಾ ಯಾವ ಷರತ್ತುಗಳೂ ಇಲ್ಲದೆ ಮೈತ್ರೀತತ್ವದೊಂದಿಗೆ ಕೂಡಿಕೊಂಡಿದ್ದರೆ, ಎಲ್ಲೂ ಒಬ್ಬರ ಮೇಲೆ ಒಬ್ಬರ ದಬ್ಬಾಳಿಕೆ ಇರುವುದಿಲ್ಲ, ಒಬ್ಬರೊಂದಿಗೆ ಒಬ್ಬರು ಪರಸ್ಪರ ಕಲಿತುಕೊಳ್ಳುವುದೇ ಇರುತ್ತದೆ.

ಅಜ್ಞಾನ ಮತ್ತು ಸುಜ್ಞಾನಗಳ ಮಧ್ಯೆ ಬೇಧವನ್ನು ಹೇಗೆ ತಿಳಿದುಕೊಳ್ಳಬೇಕು?.

ಒಂದು ವಸ್ತುವನ್ನು ಕುರಿತಾದ ಯಥಾರ್ಥ ನಮಗೆ ತಿಳಿದಿರುವುದು ಸುಜ್ಞಾನ ಆ ವಸ್ತುವನ್ನು ಕುರಿತಾದ ಯಥಾರ್ಥ ನಮಗೆ ತಿಳಿಯದಿರುವುದು ಅಜ್ಞಾನ.

ಸುಜ್ಞಾನದಿಂದ ನಮಗೆ ದುಃಖ ವಿಮುಕ್ತಿ ಲಭಿಸಿದರೆ, ಅಜ್ಞಾನದಿಂದ ನಮಗೆ ದುಃಖ ಉಂಟಾಗುತ್ತದೆ.

ಅದಕ್ಕೆ ಇಲ್ಲದಿದ್ದನ್ನು ಬೇಡಬಾರದು, ಇರುವುದನ್ನು ಬೇಡವೆನ್ನಬಾರದು ಬಂದರೆ ಬಂದಿತು ಎಂದು ಸಂಭ್ರಮ ಪಡಬಾರದು ಹೋದರೆ ಹೋಯಿತು ಎಂದು ಕುಗ್ಗಬಾರದು ಎಂದಿದ್ದಾರೆ ನಮ್ಮ ಹಿರಿಯರು, ಅವರು ಹೇಳಿದಂತೆಯೇ ನಾನು ಜೀವನದ ಒಂದು ನಿಜತತ್ವವನ್ನು ತಿಳಿದುಕೊಂಡು ಸುಜ್ಞಾನ ಪೂರ್ವಕವಾದ ಅರಿವಿನೊಂದಿಗೆ ಜೀವಿಸುತ್ತಾ ಹಾಯಾಗಿದ್ದೇನೆ.

Loading...

LEAVE A REPLY

Please enter your comment!
Please enter your name here