ಯುವಕರು ಪ್ರತಿಯೊಬ್ಬರೂ ತಪ್ಪದೇ ನೋಡಬೇಕಾದ ವಿಡಿಯೋ.

0
13665

ತುರಿಕೆ, ಕಜ್ಜಿ ಸಮಸ್ಯೆ ಇದ್ದಾಗ ಬಿಳಿ ಈರುಳ್ಳಿಯನ್ನು ಜಜ್ಜಿ ರಸವನ್ನು ತೆಗೆದು, ಸ್ವಲ್ಪ ಅರಿಶಿನ ಪುಡಿಯೊಂದಿಗೆ ಕಲೆಸಿ ಲೇಪಿಸುತ್ತಿರಬೇಕು.

ತುಳಸಿಯ ರಸ, ನಿಂಬೆ ರಸ ಮತ್ತು ಈರುಳ್ಳಿಯ ರಸವನ್ನು ಸಮಪ್ರಮಾಣದಲ್ಲಿ ತೆಗೆದುಕೊಂಡು ಮಿಶ್ರಣಮಾಡಿ ದೇಹಕ್ಕೆ ಲೇಪಿಸಿಕೊಂಡು 1 ಘಂಟೆಯ ನಂತರ ಸ್ನಾನ ಮಾಡಿದರೆ ಚರ್ಮದ ಸೊಂಕುಗಳು ಗುಣವಾಗುತ್ತದೆ, ಚರ್ಮದ ಕಾಂತಿ ಹೆಚ್ಚುತ್ತದೆ, ತೊನ್ನು ರೋಗ ಇದ್ದಾಗ ಈರುಳ್ಳಿಯ ಬೀಜವನ್ನು ಅರೆದು ಹಚ್ಚಬೇಕು.

ರಕ್ತದ ಶುದ್ದತೆ ಮತ್ತು ಚರ್ಮರೋಗಗಳ ನಿವಾರಣೆಗೆ 1 ಈರುಳ್ಳಿಯ ರಸ ಮತ್ತು 2 ಚಮಚದಷ್ಟು ಹುರಿದು ಕುಟ್ಟಿ ಪುಡಿಮಾಡಿದ ಜೀರಿಗೆಯನ್ನು ಸೇರಿಸಿ ಪ್ರತಿದಿನವೂ ಅರ್ಧರ್ಧ ಚಮಚದಷ್ಟು ಸೇವಿಸುತ್ತಿರಬೇಕು.

ಈರುಳ್ಳಿಯನ್ನು ಸಣ್ಣಗೆ ಕತ್ತರಿಸಿ ತುಪ್ಪದಲ್ಲಿ ಹುರಿದು ಸ್ವಲ್ಪ ಸ್ವಲ್ಪ ಪ್ರಮಾಣದಲ್ಲಿ ಸೇವಿಸುತ್ತಿದ್ದರೆ ಸೋರಿಯಾಸಿಸ್ ಕಾಯಿಲೆಯಿಂದ ನರಳುತ್ತಿರುವವರಿಗೆ ಉಪಯೋಗವಾಗುತ್ತದೆ.

ತಲೆನೋವು ಇದ್ದಾಗ ಈರುಳ್ಳಿಯನ್ನು ಅರೆದು ಹಣೆಗೆ ಲೇಪಿಸಬೇಕು, ಅರೆತಲೆನೋವು ನಿವಾರಣೆಗೆ ಈರುಳ್ಳಿಯನ್ನು ಜಜ್ಜಿ ರಸ ತೆಗೆದು ಅದಕ್ಕೆ ಸ್ವಲ್ಪ ಉಪ್ಪು ಸೇರಿಸಿ ಮೂಗಿನ ಹೊಳ್ಳೆಗಳಿಗೆ 1-2 ಹನಿ ಹಾಕಬೇಕು.

ತಲೆಯಲ್ಲಿರುವ ಹೇನುಗಳ ಹಾವಳಿ ತಪ್ಪಿಸಲು ರಾತ್ರಿ ಮಲಗುವ ಮುನ್ನ ಈರುಳ್ಳಿಯ ರಸವನ್ನು ತಲೆ ಕೂದಲಿನ ಬುಡಕ್ಕೆ ಚೆನ್ನಾಗಿ ಹಚ್ಚಿಕೊಂಡು ಮರುದಿನ ತೊಳೆಯಬೇಕು.

1 ಚಮಚ ಕಡ್ಲೆಹಿಟ್ಟು, 1 ಚಮಚ ಈರುಳ್ಳಿಯ ರಸ, ಸ್ವಲ್ಪ ಹುಣಸೆ ಹಣ್ಣಿನ ರಸ, ಅರ್ಧ ಚಮಚ ಮುಲ್ತಾನಿ ಮಿಟ್ಟಿ ಸೇರಿಸಿ ಕಲೆಸಿ ತಲೆಗೆ ಹಚ್ಚಿಕೊಂಡು ಅರ್ಧ ಗಂಟೆಯ ನಂತರ ಸ್ನಾನ ಮಾಡಿದರೆ ತಲೆ ಕೂದಲು ಸೊಂಪಾಗಿ ಬೆಳೆಯುತ್ತದೆ.

ಈರುಳ್ಳಿಯನ್ನು ಬಿಲ್ಲೆಗಳನ್ನಾಗಿ ಕತ್ತರಿಸಿಕೊಂಡು ತಲೆ ಕೂದಲು ಇಲ್ಲದಿರುವ ಜಾಗದಲ್ಲಿ ತಿಕ್ಕಬೇಕು ಮತ್ತು ಈರುಳ್ಳಿಯ ರಸವನ್ನು ತಲೆಯ ಬುಡಕ್ಕೆ ಹಚ್ಚಿಕೊಂಡು ಸ್ವಲ್ಪ ಸಮಯದವರೆವಿಗೆ ತಿಕ್ಕಬೇಕು ಮರುದಿನ ತಲೆಯನ್ನು ತೊಳೆದುಕೊಳ್ಳಬೇಕು ಇದರಿಂದ ತಲೆ ಕೂದಲು ಉದುರುವ ಸಮಸ್ಯೆ ಮತ್ತು ಬಕ್ಕತಲೆ ನಿವಾರಣೆಯಾಗುತ್ತದೆ ಇದನ್ನು ವಾರದಲ್ಲಿ 1-2 ಬಾರಿ ಮಾಡಿದರೆ ತಲೆ ಕೂದಲು ಚೆನ್ನಾಗಿ ಬೆಳೆಯುತ್ತದೆ.

LEAVE A REPLY

Please enter your comment!
Please enter your name here